ETV Bharat / bharat

ಉದ್ಯೋಗಿಗಳಿಗೆ ಪೂರ್ಣ ವೇತನ ಪಾವತಿ ವಿಚಾರ: ಕಂಪನಿ ಮಾಲೀಕರಿಗೆ ಸುಪ್ರೀಂ ರಿಲೀಫ್‌

author img

By

Published : Jun 12, 2020, 12:48 PM IST

Updated : Jun 12, 2020, 3:05 PM IST

ಉದ್ಯೋಗಿಗಳಿಗೆ ಲಾಕ್​ಡೌನ್ ಸಮಯದ ಪೂರ್ಣ ವೇತನ ಪಾವತಿ ನೀಡುವ ಕುರಿತ ಅರ್ಜಿ ವಿಚಾರಣೆ ನಡೆಸಿರುವ ಸುಪ್ರೀಂಕೋರ್ಟ್, ಪೂರ್ಣ ವೇತನ ನೀಡುವಂತೆ ಕಂಪನಿ ಮಾಲೀಕರ ಮೇಲೆ ಕೇಂದ್ರ ಸರ್ಕಾರ ಒತ್ತಡ ಹೇರುವಂತಿಲ್ಲ ಎಂದು ಸೂಚಿಸಿದೆ.

Supreme Court
ಸುಪ್ರೀಂ ಕೋರ್ಟ್

ನವದೆಹಲಿ: ಉದ್ಯೋಗಿಗಳಿಗೆ ಲಾಕ್​ಡೌನ್ ಸಮಯದ ಪೂರ್ಣ ವೇತನ ಪಾವತಿ ವಿಚಾರವಾಗಿ ಸುಪ್ರೀಂಕೋರ್ಟ್,​ ಕಂಪನಿ ಮಾಲೀಕರಿಗೆ ಬಿಗ್​ ರಿಲೀಫ್​ ನೀಡಿದೆ.

ಕೊರೊನಾ ಲಾಕ್‌ಡೌನ್‌ನ 54 ದಿನಗಳ ಅವಧಿಯಲ್ಲಿ ಉದ್ಯೋಗಿಗಳಿಗೆ, ಕಾರ್ಮಿಕರಿಗೆ ಪೂರ್ಣ ವೇತನ ನೀಡುವಂತೆ ಕೇಂದ್ರ ಗೃಹ ಸಚಿವಾಲಯ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ಹಲವಾರು ಖಾಸಗಿ ಕಂಪನಿಗಳು, ಕಾರ್ಖಾನೆಗಳು ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದವು.

ಇಂದು ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದಲ್ಲಿ ಈ ಅರ್ಜಿಗಳ ವಿಚಾರಣೆ ನಡೆದಿದ್ದು, ಪೂರ್ಣ ವೇತನ ನೀಡುವಂತೆ ಕಂಪನಿ ಮಾಲೀಕರ ಮೇಲೆ ಸರ್ಕಾರ ಒತ್ತಡ ಹೇರುವಂತಿಲ್ಲ. ಈ ಕುರಿತು ಕೇಂದ್ರ ಸರ್ಕಾರ 4 ವಾರಗಳೊಳಗಾಗಿ ಪ್ರತಿಕ್ರಿಯೆ ನೀಡಬೇಕು ಎಂದು ನ್ಯಾಯಾಲಯ ಆದೇಶ ನೀಡಿದೆ.

ಆಗಸ್ಟ್ 31 ರವರೆಗೆ ಆರ್​ಬಿಐ ನೀಡಿದ್ದ ಆರು ತಿಂಗಳ ತಾತ್ಕಾಲಿಕ ಅವಧಿಯಲ್ಲಿ ಇಎಂಐಗಳ ಮೇಲಿನ ಬಡ್ಡಿಯನ್ನು ವಿರೋಧಿಸಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನೂ ಕೋರ್ಟ್​ ಇಂದು ನಡೆಸಿದೆ. ಇಎಂಐಗಳ ಮೇಲೆ ಬಡ್ಡಿ ದರವನ್ನು ಬ್ಯಾಂಕುಗಳು ವಿಧಿಸಬಹುದೇ ಅಥವಾ ಬೇಡವೇ ಎಂಬುದನ್ನು 3 ದಿನಗಳೊಳಗೆ ಜಂಟಿ ಸಭೆ ಕರೆದು ನಿರ್ಧರಿಸುವಂತೆ ಕೇಂದ್ರ ಹಣಕಾಸು ಸಚಿವಾಲಯ ಮತ್ತು ಆರ್‌ಬಿಐ ಅಧಿಕಾರಿಗಳಿಗೆ ಕೋರ್ಟ್​ ಸೂಚನೆ ನೀಡಿದೆ. ಇದರ ವಿಚಾರಣೆಯನ್ನು ಜೂ.17ಕ್ಕೆ ಮುಂದೂಡಲಾಗಿದೆ.

ಇನ್ನು ಲಾಕ್​ಡೌನ್​ಗೂ ಮುನ್ನ ಕಾಯ್ದಿರಿಸಲಾಗಿದ್ದ ಟಿಕೆಟ್‌ಗಳ ಹಣವನ್ನು ವಿಮಾನಯಾನ ಕಂಪನಿಗಳು ಮರುಪಾವತಿಸುವ ವಿಚಾರ ಸಂಬಂಧ ಚರ್ಚಿಸಿ ಮೂರು ವಾರದೊಳಗಾಗಿ ಪ್ರತಿಕ್ರಿಯೆ ನೀಡುವಂತೆ ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ವಿಮಾನಯಾನ ಕಂಪನಿಗಳಿಗೆ ಸುಪ್ರೀಂ ನಿರ್ದೇಶನ ನೀಡಿದೆ.

Last Updated : Jun 12, 2020, 3:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.