ETV Bharat / bharat

ಲಾಕ್‌ಡೌನ್‌ನ ಹಠಾತ್ ಆಘಾತ ಆರ್ಥಿಕತೆಯನ್ನು ಸ್ಥಗಿತಗೊಳಿಸಿದೆ:  ಖರ್ಗೆ

ವಿವಿಧ ಕ್ಷೇತ್ರಗಳಿಗೆ ಕೇಂದ್ರ ಸರ್ಕಾರ ನೀಡಿರುವ ಆರ್ಥಿಕ ನೆರವು ಹಾಗೂ ಕ್ರಮಗಳ ಬಗ್ಗೆ ಕಾಂಗ್ರೆಸ್ ವಾಗ್ದಾಳಿ ನಡೆಸಿದ್ದು, ಇದರಿಂದ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಸಾಧ್ಯವಿಲ್ಲ ಎಂದಿದೆ.

author img

By

Published : May 26, 2020, 8:31 AM IST

kharge
kharge

ನವದೆಹಲಿ: ಲಾಕ್ ಡೌನ್ ಹಿನ್ನೆಲೆ ವಿವಿಧ ಕ್ಷೇತ್ರಗಳಿಗೆ ಕೇಂದ್ರ ಸರ್ಕಾರದ ರಚಿಸಿರುವ ಆರ್ಥಿಕ ನೀತಿಗಳು ಮತ್ತು ಪರಿಹಾರ ಕ್ರಮಗಳ ಬಗ್ಗೆ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

"ಕಳೆದ 6 ವರ್ಷಗಳಿಂದ ಭಾರತದ ಜಿಡಿಪಿ ಬೆಳವಣಿಗೆ ಕುಸಿಯುತ್ತಿದೆ, ಲಾಕ್‌ಡೌನ್‌ನ ಹಠಾತ್ ಆಘಾತವು ಆರ್ಥಿಕತೆಯನ್ನು ನಿಧಾನಗತಿಯಿಂದ ಸಂಪೂರ್ಣ ಸ್ಥಗಿತಕ್ಕೆ ತಳ್ಳಿದೆ" ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್ ಖರ್ಗೆ ತಿಳಿಸಿದ್ದಾರೆ.

62 ದಿನಗಳ ಲಾಕ್‌ಡೌನ್ ಭಾರತದ ಆರ್ಥಿಕತೆಯನ್ನು ತೀವ್ರ ಬಿಕ್ಕಟ್ಟಿಗೆ ಸಿಲುಕಿಸಿದೆ. ಪ್ರವಾಸೋದ್ಯಮ, ವಿಮಾನಯಾನ, ಸಾರಿಗೆ, ಚಿಲ್ಲರೆ ವ್ಯಾಪಾರ, ರೆಸ್ಟೋರೆಂಟ್‌ಗಳು, ನಿರ್ಮಾಣ ಮುಂತಾದ ಕ್ಷೇತ್ರಗಳ ಪುನರುಜ್ಜೀವನಕ್ಕೆ ನಿರ್ದಿಷ್ಟ ಕ್ರಮಗಳ ಅಗತ್ಯವಿದೆ ಎಂದು ಖರ್ಗೆ ಪ್ರತಿಪಾದಿಸಿದರು.

"ಇದಕ್ಕಾಗಿ ಸರ್ಕಾರವು ವಲಯವಾರು ಯೋಜನೆಯನ್ನು ರಚಿಸಬೇಕಾಗಿತ್ತು. ಆದರೆ ಕಳೆದ ವಾರ ಘೋಷಿಸಿದ ಕ್ರಮಗಳಿಂದ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಸಾಧ್ಯವಿಲ್ಲ" ಎಂದು ಅವರು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.