ETV Bharat / bharat

ಸುಶಾಂತ್​ ಸಾವು ಪ್ರಕರಣ: ಬಾಂದ್ರಾ ನಿವಾಸದಿಂದಲೇ ತನಿಖೆ ಪ್ರಾರಂಭಿಸಿದ ಸಿಬಿಐ, ಎಸ್‌ಐಟಿ - ಸುಶಾಂತ್ ಸಿಂಗ್ ರಜಪೂತ್

ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐ ಮತ್ತು ಎಸ್‌ಐಟಿ ತಂಡಗಳು ಪ್ರಾರಂಭಿಸಿವೆ.

author img

By

Published : Aug 21, 2020, 10:40 AM IST

ಮುಂಬೈ: ಸಿಬಿಐ ಮತ್ತು ಎಸ್‌ಐಟಿ ಗುರುವಾರದಂದು ಮುಂಬೈಗೆ ಆಗಮಿಸಿದ್ದು, ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಪ್ರಕರಣದ ತನಿಖೆ ಪ್ರಾರಂಭಿಸಿದ್ದಾರೆ. ನಟನ ಸಾವಿನ ಬಗ್ಗೆ ತನಿಖೆ ನಡೆಸಲು ಸಿಬಿಐ, ಎಸ್‌ಐಟಿ ತಂಡ ರಚಿಸಿದ್ದು, ರಜಪೂತ್‌ ಅವರ ಬಾಂದ್ರಾ ನಿವಾಸದಿಂದ ತನಿಖೆ ಶುರು ಮಾಡಿದೆ.

"ವಿಶೇಷ ತನಿಖಾ ತಂಡದ ಅಧಿಕಾರಿಗಳು ಮತ್ತು ವಿಧಿವಿಜ್ಞಾನ ತಜ್ಞರು ಮುಂಬೈನ ಸುಶಾಂತ್ ನಿವಾಸಕ್ಕೆ ಭೇಟಿ ನೀಡಲಿದ್ದಾರೆ. ಈ ಬಳಿಕ ನಟನ ಮೃತದೇಹ ದೊರೆತ ಸ್ಥಳದಲ್ಲಿ ತನಿಖೆ ಪ್ರಾರಂಭಿಸಲಿದ್ದಾರೆ" ಎಂದು ಸಿಬಿಐ ಮೂಲಗಳು ತಿಳಿಸಿವೆ. ಇನ್ನು ಇದಕ್ಕೂ ಮುಂಚಿತವಾಗಿ ಅಪರಾಧ ಸ್ಥಳಕ್ಕೆ ಭೇಟಿ ನೀಡಿದ್ದ ಮುಂಬೈ ಪೊಲೀಸ್ ಅಧಿಕಾರಿಗಳನ್ನು ಸಿಬಿಐ ಅಧಿಕಾರಿಗಳು ಪರಿಶೀಲಿಸಲಿದ್ದಾರೆ.

"ಮುಂಬೈ ಪೊಲೀಸ್​ ಅಧಿಕಾರಿಗಳು, ಇತರ ಸಿಬ್ಬಂದಿ ಮತ್ತು ದಿವಂಗತ ನಟನ ಸ್ನೇಹಿತರನ್ನು ತನಿಖೆಗೆ ಒಳಪಡಿಸಬೇಕಾಗಿದೆ. ಈಗಾಗಲೇ ಮುಂಬೈ ಪೊಲೀಸರು ವಿಚಾರಣೆ ನಡೆಸಿದವರನ್ನೂ ಸಹ ಸಿಬಿಐ ತನಿಖೆಗೆ ಒಳಪಡಿಸಲಿದೆ " ಎಂದು ಮೂಲಗಳು ತಿಳಿಸಿವೆ.

ಆಗಸ್ಟ್ 19 ರಂದು ಬಾಲಿವುಡ್ ನಟ ಸುಶಾಂತ್ ಸಾವಿನ ಕುರಿತು ಪಾಟ್ನಾದಲ್ಲಿ ಎಫ್​ಐಆರ್​ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್​ ಈ ಪ್ರಕರಣದ ತನಿಖೆ ನಡೆಸುವಂತೆ ಸಿಬಿಐಗೆ ನಿರ್ದೇಶನ ನೀಡಿತ್ತು.

ಈ ಪ್ರಕರಣದಲ್ಲಿ ಈವರೆಗೆ ಸಂಗ್ರಹಿಸಿದ ಎಲ್ಲ ಸಾಕ್ಷ್ಯಗಳನ್ನು ಸಿಬಿಐಗೆ ಹಸ್ತಾಂತರಿಸುವಂತೆ ಸುಪ್ರೀಂಕೋರ್ಟ್ ಮುಂಬೈ ಪೊಲೀಸರಿಗೆ ಸೂಚಿಸಿದೆ. ಈ ಆದೇಶವನ್ನು ಪ್ರಶ್ನಿಸುವ ಆಯ್ಕೆಯನ್ನು ಮಹಾರಾಷ್ಟ್ರ ರಾಜ್ಯ ನಿರಾಕರಿಸಿದೆ ಎಂದು ನ್ಯಾಯಮೂರ್ತಿ ಹೇಳಿದ್ದಾರೆ.

ರಜಪೂತ್​ ತಂದೆ ಕೆ.ಕೆ.ಸಿಂಗ್ ಅವರು, ಆತ್ಮಹತ್ಯೆಗೆ ಸಂಬಂಧಿಸಿದ ಸೆಕ್ಷನ್‌ಗಳ ಅಡಿ ಪಾಟ್ನಾದಲ್ಲಿ ಎಫ್‌ಐಆರ್ ದಾಖಲಿಸಿದ್ದರು, ಇನ್ನು ಸುಶಾಂತ್​ ಸಿಂಗ್​ ರಜಪೂತ್ ಅವರ ಮೃತದೇಹ ಮುಂಬೈ ನಿವಾಸದಲ್ಲಿ ಜೂನ್ 14 ರಂದು ಪತ್ತೆಯಾಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.