ETV Bharat / bharat

ಮಕ್ಕಳಿಗಾಗಿ ಬಿಡುಗಡೆಗೊಂಡಿದೆ ಕೊರೊನಾ ಬಗೆಗಿನ ಪುಸ್ತಕ.. - My Hero is You, How Kids can fight COVID-19

ಸಾಧ್ಯವಾದಷ್ಟು ಮಕ್ಕಳನ್ನು ತಲುಪಲು ಈಗಾಗಲೇ ಆರು ಭಾಷೆಗಳಿಗೆ ಅನುವಾದಿಸಲಾಗಿದೆ. ಇನ್ನೂ ಮೂವತ್ತು ಭಾಷೆಗಳಿಗೆ ಅನುವಾದಿಸುವ ಕಾರ್ಯ ಪ್ರಗತಿಯಲ್ಲಿದೆ. ಇದನ್ನು ಆನ್‌ಲೈನ್ ಉತ್ಪನ್ನ ಮತ್ತು ಆಡಿಯೋ ಬುಕ್ ಆಗಿ ಬಿಡುಗಡೆ ಮಾಡಲಾಗುತ್ತಿದೆ.

Story book released to help children and youngsters cope with coronavirus
ಮಕ್ಕಳಿಗಾಗಿ ಬಿಡುಗಡೆಗೊಂಡಿದೆ ಕೊರೊನಾ ಬಗೆಗಿನ ಪುಸ್ತಕ
author img

By

Published : Apr 11, 2020, 5:21 PM IST

ಹೈದರಾಬಾದ್ : ಮಕ್ಕಳಿಗೆ ಕೊರೊನಾ ಅರ್ಥಮಾಡಿಕೊಳ್ಳಲು ಸಹಾಯವಾಗುವಂತೆ ಹೊಸ ಕಥೆ ಪುಸ್ತಕವನ್ನು ವಿಶ್ವ ಆರೋಗ್ಯ ಸಂಸ್ಥೆ, ವಿಶ್ವಸಂಸ್ಥೆಯ ಮಕ್ಕಳು ಸೇರಿದಂತೆ ಮಾನವೀಯ ವಲಯದಲ್ಲಿ ಕೆಲಸ ಮಾಡುವ 50ಕ್ಕೂ ಹೆಚ್ಚು ಸಂಸ್ಥೆಗಳ ಸಹಯೋಗದಿಂದ ತಯಾರಿಸಲಾಗಿದೆ.

‘ಮೈ ಹೀರೋ ಈಸ್ ಯು, ಮಕ್ಕಳು ಹೇಗೆ ಕೋವಿಡ್​-19 ವಿರುದ್ಧ ಹೋರಾಡಬಹುದು!’ ("My Hero is You, How Kids can fight COVID-19!") ಎಂಬ ಹೆಸರಿನ ಪುಸ್ತಕವನ್ನು ರಚಿಸಲಾಗಿದೆ. ಈ ಕಥೆ ಆರಿಯೊ ಎಂಬ ಪ್ರಾಣಿಯನ್ನು ಒಳಗೊಂಡಿದೆ. ಈ ಮೂಲಕವೇ ಮಕ್ಕಳಿಗೆ ಕೊರೊನಾ ವೈರಸ್​ ಹರಡುವಿಕ, ಮುನ್ನೆಚ್ಚರಿಕೆ ಮತ್ತು ಮಾನವೀಯ ವ್ಯವಹಾರಗಳ ಕುರಿತು ವಿವರಿಸಲಾಗಿದೆ.

ವಿಶ್ವಸಂಸ್ಥೆಯ ಕಚೇರಿಯ ಭಾಗವಾಗಿರುವ ಇಂಟರ್-ಏಜೆನ್ಸಿ ಸ್ಥಾಯಿ ಸಮಿತಿಯಿಂದ (ಐಎಎಸ್ಸಿ) ಪುಸ್ತಕ ಬಿಡುಗಡೆ ಮಾಡಲಾಗಿದೆ. ಈ ಪುಸ್ತಕವು 6 ರಿಂದ 11ವರ್ಷ ವಯಸ್ಸಿನ ಮಕ್ಕಳನ್ನು ಗುರಿಯಾಗಿಸಿಕೊಂಡು ರಚನೆಯಾಗಿದೆ. ಸಾಧ್ಯವಾದಷ್ಟು ಮಕ್ಕಳನ್ನು ತಲುಪಲು ಈಗಾಗಲೇ ಆರು ಭಾಷೆಗಳಿಗೆ ಅನುವಾದಿಸಲಾಗಿದೆ. ಇನ್ನೂ ಮೂವತ್ತು ಭಾಷೆಗಳಿಗೆ ಅನುವಾದಿಸುವ ಕಾರ್ಯ ಪ್ರಗತಿಯಲ್ಲಿದೆ. ಇದನ್ನು ಆನ್‌ಲೈನ್ ಉತ್ಪನ್ನ ಮತ್ತು ಆಡಿಯೋ ಬುಕ್ ಆಗಿ ಬಿಡುಗಡೆ ಮಾಡಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.