ರಾಮೇಶ್ವರಂ : ಶ್ರೀಲಂಕಾಗೆ ಸೇರಿದ ಗಡಿಯಲ್ಲಿ ಅಕ್ರಮವಾಗಿ ಮೀನುಗಾರಿಕೆ ನಡೆಸಿದ ಆರೋಪದ ಮೇಲೆ 9 ಭಾರತೀಯ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿದ್ದು, ಒಂದು ದೋಣಿಯನ್ನು ಸಹ ವಶಪಡಿಸಿಕೊಂಡಿದೆ.
ನೆಡುಂತೀವು ಬಳಿ ಭಾರತೀಯ ಮೀನುಗಾರರನ್ನು ಬಂಧಿಸಲಾಗಿದ್ದು, ನಮ್ಮ ಒಂದು ದೋಣಿಯನ್ನೂ ಶ್ರೀಲಂಕಾ ನೌಕಾಪಡೆಯವರು ವಶಪಡಿಸಿಕೊಂಡಿದ್ದಾರೆ ಎಂದು ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಂಧಿತ ಮೀನುಗಾರರನ್ನು ಗ್ರೇಸ್, ವಲನ್ ಕೌಸಿಕ್, ಮೈಕಾಯಸ್, ಕಿಂಗ್ಸ್‌ಟನ್, ಸ್ಯಾಮ್ ಸ್ಟಿಲ್ಲರ್, ನಿಜಾನ್, ಬ್ರೈಟನ್, ಕಿಶೋಕ್, ಮಾರಿ ಎಂದು ಹೇಳಲಾಗಿದ್ದು, ವಶಪಡಿಸಿಕೊಂಡ ದೋಣಿ ಸಂಖ್ಯೆ IND-TN-10-MM-296 ಎಂದು ಅವರು ತಿಳಿಸಿದ್ದಾರೆ.
ಶನಿವಾರ ನಡೆದ ಇನ್ನೊಂದು ಪ್ರತ್ಯೇಕ ಘಟನೆಯಲ್ಲಿ ಲಂಕಾದ ನೌಕಾಪಡೆಯ ಸಿಬ್ಬಂದಿ ಕಚ್ಚತೀವು ಬಳಿ 20 ಯಾಂತ್ರಿಕೃತ ದೋಣಿಗಳಲ್ಲಿ ಮೀನುಗಾರಿಕಾ ಬಲೆಗಳನ್ನು ಹಾನಿಗೊಳಿಸಿದ್ದು, ಭಾರತೀಯ ಮೀನುಗಾರರ ಮೇಲೆ ಕಲ್ಲು ಹಾಗೂ ಬಾಟಲಿಗಳನ್ನು ಎಸೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:11 ವರ್ಷ ಕಾಲ ಪಾಕ್ ಜೈಲಿನಲ್ಲಿ ಚಿತ್ರಹಿಂಸೆ ಅನುಭವಿಸಿ ಹುಟ್ಟೂರಿಗೆ ಹಿಂತಿರುಗಿದ ವಲಸಿಗ!