ETV Bharat / bharat

GST ವಂಚಕರ ಬಂಧನದ ಅಧಿಕಾರಕ್ಕೆ ಸುಪ್ರೀಂ ಹೇಳಿದ್ದೇನು?

author img

By

Published : May 30, 2019, 3:02 PM IST

ಕೇಂದ್ರ ಸರಕು ಮತ್ತು ಸೇವಾ ತೆರಿಗೆ (ಸಿಜಿಎಸ್​ಟಿ) ಅಡಿಯಲ್ಲಿ ತೆರಿಗೆ ವಂಚಕರನ್ನು ಬಂಧಿಸುವ ಟ್ಯಾಕ್ಸ್ ಅಧಿಕಾರಿಗಳ ಅಧಿಕಾರವನ್ನು ಸುಪ್ರೀಂಕೋರ್ಟ್​ನಲ್ಲಿ ಪ್ರಶ್ನಿಸಲಾಗಿತ್ತು.

ಸಾಂದರ್ಭಿಕ ಚಿತ್ರ

ನವದೆಹಲಿ: ಜಿಎಸ್​ಟಿ ಪದ್ಧತಿಯಡಿ ತೆರಿಗೆ ವಂಚಿಸುವವರನ್ನು ಬಂಧಿಸುವ ತೆರಿಗೆ ಅಧಿಕಾರಿಗಳ ಅಧಿಕಾರವನ್ನು ಪರಿಶೀಲಿಸುವುದಾಗಿ ಸುಪ್ರೀಂಕೋರ್ಟ್​ ಹೇಳಿದೆ.

ಕೇಂದ್ರ ಸರಕು ಮತ್ತು ಸೇವಾ ತೆರಿಗೆ (ಸಿಜಿಎಸ್​ಟಿ) ಅಡಿಯಲ್ಲಿ ತೆರಿಗೆ ವಂಚಕರನ್ನು ಬಂಧಿಸುವ ಟ್ಯಾಕ್ಸ್ ಅಧಿಕಾರಿಗಳ ಅಧಿಕಾರವನ್ನು ಸುಪ್ರೀಂಕೋರ್ಟ್​ನಲ್ಲಿ ಪ್ರಶ್ನಿಸಲಾಗಿತ್ತು.
ಈ ಸಂಬಂಧ ಮುಖ್ಯ ನ್ಯಾಯಮೂರ್ತಿ ರಂಜನ್ ಗಗೋಯ್​ ಹಾಗೂ ನ್ಯಾಯಮೂರ್ತಿ ಅನಿರುದ್ಧ ಬೋಸ್ ಅವರಿದ್ದ ನ್ಯಾಯ ಪೀಠ, ಕೇಂದ್ರ ಸರ್ಕಾರಕ್ಕೆ ವಿವರಣೆ ಕೋರಿ ನೋಟಿಸ್ ಜಾರಿಗೊಳಿಸಿದೆ.

ಜಿಎಸ್​ಟಿ ವಂಚಕರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡುವುದಕ್ಕೆ ಸಂಬಂಧಿಸಿದ ನಾನಾ ಹೈಕೋರ್ಟ್​ಗಳು ವಿಭಿನ್ನ ದೃಷ್ಟಿಕೋನವನ್ನು ಹೊಂದಿವೆ. ಆದರಿಂದ ಈ ಕುರಿತು ಪ್ರಶ್ನೆಯನ್ನು ಇತ್ಯರ್ಥಪಡಿಸಬೇಕಾದ ಅಗತ್ಯ ಇದೆ ಎಂದು ಪೀಠವು ತಿಳಿಸಿದೆ.

ಜಿಎಸ್​ಟಿ ವಂಚನೆ ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ಮಂಜೂರು ಮಾಡುವುದಕ್ಕೆ ಸಂಬಂಧಿಸಿದಂತೆ ತನ್ನ ಈ ಹಿಂದಿನ ಆದೇಶವನ್ನು ಪರಿಗಣಿಸುವಂತೆ ಎಲ್ಲ ಹೈಕೋರ್ಟ್​ಗಳಿಗೆ ಸುಪ್ರೀಂಕೋರ್ಟ್​ ಹೇಳಿದೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.