ಮುಂಬೈ: ಬಾಲಿವುಡ್ ನಟ ಅಭಿತಾಬ್ ಬಚ್ಚನ್ 'ಕೌನ್ ಬನೇಗಾ ಕರೋಡ್‌ಪತಿ' ಕಾರ್ಯಕ್ರಮದ ಅಂತಿಮ ಎಪಿಸೋಡ್ನಲ್ಲಿ ಭಾಗಿಯಾಗಿದ್ದ ಇನ್ಪೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ಮನಸು ಬಿಚ್ಚಿ ಮಾತನಾಡಿದ್ದು, ತಮ್ಮ ಕಾಲೇಜು ಜೀವನದ ಬಗ್ಗೆ ಮಹತ್ವದ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
-
In honor of our #KBCKaramveer, @srbachchan says that we take pride in saying we are from the country where #SudhaMurthy hails. An unmissable episode awaits you in the #KBCFinaleWeek at 9 PM only on Sony. pic.twitter.com/nfwED1Mfq3
— Sony TV (@SonyTV) November 23, 2019 " class="align-text-top noRightClick twitterSection" data="
">In honor of our #KBCKaramveer, @srbachchan says that we take pride in saying we are from the country where #SudhaMurthy hails. An unmissable episode awaits you in the #KBCFinaleWeek at 9 PM only on Sony. pic.twitter.com/nfwED1Mfq3
— Sony TV (@SonyTV) November 23, 2019In honor of our #KBCKaramveer, @srbachchan says that we take pride in saying we are from the country where #SudhaMurthy hails. An unmissable episode awaits you in the #KBCFinaleWeek at 9 PM only on Sony. pic.twitter.com/nfwED1Mfq3
— Sony TV (@SonyTV) November 23, 2019
1968ರಲ್ಲಿ ಎಂಜನಿಯರಿಂಗ್ ಪದವಿ ಕೋರ್ಸ್ ಸೇರಿದ್ದ ವೇಳೆ ಕಾಲೇಜಿನಲ್ಲಿ ಒಟ್ಟು 599 ಹುಡುಗರಿದ್ದರೆ, ಇವರೊಬ್ಬರೇ ಹುಡುಗಿಯಂತೆ. ಕಾಲೇಜಿನಲ್ಲಿ ಪ್ರವೇಶ ಪಡೆದುಕೊಳ್ಳುತ್ತಿದ್ದ ವೇಳೆ ಪ್ರಾಂಶುಪಾಲರು ಕೆಲವು ಷರತ್ತು ಹಾಕಿ ತಮಗೆ ಕೋರ್ಸ್ಗೆ ಪ್ರವೇಶ ನೀಡಿದ್ದರು ಎಂದು ಹೇಳಿದ್ರು. ಕಾಲೇಜಿಗೆ ಬರುವಾಗ ಸೀರೆ ಹಾಕಿಕೊಂಡೇ ಬರಬೇಕು. ಯಾವುದೇ ಕಾರಣಕ್ಕೂ ಕಾಲೇಜು ಕ್ಯಾಂಟೀನ್ಗೆ ಹೋಗುವಂತಿಲ್ಲ ಹಾಗೂ ಹುಡುಗರೊಂದಿಗೆ ಮಾತನಾಡುವ ಹಾಗಿಲ್ಲ ಎಂಬ ಕಂಡಿಶನ್ಸ್ ಹಾಕಲಾಗಿತ್ತಂತೆ.
ಕಾಲೇಜು ದಿನಗಳಲ್ಲಿ ಅನುಭವಿಸಿದ ಕಷ್ಟ, ಇದಾದ ಬಳಿಕ ಅವರ ಸಮಾಜಮುಖಿ ಕಾರ್ಯಗಳ ಬಗ್ಗೆ ಈ ಕಾರ್ಯಕ್ರಮದಲ್ಲಿ ಸುಧಾಮೂರ್ತಿ ಮಾತನಾಡಿದರು.
ಹಿಂದಿ ಖಾಸಗಿ ಸುದ್ದಿವಾಹಿನಿಯಲ್ಲಿ ಪ್ರಸಾರವಾಗುವ ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ಸುಧಾಮೂರ್ತಿಯವರ ಪ್ರೋಮೋ ಇದೀಗ ರಿಲೀಸ್ ಆಗಿದ್ದು, ಇಡೀ ಎಪಿಸೋಡಿ ನವೆಂಬರ್ 29ರ ರಾತ್ರಿ 9ಗಂಟೆಗೆ ಪ್ರಸಾರವಾಗಲಿದೆ.