ETV Bharat / bharat

ಹಂತ - ಹಂತವಾಗಿ ಲಾಕ್‌ಡೌನ್ ಸಡಿಲಿಸಬೇಕು : ಕೇಂದ್ರಕ್ಕೆ ಸುಪ್ರಿಯಾ ಒತ್ತಾಯ

ಆರ್ಥಿಕತೆ ಸರಿಪಡಿಸಲು ಹಂತ - ಹಂತವಾಗಿ ಲಾಕ್‌ಡೌನ್ ಸಡಿಲಿಸಬೇಕು ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಬಾರಾಮತಿಯ ಲೋಕಸಭಾ ಸದಸ್ಯೆ ಸುಲೆ ಆಗ್ರಹಿಸಿದ್ದಾರೆ.

ಸುಪ್ರಿಯಾ ಸುಲೆ
ಸುಪ್ರಿಯಾ ಸುಲೆ
author img

By

Published : Apr 28, 2020, 8:19 PM IST

ಮುಂಬೈ: ಆರ್ಥಿಕತೆಯನ್ನು ಮರಳಿ ದಾರಿಗೆ ತರಲು ಕೋವಿಡ್ -19 ಪರಿಣಾಮ ಬೀರದ ಅಥವಾ ಸೋಂಕಿನ ಪ್ರಮಾಣ ಕಡಿಮೆ ಇರುವ ಪ್ರದೇಶಗಳಲ್ಲಿ ಹಂತಹಂತವಾಗಿ ಲಾಕ್‌ಡೌನ್ ಸರಾಗಗೊಳಿಸುವ ಪ್ರಕ್ರಿಯೆಯನ್ನು ಕೇಂದ್ರ ಮತ್ತು ಮಹಾರಾಷ್ಟ್ರ ಸರ್ಕಾರ ಒಟ್ಟಾಗಿ ಪ್ರಾರಂಭಿಸಬೇಕು ಎಂದು ಎನ್‌ಸಿಪಿ ಮುಖಂಡೆ ಸುಪ್ರಿಯಾ ಸುಲೆ ಒತ್ತಾಯಿಸಿದ್ದಾರೆ.

ಮಹಾರಾಷ್ಟ್ರದ ಪುಣೆ ಜಿಲ್ಲೆಯ ಬಾರಾಮತಿಯ ಲೋಕಸಭಾ ಸದಸ್ಯೆ ಸುಲೆ, ಇದು ನನ್ನ ವೈಯಕ್ತಿಕ ಅಭಿಪ್ರಾಯ. ನಿರ್ಧಾರವನ್ನು ಅವಸರದಲ್ಲಿ ತೆಗೆದುಕೊಳ್ಳಬಾರದು. ಮಿಲಿಟರಿ ರೀತಿಯ ಶಿಸ್ತಿನೊಂದಿಗೆ ಸಾಮಾಜಿಕ ಅಂತರವನ್ನು ಪಾಲಿಸುವ ಮೂಲಕ ಹಂತಹಂತವಾಗಿ ಸಡಿಲಗೊಳಿಸಬೇಕು ಎಂದು ಹೇಳಿದ್ದಾರೆ.

ಅನ್​ಲಾಕ್ ಮಾಡುವುದು ಹೇಗೆ ಎಂಬುದರ ಕುರಿತು ಕೇಂದ್ರವು ಕೆಲವು ಮಾರ್ಗಸೂಚಿಗಳನ್ನು ನೀಡಬೇಕು. ಆರ್ಥಿಕತೆ ನಿಧಾನವಾಗಿ ಮತ್ತೆ ಹಾದಿಗೆ ತರಲು ಹಂತ ಹಂತವಾಗಿ ಅನ್​ಲಾಕ್ ಮಾಡುವ ಪ್ರಕ್ರಿಯೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಒಟ್ಟಾಗಿ ಪ್ರಾರಂಭಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಶಿಸ್ತುಬದ್ಧ ವಿಧಾನವು ರಾಜ್ಯವನ್ನು ಶೀಘ್ರವಾಗಿ ಅನ್​ಲಾಕ್ ಮಾಡಲು ಸಹಾಯ ಮಾಡುತ್ತದೆ. ಅಂಗಡಿಯವರು, ಕೈಗಾರಿಕೆಗಳು, ಸಣ್ಣ ಮತ್ತು ದೊಡ್ಡ ಉದ್ಯಮಗಳು ಲಾಕ್​ಡೌನ್​ಗೆ ತುತ್ತಾಗಿವೆ. ಪ್ರಸ್ತುತ ಪರಿಸ್ಥಿತಿ ನಿವಾರಿಸಲು ಒಂದು ಮಾರ್ಗವನ್ನು ಕಂಡುಕೊಳ್ಳಬೇಕೆಂದು ಕರೆ ನೀಡಿದರು.

ಸೋಷಿಯಲ್ ಮೀಡಿಯಾದಲ್ಲಿ ವದಂತಿಗಳು / ನಕಲಿ ಸುದ್ದಿಗಳನ್ನು ಹರಡುವುದರ ವಿರುದ್ಧ ಸುಲೆ ಜನರಿಗೆ ಎಚ್ಚರಿಕೆ ನೀಡಿದರು. ಅಗತ್ಯವಿರುವವರಿಗೆ ಪಡಿತರ ಕಿಟ್‌ಗಳನ್ನು ಒದಗಿಸಬೇಕು. ಅವರಿಗೆ ಬೇಯಿಸಿದ ಊಟವನ್ನು ಪೂರೈಸುವುದಕ್ಕಿಂತ ಆಹಾರ ಸಾಮಗ್ರಿಗಳನ್ನು ನೀಡುವುದರ ಉತ್ತಮ ಆಯ್ಕೆಯಾಗಿದೆ ಎಂದು ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಲಾಕ್‌ಡೌನ್ ಕಾರಣದಿಂದಾಗಿ ಮುಂದೂಡಲ್ಪಟ್ಟಿರುವ ಪರೀಕ್ಷೆಗಳಿಗೆ ಅಧ್ಯಯನಕ್ಕಾಗಿ ಲಾಕ್‌ಡೌನ್ ಅವಧಿಯನ್ನು ಬಳಸುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.