ಕೋಲ್ಕತಾ: ಕೋವಿಡ್-19 ಲಾಕ್‌ಡೌನ್ ನಡುವೆಯೂ ದೊಡ್ಡ ಹೂವಿನ ಮಾರುಕಟ್ಟೆ ತೆರೆಯಲು ಅನುಮತಿ ನೀಡುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಿರ್ಧಾರಕ್ಕೆ ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ವಾಗ್ದಾಳಿ ನಡೆಸಿದ್ದು, ಸಾರ್ವಜನಿಕ ಸುರಕ್ಷತೆಗೆ ಅಪಾಯವನ್ನುಂಟು ಮಾಡುತ್ತದೆ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ.
ಹೂವಿನ ಮಾರುಕಟ್ಟೆಯನ್ನು ತೆರೆಯುವುದರಿಂದ ರಾಜ್ಯವು ಕೊರೊನಾ ವಿರುದ್ದ ಹೋರಾಡುತ್ತಿಲ್ಲ ಎಂಬ "ತಪ್ಪು ಸಂದೇಶವನ್ನು" ಕಳುಹಿಸುತ್ತದೆ ಎಂದು ಹೇಳಿದರು.
ಶನಿವಾರ ಟ್ವೀಟ್ ಮಾಡಿದ ಅವರು "ಹೌರಾ ಹೂವಿನ ಮಾರುಕಟ್ಟೆಯನ್ನು ತೆರೆಯುವ ಮೂಲಕ ಸಿಎಂ ಸಾರ್ವಜನಿಕ ಸುರಕ್ಷತೆಗೆ ಅಪಾಯವನ್ನುಂಟು ಮಾಡುತ್ತಿದ್ದಾರೆ. ಇದು ಪಶ್ಚಿಮ ಬಂಗಾಳದ ಅಪಾಯಕಾರಿ ಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ನಾನು ಇದನ್ನು ಹೇಳಿದರೆ, ರಾಜಕೀಯ ಮಾಡುವ ಆರೋಪ ಬರುತ್ತದೆ. ಆದ್ದರಿಂದ ನೀವೆ ಹೇಳಿ ಎಂದು ಟ್ವೀಟ್ ಮಾಡಿದ್ದಾರೆ.
ಹಿಂದಿನ ದಿನದ ಮತ್ತೊಂದು ಟ್ವೀಟ್‌ನಲ್ಲಿ, ಜನರು "ಹೂವಿನ ಮಾರುಕಟ್ಟೆಗಳಿಗೆ ಹಾಜರಾಗುವಂತಹ ವಿಷಯಗಳ ಬಗ್ಗೆ ತಮ್ಮ ಸಿಎಂ ಅನ್ನು ಧಿಕ್ಕರಿಸುವಂತೆ" ಕೇಳಿಕೊಂಡರು. ಸುರಕ್ಷತೆಯ ದೃಷ್ಟಿಯಿಂದ ಎಲ್ಲರೂ ಮನೆಯಲ್ಲಿಯೇ ಇರುವಂತೆ ತಿಳಿಸಿದ್ದಾರೆ.