ETV Bharat / bharat

ಕೇಂದ್ರ ಕೊಟ್ಟಿದ್ದು ಜಾಸ್ತಿ, ರಾಜ್ಯಗಳು ವಿತರಿಸಿದ್ದು ಕಡಿಮೆ: ಪಾಸ್ವಾನ್​ ಅಸಮಾಧಾನ

ಕೇಂದ್ರ ಸರ್ಕಾರ ರಾಜ್ಯಗಳಿಗೆ ನೀಡಿರುವ ದವಸ- ಧಾನ್ಯಗಳು ಸಾಕಷ್ಟು ಪ್ರಮಾಣದಲ್ಲಿ ವಿತರಣೆಯಾಗುತ್ತಿಲ್ಲ ಎಂದು ಕೇಂದ್ರ ಆಹಾರ ಸಚಿವ ರಾಮ್ ವಿಲಾಸ್​ ಪಾಸ್ವಾನ್​ ಆರೋಪಿಸಿದ್ದಾರೆ.

author img

By

Published : May 9, 2020, 3:09 PM IST

Ramvilas Paswa
ರಾಮ್ ವಿಲಾಸ್​ ಪಾಸ್ವಾನ್

ನವದೆಹಲಿ: ಲಾಕ್​ಡೌನ್​ ವೇಳೆ ಸಂಕಷ್ಟದಲ್ಲಿರುವವರಿಗೆ ಧಾನ್ಯಗಳ ಉಚಿತ ವಿತರಣೆ ಮಾಡುವ ಪ್ರಕ್ರಿಯೆ ರಾಜ್ಯಗಳಲ್ಲಿಸಾಕಷ್ಟು ಪ್ರಮಾಣದಲ್ಲಿ ನಡೆಯುತ್ತಿಲ್ಲ ಎಂದು ಕೇಂದ್ರ ಆಹಾರ ಸಚಿವ ರಾಮ್ ವಿಲಾಸ್​ ಪಾಸ್ವಾನ್​ ಆರೋಪಿಸಿದ್ದಾರೆ.

ಈಗಾಗಲೇ ಒಂದು ತಿಂಗಳಿಗಾಗುವಷ್ಟು ಬೇಳೆ ಕಾಳುಗಳನ್ನು ವಿವಿಧ ರಾಜ್ಯಗಳಿಗೆ ಹಾಗೂ ಕೇಂದ್ರಾಡಾಳಿತ ಪ್ರದೇಶಗಳಿಗೆ ಕಳುಹಿಸಿಕೊಡಲಾಗಿದೆ. ಆದರೆ, ಆ ರಾಜ್ಯಗಳು ಈವರೆಗೆ ಕೇವಲ 53,617 ಟನ್​ಗಳಷ್ಟು ಧಾನ್ಯಗಳನ್ನು ಪಡಿತರ ಚೀಟಿ ಇರುವ ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿಯಲ್ಲಿ ವಿತರಣೆ ಮಾಡಿವೆ. ಆದರೆ ಈ ಪ್ರಕ್ರಿಯೆ ಬಡವರ ಹಿತಾಸಕ್ತಿಯ ದೃಷ್ಟಿಯಿಂದ ಮತ್ತಷ್ಟು ವೇಗ ಪಡೆದುಕೊಳ್ಳಬೇಕು ಎಂದಿದ್ದಾರೆ.

ಇದರ ಜೊತೆಗೆ ''ಬಡವರಿಗೆ ಧಾನ್ಯಗಳನ್ನು ವಿತರಣೆ ಮಾಡುವುದು ರಾಜ್ಯಗಳ ಕೆಲಸ. ಧಾನ್ಯಗಳನ್ನು ಸಂರಕ್ಷಿಸುದು, ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ತಲುಪಿಸುವುದು ಸುಲಭವಲ್ಲ. ಇದರಿಂದಾಗಿ ರಾಜ್ಯಗಳು ಸ್ವಲ್ಪ ಹೆಚ್ಚಿಗೆ ಯತ್ನಿಸಿ ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಬಡವರಿಗೆ ವಿತರಿಸಬೇಕು ಎಂದು ಮನವಿ ಮಾಡಿದರು.

ಒಂದು ತಿಂಗಳಿಗೆ 1.95 ಲಕ್ಷ ಟನ್​ನಷ್ಟು ಧಾನ್ಯಗಳನ್ನು ಪ್ರಧಾನಮಂತ್ರಿ ಗರೀಬ್​ ಅನ್ನ ಯೋಜನೆಯಲ್ಲಿ ನೀಡಲಾಗುತ್ತಿದೆ. ಈಗಾಗಲೇ 1.81 ಲಕ್ಷ ಟನ್​ ಧಾನ್ಯ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ತಲುಪಿದೆ. ಆದರೆ 53,617 ಟನ್​ ಫಲಾನುಭವಿಗಳಿಗೆ ವಿತರಣೆಯಾಗಿದೆ ಎಂದು ಪಾಸ್ವಾನ್​ ಸ್ಪಷ್ಟಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.