ETV Bharat / bharat

ಹಣದ ವಿಚಾರಕ್ಕೆ ಗಲಾಟೆ: 11ನೇ ಮಹಡಿಯಿಂದ ತಳ್ಳಿ ರೂಂಮೇಟ್ ನನ್ನು​ ಕೊಂದ ವಿದ್ಯಾರ್ಥಿಗಳು - ಮಹಾರಾಷ್ಟ್ರದ ಪುಣೆ

ರೂಂಮೇಟ್​ನನ್ನು 11ನೇ ಮಹಡಿಯಿಂದ ತಳ್ಳಿ ಕೊಲೆ ಮಾಡಿರುವ ಮೂವರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Students kill roommate
11ನೇ ಮಹಡಿಯಿಂದ ತಳ್ಳಿ ರೂಂಮೇಟ್​ನನ್ನು ಕೊಂದ ವಿದ್ಯಾರ್ಥಿಗಳು
author img

By

Published : Mar 10, 2020, 6:15 PM IST

ಪುಣೆ: ಹಣದ ವಿಚಾರಕ್ಕೆ ಜಗಳ ನಡೆದು ತಮ್ಮ ರೂಂಮೇಟ್​ನನ್ನು 11ನೇ ಮಹಡಿಯಿಂದ ತಳ್ಳಿ ಮೂವರು ವಿದ್ಯಾರ್ಥಿಗಳು ಕೊಲೆ ಮಾಡಿರುವ ಅಮಾನವೀಯ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ಇಂದು ನಡೆದಿದೆ.

ಆರೋಪಿಗಳಾದ ಅಭಿನವ್​ ಜಾಧವ್​, ಅಕ್ಷಯ್ ಗೊರಾಡೆ ಮತ್ತು ತೇಜಸ್ ಗುಜಾರ್ ಇಂಜಿನಿಯರಿಂಗ್​ ವಿದ್ಯಾರ್ಥಿಗಳಾಗಿದ್ದು, ಮೃತ ಸಾಗರ್​ (24) ಚಿಲ್ವೇರಿಗೆ ಶೇ.10 ರಷ್ಟು ಬಡ್ಡಿಗೆ 15 ಸಾವಿರ ರೂ. ಸಾಲ ನೀಡಿದ್ದರು. ಇದನ್ನು ಸಾಗರ್​ ಸೋಮವಾರ ಹಿಂದಿರುಗಿಸಬೇಕಾಗಿತ್ತು. ಆದರೆ ಹಣ ಹಿಂದಿರುಗಿಸುವಲ್ಲಿ ಸಾಗರ್​ ವಿಫಲನಾಗಿದ್ದು, ಪುಣೆಯ ಕೊಂಧ್ವದಲ್ಲಿನ ಬಹುಮಹಡಿ ಕಟ್ಟಡದಲ್ಲಿ ನಾಲ್ವರ ಮಧ್ಯೆ ಜಗಳ ಶುರುವಾಗಿದೆ. ಜಗಳ ತಾರಕಕ್ಕೇರಿ ಸಾಗರ್​ನನ್ನು 11ನೇ ಮಹಡಿಯಿಂದ ಮೂವರು ಸೇರಿ ತಳ್ಳಿರುವುದಾಗಿ ಕೊಂಧ್ವ ಠಾಣೆಯ ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

ಮೂವರನ್ನು ಪೊಲೀಸರು ಬಂಧಿಸಿದ್ದು, ಕೊಲೆ, ದೈಹಿಕ ಹಿಂಸೆ ಮತ್ತು ಕ್ರಿಮಿನಲ್ ಬೆದರಿಕೆಗಾಗಿ ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.