ETV Bharat / bharat

ನಮ್ಮ ವಿದ್ಯಾರ್ಥಿಗಳೇ ಭಾರತದ ಜಾಗತಿಕ ಬ್ರಾಂಡ್ ಅಂಬಾಸಿಡರ್: ಪ್ರಧಾನಿ ಮೋದಿ - ಪ್ರಧಾನಿ ಮೋದಿ ಐಐಟಿ ದೆಹಲಿ ವಿದ್ಯಾರ್ಥಿ ಉದ್ದೇಶಿಸಿ ಭಾಷಣ

ಜಾಗತೀಕರಣದಷ್ಟು ಮುಖ್ಯವಾದದ್ದು ಸ್ವಾವಲಂಬನೆ ಎಂಬುದನ್ನು ಕೋವಿಡ್​-19 ಜಗತ್ತಿಗೆ ಕಲಿಸಿದೆ. ವಿದ್ಯಾರ್ಥಿಗಳೇ ಭಾರತದ ಅತ್ಯುತ್ತಮ ಬ್ರಾಂಡ್ ಅಂಬಾಸಿಡರ್. ನಿಮ್ಮ ಕೆಲಸವು ನಮ್ಮ ಉತ್ಪನ್ನಗಳಿಗೆ ಜಾಗತಿಕ ಮನ್ನಣೆ ನೀಡುತ್ತದೆ. ನಿಮ್ಮ ಪ್ರಯತ್ನಗಳು ಭಾರತೀಯ ಉತ್ಪನ್ನಗಳ ತ್ವರಿತ ಮಾನ್ಯತೆಗೆ ಕಾರಣವಾಗುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದರು.

PM Modi
ಮೋದಿ
author img

By

Published : Nov 7, 2020, 3:11 PM IST

ನವದೆಹಲಿ: ವಿದ್ಯಾರ್ಥಿಗಳು ಗುಣಮಟ್ಟದ ಬಗ್ಗೆ ಗಮನಹರಿಸಬೇಕು. ಆವಿಷ್ಕಾರವನ್ನು ಬೃಹತ್ ಪ್ರಮಾಣದಲ್ಲಿ ಕೈಗೊಳ್ಳುವಂತೆ ದೆಹಲಿಯ ಐಐಟಿ ವಿದ್ಯಾರ್ಥಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.

ದೇಶವು ತನ್ನ ಯುವಕರಿಗೆ 'ವ್ಯವಹಾರ ಸುಲಭಗೊಳಿಸುವುದನ್ನು' ಖಚಿತಪಡಿಸುತ್ತದೆ. ಜನರಿಗೆ 'ಜೀವನ ಸುಲಭತೆ' ಒದಗಿಸಲು ಕೆಲಸ ಮಾಡಬೇಕು. ನಿಮ್ಮ ಪರಿಣತಿ, ಅನುಭವ, ಪ್ರತಿಭೆ ಮತ್ತು ನಾವೀನ್ಯತೆಗಳ ಮೂಲಕ ನೀವು ಒಂದು ಕೆಲಸವನ್ನು ಮಾಡುತ್ತೀರಿ. ಅದು ಬಡ ನಾಗರಿಕರ ಜೀವನ ಸುಲಭತೆ ಖಚಿತಪಡಿಸುತ್ತೆ ಎಂದು ಹೇಳಿದರು.

ಐಐಟಿ ದೆಹಲಿಯ 51ನೇ ವಾರ್ಷಿಕ ಸಮಾವೇಶವನ್ನು ವಿಡಿಯೋ ಕಾನ್ಫರೆನ್ಸ್​​ ಮೂಲಕ ಮಾತನಾಡಿದ ಅವರು, ಕೊರೊನಾ ವೈರಸ್ ನಂತರದ ಜಗತ್ತು ಭಿನ್ನವಾಗಲಿದೆ. ತಂತ್ರಜ್ಞಾನವು ಅದರಲ್ಲಿ ದೊಡ್ಡ ಪಾತ್ರ ವಹಿಸುತ್ತದೆ ಎಂದರು.

ಜಾಗತೀಕರಣದಷ್ಟ ಮುಖ್ಯವಾದದ್ದು ಸ್ವಾವಲಂಬನೆ ಎಂಬುದನ್ನು ಕೋವಿಡ್​-19 ಜಗತ್ತಿಗೆ ಕಲಿಸಿದೆ. ವಿದ್ಯಾರ್ಥಿಗಳೇ ಭಾರತದ ಅತ್ಯುತ್ತಮ ಬ್ರಾಂಡ್ ಅಂಬಾಸಿಡರ್. ನಿಮ್ಮ ಕೆಲಸವು ನಮ್ಮ ಉತ್ಪನ್ನಗಳಿಗೆ ಜಾಗತಿಕ ಮನ್ನಣೆ ನೀಡುತ್ತದೆ. ನಿಮ್ಮ ಪ್ರಯತ್ನಗಳು ಭಾರತೀಯ ಉತ್ಪನ್ನಗಳ ತ್ವರಿತ ಮಾನ್ಯತೆಗೆ ಕಾರಣವಾಗುತ್ತವೆ ಎಂದು ಶ್ಲಾಘಿಸಿದರು.

ಉದ್ಯಮದ ಅಗತ್ಯಗಳು ಮತ್ತು ಭವಿಷ್ಯದ ಆಧಾರದ ಮೇಲೆ ಸರ್ಕಾರ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಕಳೆದ ಶತಮಾನದ ನಿಯಮಗಳು ಮುಂಬರುವ ಶತಮಾನದ ಭವಿಷ್ಯವನ್ನು ನಿರ್ಧರಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.