ETV Bharat / bharat

ಎಚ್​-1ಬಿ ವೀಸಾಗೆ ತಾತ್ಕಾಲಿಕ ತಡೆ; ಗೂಗಲ್ ಸಿಇಓ ಪಿಚೈ ಅಸಮಾಧಾನ

author img

By

Published : Jun 23, 2020, 9:02 PM IST

ಕೋವಿಡ್​-19 ನೆಪದಲ್ಲಿ ವಲಸೆ ಕಾರ್ಮಿಕರು ಅಮೆರಿಕಕ್ಕೆ ಬರದಂತೆ ತಡೆಯಲು ಅಧ್ಯಕ್ಷ ಡೋನಾಲ್ಡ್​ ಟ್ರಂಪ್, ಎಚ್​1-ಬಿ ವೀಸಾ ನೀಡುವಿಕೆಯನ್ನು ವರ್ಷಾಂತ್ಯದವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿದ್ದಾರೆ. ಟ್ರಂಪ್ ಆಡಳಿತದ ಈ ಕ್ರಮಕ್ಕೆ ಭಾರತ ಸಂಜಾತ ಗೂಗಲ್ ಸಿಇಓ ಸುಂದರ್ ಪಿಚೈ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Sunder Pichai
Sunder Pichai

ವಾಶಿಂಗ್ಟನ್: ವಿದೇಶಿಯರಿಗೆ ನೌಕರಿ ವೀಸಾ ಹಾಗೂ ಎಚ್​1-ಬಿ ವೀಸಾ ನೀಡುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಆದೇಶ ಹೊರಡಿಸಿದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಕ್ರಮಕ್ಕೆ ಗೂಗಲ್ ಸಿಇಓ ಸುಂದರ ಪಿಚೈ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

"ವಲಸೆ ಬರುವ ಜನತೆ ಅಮೆರಿಕದ ಆರ್ಥಿಕತೆಯ ಬೆಳವಣಿಗೆಗೆ ಬಹುದೊಡ್ಡ ಕೊಡುಗೆ ನೀಡಿದ್ದು, ಅಮೆರಿಕ ಜಗತ್ತಿನ ಪ್ರಬಲ ತಂತ್ರಜ್ಞಾನ ಶಕ್ತಿಯಾಗಲು ಕಾರಣರಾಗಿದ್ದಾರೆ. ಜೊತೆಗೆ ಗೂಗಲ್ ಇವತ್ತು ಏನಿದೆಯೋ ಅದಕ್ಕೆ ಅವರೇ ಕಾರಣಕರ್ತರು. ಆದರೆ ಇಂದಿನ ಬೆಳವಣಿಗೆ ನಿರಾಶೆ ತಂದಿದೆ. ಆದರೂ ನಾವು ವಲಸೆ ನೌಕರರ ಪರವಾಗಿ ನಿಲ್ಲಲಿದ್ದು, ಎಲ್ಲರಿಗೂ ಸಮಾನ ಅವಕಾಶ ನೀಡಲು ಪ್ರಯತ್ನಿಸಲಿದ್ದೇವೆ." ಎಂದು ಪಿಚೈ ಟ್ವೀಟ್ ಮಾಡಿದ್ದಾರೆ.

ನಾಗರಿಕ ಮತ್ತು ಮಾನವ ಹಕ್ಕುಗಳ ಲೀಡರ್​​ಶಿಪ್ ಕಾನ್ಫರೆನ್ಸ್​ ಅಧ್ಯಕ್ಷೆ ಹಾಗೂ ಸಿಇಓ ವನಿತಾ ಗುಪ್ತಾ ಅವರು ಸಹ ಟ್ರಂಪ್ ಆಡಳಿತದ ನಿರ್ಧಾರವನ್ನು ಖಂಡಿಸಿದ್ದಾರೆ.

"ಇತ್ತೀಚಿನ ಪ್ರಯಾಣ ನಿರ್ಬಂಧವು ಅದೇ ಹಳೆಯ ಜನಾಂಗೀಯ, ಪರಕೀಯ ದ್ವೇಷದ ಪ್ರದರ್ಶನವಾಗಿದೆ. ಆದರೆ ಟ್ರಂಪ್ ಅವರು ತಮ್ಮ ವೈಫಲ್ಯಗಳನ್ನು ಮರೆಮಾಚಲು ಕೈಗೊಳ್ಳುತ್ತಿರುವ ಕ್ರಮಗಳು ಬಹಳ ದಿನ ನಿಲ್ಲಲಾರವು. ವಲಸೆ ಕಾರ್ಮಿಕರನ್ನು ಗುರಿಯಾಗಿಟ್ಟುಕೊಂಡು ಕೈಗೊಳ್ಳಲಾಗುತ್ತಿರುವ, ಕಾಯ್ದೆಗೆ ವಿರುದ್ಧವಾಗಿರುವ ಕ್ರಮಗಳನ್ನು ನ್ಯಾಯಾಲಯಗಳು ಖಂಡಿತವಾಗಿಯೂ ತಡೆಯಲಿವೆ." ಎಂದು ವನಿತಾ ಹೇಳಿದ್ದಾರೆ.

ಈ ಮುನ್ನ ಟ್ರಂಪ್ ಆಡಳಿತದಲ್ಲಿ ದಕ್ಷಿಣ ಮತ್ತು ಮಧ್ಯ ಏಶಿಯಾಗಳ ಉಸ್ತುವಾರಿ ವಹಿಸಿದ್ದ ಅಲೈಸ್ ಜಿ. ವೆಲ್ಸ್​ ಅವರು ಕೂಡ ಅಧ್ಯಕ್ಷ ಟ್ರಂಪ್ ಆದೇಶವನ್ನು ಖಂಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.