ಗಯಾ: ಸಂಕ್ರಾತಿ ಹಬ್ಬದ ಹಿನ್ನೆಲೆ ಬಿಹಾರದ ರಮಣ ನಗರದ ರಸ್ತೆಗಳೆಲ್ಲ ತಿಲ್ಕುಟ್ ಖಾದ್ಯ ಸುವಾಸನೆಯಿಂದ ಘಮಘಮಿಸುತ್ತಿದೆ. ಸಂಕ್ರಾತಿಯ ವಿಶೇಷ ಖಾದ್ಯವಾಗಿರುವ ತಿಲ್ಕುಟ್ ಬಿಹಾರವಲ್ಲದೇ ಇಡೀ ದೇಶದಲ್ಲಿ ಪ್ರಸಿದ್ಧವಾಗಿದೆ.
ಮಕರ ಸಂಕ್ರಾತಿ ಹಬ್ಬಕ್ಕೆ ಕೆಲವೇ ದಿನಗಳು ಇರುವುದರಿಂದ ರಮಣ ರಸ್ತೆ ಮತ್ತು ಟಿಕಾರೀ ರಸ್ತೆಯ ಅನೇಕ ಅಂಗಡಿಗಳು ಟಿಲ್ಕುಟ್ ತಯಾರಿಕೆಯಲ್ಲಿ ನಿರತವಾಗಿವೆ. ಹಬ್ಬದ ದಿನ ಎಳ್ಳು ಮತ್ತು ಬೆಲ್ಲವನ್ನು ತಿನ್ನಬೇಕೆಂಬ ಪ್ರತೀತಿ ಇದೆ. ನೂರು ವರ್ಷಗಳ ಹಿಂದೆ ಗೋಪಿ ಎಂಬ ಹಲ್ವಾಯಿಯೊಬ್ಬರು ಇದನ್ನು ಮಾಡಲು ಪ್ರಾರಂಭಿಸಿದ್ರು. ಇದೀಗ ಅವರ ವಂಶಸ್ಥರು ಮತ್ತು ಅವರ ಸಹದ್ಯೋಗಿಗಳು ಇದನ್ನು ಮಾಡಿಕೊಂಡು ಬರುತ್ತಿದ್ದಾರೆ.
ರಮಣ ರಸ್ತೆಯಲ್ಲಿರುವ ಕುಶಲಕರ್ಮಿಗಳು ಟಿಲ್ಕುಟ್ ತಯಾರಿಸುವಲ್ಲಿ ಪರಿಣತಿಯನ್ನು ಹೊಂದಿದ್ದಾರೆ. ಎಳ್ಳು ಮತ್ತು ಬೆಲ್ಲವನ್ನು ಬೆರಸಿ ಚೆನ್ನಾಗಿ ಬೇಯಿಸಿ, ಅದಕ್ಕೆ ಹಿಟ್ಟನ್ನು ಬೆರಸುತ್ತಾರೆ. ಬಳಿಕ ಗರಿಗರಿಯಾದ ತಿಲ್ಕುಟ್ ತಯಾರಾಗುತ್ತದೆ. ಗಯಾದ ರಮಣ ರಸ್ತೆಯಲ್ಲಿ ತಯಾರಾಗುವ ತಿಲ್ಕುಟ್ ವಿಶೇಷ ರುಚಿಯನ್ನು ಹೊಂದಿರುತ್ತದೆ. ಈ ಬಾರಿ ಇಲ್ಲಿ ಐದು ರೀತಿಯ ತಿಲ್ಕುಟ್ ತಯಾರಿಸಲಾಗುತ್ತಿದೆ.