ETV Bharat / bharat

ಷೇರು ಮಾರುಕಟ್ಟೆ ಜೊತೆ ರೂಪಾಯಿಯನ್ನೂ ನುಂಗಿತು ಮಹಾಮಾರಿ ಕೊರೊನಾ - ಷೇರು ಮಾರುಕಟ್ಟೆ, ರೂಪಾಯಿಗಳೆರಡೂ ಐತಿಹಾಸಿಕ ಕುಸಿತ

ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಹೂಡಿಕೆದಾರರು ಮಾರುಕಟ್ಟೆಯಿಂದ ಹಿಂದೆ ಸರಿದ ಕಾರಣ ಭಾರತೀಯ ಷೇರು ಮಾರುಕಟ್ಟೆಗಳು ಇಂದು ಭಾರಿ ಕುಸಿತ ಕಂಡಿವೆ.

stock market, Rupee falls
ಷೇರು ಮಾರುಕಟ್ಟೆ, ರೂಪಾಯಿಗಳೆರಡೂ ಐತಿಹಾಸಿಕ ಕುಸಿತ
author img

By

Published : Mar 23, 2020, 6:04 PM IST

Updated : Mar 23, 2020, 6:54 PM IST

ಮುಂಬೈ: ಭಾರತೀಯ ಷೇರು ಮಾರುಕಟ್ಟೆ ಸೋಮವಾರ ಪಾತಾಳ ಕುಸಿತ ಕಂಡಿದೆ. ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಹೂಡಿಕೆದಾರರು ಮಾರುಕಟ್ಟೆಯಿಂದ ಹಿಂದೆ ಸರಿದ ಕಾರಣದಿಂದ ಮಹಾಪತನ ಉಂಟಾಗಿದೆ. ಸೋಮವಾರ ಒಂದೇ ದಿನದಲ್ಲಿ ಷೇರು ಮಾರುಕಟ್ಟೆ ಶೇ. 13 ರಷ್ಟು ಕುಸಿತ ಕಂಡಿದ್ದು ಐತಿಹಾಸಿಕ ಪತನವಾಗಿದೆ.

ಸೆನ್ಸೆಕ್ಸ್​ 3935 ಅಂಕ ಕಳೆದುಕೊಂಡು 25,981 ರಲ್ಲಿ ಹಾಗೂ ಎನ್​ಎಸ್​ಇ ನಿಫ್ಟಿ 1135 ಅಂಕ ಕಳೆದುಕೊಂಡು 4 ವರ್ಷದ ಅತಿ ಕನಿಷ್ಠ ಎಂದರೆ 7,610 ರಲ್ಲಿ ಕೊನೆಗೊಂಡಿದೆ. ದೊಡ್ಡ ಷೇರುಗಳು ಮಾತ್ರವಲ್ಲದೆ ನಿಫ್ಟಿ ಮಿಡ್​ಕ್ಯಾಪ್​ ಮತ್ತು ನಿಫ್ಟಿ ಸ್ಮಾಲ್​ ಕ್ಯಾಪ್​ ಅನುಕ್ರಮವಾಗಿ ಶೇ. 14.5 ಮತ್ತು ಶೇ. 13 ರಷ್ಟು ಕುಸಿತ ಕಂಡಿವೆ. ಬೃಹತ್ ವಲಯದ ಕಂಪನಿಗಳಾದ ಹೆಚ್​ಡಿಎಫ್​ಸಿ ಬ್ಯಾಂಕ್​, ಆರ್​ಐಎಲ್, ಐಸಿಐಸಿಐ ಬ್ಯಾಂಕ್​ ಮತ್ತು ಆ್ಯಕ್ಸಿಸ್​ ಬ್ಯಾಂಕ್​ ಷೇರುಗಳು ಅತಿ ಹೆಚ್ಚು ಮೌಲ್ಯ ಕಳೆದುಕೊಂಡಿವೆ.

ಕೊರೊನಾ ಆತಂಕದಿಂದ ಭಾರತದ 75 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಸಂಪೂರ್ಣ ಲಾಕ್​ಡೌನ್ ಮಾಡಿದ್ದು, ಬಸ್ ಹಾಗೂ ರೈಲು ಸಂಚಾರವನ್ನು ನಿಷೇಧಿಸಿದ ಕ್ರಮಗಳಿಂದ ಮಾರುಕಟ್ಟೆ ಕುಸಿತಕ್ಕೆ ಪ್ರಮುಖ ಕಾರಣಗಳಾಗಿವೆ.

ರೂಪಾಯಿ ಸಹ ಐತಿಹಾಸಿಕ ಕುಸಿತ: ಸೋಮವಾರದಂದು ಭಾರತೀಯ ರೂಪಾಯಿ ಡಾಲರ್​ ಎದುರು ಐತಿಹಾಸಿಕ ಕೆಳಮಟ್ಟಕ್ಕೆ ಕುಸಿದಿದೆ. ಈ ಹಿಂದಿನ ಅತಿ ಕನಿಷ್ಠ ಮಟ್ಟವಾದ 75.19 ದಾಟಿದ್ದ ರೂಪಾಯಿ ಈಗ ಪ್ರತಿ ಡಾಲರ್​ 76.16 ಕ್ಕೆ ಬಂದು ನಿಂತಿದೆ. ದಿನದ ಆರಂಭದಲ್ಲಿ 75.69 ರಿಂದ ವಹಿವಾಟು ಆರಂಭಿಸಿ, ರೂಪಾಯಿ ದಿನದಂತ್ಯಕ್ಕೆ ಐತಿಹಾಸಿಕ ಕನಿಷ್ಠ ಮಟ್ಟವಾದ 76.16 ಕ್ಕೆ ಕುಸಿದಿದೆ.

Last Updated : Mar 23, 2020, 6:54 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.