ETV Bharat / bharat

ಭಾರತ-ಬಾಂಗ್ಲಾದೇಶ ರೈಲು ಸಂಪರ್ಕ: ಪ್ರಾಯೋಗಿಕ ಚಾಲನೆ ಯಶಸ್ವಿ

author img

By

Published : Oct 9, 2020, 12:07 PM IST

ಉತ್ತರ ಬಂಗಾಳದ ಜಲ್ಪೈಗುರಿಯಿಂದ ಹಲ್ಡಿಬಾರಿ ಮೂಲಕ ಬಾಂಗ್ಲಾದೇಶದ ಚಿಲಹತಿವರೆಗಿನ ಇಂಡೋ-ಬಾಂಗ್ಲಾದೇಶದ ಅಂತಾರಾಷ್ಟ್ರೀಯ ರೈಲ್ವೆ ಮಾರ್ಗವು 55 ವರ್ಷಗಳ ಸುದೀರ್ಘ ಅಂತರದ ಬಳಿಕ ಮತ್ತೆ ಪ್ರಾರಂಭವಾಗಲಿದೆ.

indo bangla
indo bangla

ಜಲ್ಪೈಗುರಿ (ಪಶ್ಚಿಮ ಬಂಗಾಳ): ಭಾರತ ಮತ್ತು ಬಾಂಗ್ಲಾದೇಶದ ನಡುವೆ ನಿಷ್ಕ್ರಿಯಗೊಂಡಿದ್ದ ರೈಲ್ವೆ ಸಂಪರ್ಕ ಮಾರ್ಗದಲ್ಲಿ ಯಶಸ್ವಿ ಪ್ರಾಯೋಗಿಕ ರೈಲು ಚಾಲನೆ ನಡೆಸಲಾಯಿತು.

ಉತ್ತರ ಬಂಗಾಳದ ಜಲ್ಪೈಗುರಿಯಿಂದ ಹಲ್ಡಿಬಾರಿ ಮೂಲಕ ಬಾಂಗ್ಲಾದೇಶದ ಚಿಲಹತಿವರೆಗಿನ ಇಂಡೋ-ಬಾಂಗ್ಲಾದೇಶದ ಅಂತಾರಾಷ್ಟ್ರೀಯ ರೈಲ್ವೆ ಮಾರ್ಗವು 55 ವರ್ಷಗಳ ಸುದೀರ್ಘ ಅಂತರದ ಬಳಿಕ ಮತ್ತೆ ಪ್ರಾರಂಭವಾಗಲಿದೆ.

successful-trial-run-on-india-bangladesh-rail-link-in-north-bengal
ಭಾರತ-ಬಾಂಗ್ಲಾದೇಶ ರೈಲು ಸಂಪರ್ಕಕ್ಕೆ ಪ್ರಾಯೋಗಿಕ ಚಾಲನೆ

1965ರಲ್ಲಿ ಭಾರತ ಮತ್ತು ಬಾಂಗ್ಲಾದೇಶ (ಅಂದಿನ ಪೂರ್ವ ಪಾಕಿಸ್ತಾನ) ನಡುವಿನ ರೈಲು ಸಂಪರ್ಕ ಮಾರ್ಗ ಕುಸಿದ ನಂತರ ಹಲ್ಡಿಬರಿಯಿಂದ ಬಾಂಗ್ಲಾದೇಶದ ಚಿಲಹತಿಯವರೆಗಿನ ರೈಲು ಮಾರ್ಗವು ನಿಷ್ಕ್ರಿಯಗೊಂಡಿತ್ತು. ಬಳಿಕ ಬಾಂಗ್ಲಾದೇಶ ಸ್ವಾತಂತ್ರ್ಯ ಪಡೆದರೂ ಈ ಮಾರ್ಗದಲ್ಲಿ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು.

ನಿನ್ನೆ ಲೋಕೊ ಎಂಜಿನ್ ಪ್ರಾಯೋಗಿಕ ಆಧಾರದ ಮೇಲೆ ಈ ರೈಲ್ವೆ ಮಾರ್ಗದಲ್ಲಿ ಯಶಸ್ವಿಯಾಗಿ ಪ್ರಾಯೋಗಿಕ ಚಾಲನೆ ನಡೆಸಲಾಯಿತು. ಈಶಾನ್ಯ ಗಡಿನಾಡು ರೈಲ್ವೆಯ ಮುಖ್ಯ ಎಂಜಿನಿಯರ್ (ನಿರ್ಮಾಣ) ಜೆ.ಪಿ.ಸಿಂಗ್ ಅವರು ಪ್ರಾಯೋಗಿಕ ಚಾಲನೆಯನ್ನು ಉದ್ಘಾಟಿಸಿದರು. ಎಂಜಿನ್ ದಂಗಪರ ಗಡಿ ಹೊರ ಠಾಣೆಯಿಂದ ಹೊರಟು ಮತ್ತು ಬೆಳಗ್ಗೆ 11: 45ಕ್ಕೆ ಭಾರತ-ಬಾಂಗ್ಲಾದೇಶ ಗಡಿಯನ್ನು ತಲುಪಿತು.

ಗಡಿಯ ಎರಡೂ ಕಡೆಯ ಜನರು ಲೋಕೊಮೊಟಿವ್​​ಅನ್ನು ಚಪ್ಪಾಳೆಯೊಂದಿಗೆ ಸ್ವಾಗತಿಸಿದರು. ಬಾಂಗ್ಲಾದೇಶವು ಕೆಲವೇ ದಿನಗಳಲ್ಲಿ ಗಡಿಯಲ್ಲಿ ಇದೇ ರೀತಿಯ ಪ್ರಯೋಗ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ.

ಎರಡೂ ದೆಶಗಳ ಗಡಿ ಭಾಗದಲ್ಲಿರುವ ಜನರು ರೈಲ್ವೆ ಸೇವೆಯ ಪುನರಾರಂಭವನ್ನು ಕುತೂಹಲದಿಂದ ಎದುರು ನೋಡುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.