ETV Bharat / bharat

ಪತಿ ಸಮಾಧಿ ಬಳಿಯೇ ಅಮರಳಾಗಲು 38 ವರ್ಷ ಕಾಯ್ದ ಪತ್ನಿ!

ಇಂದಿನ ದಿನಗಳಲ್ಲಿ ಕೌಟುಂಬಿಕ ಕಲಹಗಳು ಹೆಚ್ಚುತ್ತಿವೆ. ಪತಿ-ಪತ್ನಿಯರ ನಡುವಿನ ಮುನಿಸು ಸಂಸಾರವನ್ನು ವಿಚ್ಛೇಧನದತ್ತ ಕೊಂಡೊಯ್ಯುತ್ತಿದೆ. ಇಂತಹ ಸಂದರ್ಭದಲ್ಲಿ 'ಈಟಿವಿ ಭಾರತ'ವು ಪ್ರೇಮಿಗಳ ದಿನವಾದ ಇಂದು ಒಂದು ಅಮರ ಪ್ರೇಮಕಥೆಯೊಂದನ್ನು ಪರಿಚಯಿಸುತ್ತಿದೆ.

special story on valentine day from nahan
ಪತಿ ಸಮಾಧಿ ಬಳಿಯೇ ಅಮರಳಾಗಲು 38 ವರ್ಷ ಕಾಯ್ದ ಪತ್ನಿ
author img

By

Published : Feb 14, 2020, 1:04 PM IST

Updated : Feb 14, 2020, 2:02 PM IST

ನಹಾನ್​ (ಹಿಮಾಚಲ ಪ್ರದೇಶ): ಇದು ಯಾವುದೇ ಹೀರ್-ರಂಜಾ, ರೋಮಿಯೋ ಜೂಲಿಯೆಟ್ ಕುರಿತಾದ ಸ್ಟೋರಿಯಲ್ಲ. ಹಿಮಾಚಲ ಪ್ರದೇಶದ ಐತಿಹಾಸಿಕ ನಗರವಾದ ನಹಾನ್‌ನಲ್ಲಿನ ಐತಿಹಾಸಿಕ ಸಮಾಧಿಗಳಲ್ಲಿ ಬಂಧಿಯಾಗಿರೋ ಪ್ರೇಮಕಥೆಯಿದು. ಪತಿಯ ಸಮಾಧಿ ಪಕ್ಕದಲ್ಲಿಯೇ 38 ವರ್ಷಗಳ ಬಳಿಕ ಸಮಾಧಿಯಾದ ಪತ್ನಿ. ಪತಿ, ಪತ್ನಿಯರ ನಡುವಿನ ಪ್ರೀತಿ, ಪ್ರೇಮ ಎಂಬ ಬಾಂಧವ್ಯ ಎಷ್ಟು ಗಟ್ಟಿಯಾದದು ಎಂಬುದಕ್ಕೆ ಅಲ್ಲಿನ ಸಮಾಧಿಗಳೇ ಸಾಕ್ಷಿಯಾಗಿವೆ.

ಪತಿ ಸಮಾಧಿ ಬಳಿಯೇ ಅಮರಳಾಗಲು 38 ವರ್ಷ ಕಾಯ್ದ ಪತ್ನಿ

ಅದು ಭಾರತದಲ್ಲಿ ಬ್ರಿಟಿಷರ ಆಡಳಿತ ನಡೆಸುತ್ತಿದ್ದ ಕಾಲ. ಆಗ ಇಂಗ್ಲಿಷ್ ಅಧಿಕಾರಿ ಇಡ್ವಿನ್​ ಪಿಯರ್ಸಲ್​​ ಹಾಗೂ ಆತನ ಪತ್ನಿ ಲೂಸಿಯಾ ಪಿಯರ್ಸಲ್​​ ಭಾರತಕ್ಕೆ ಬಂದಿದ್ದರು. ಮಹಾರಾಜನ ಆಡಳಿತದಲ್ಲಿ ಇಡ್ವಿನ್​ ಮೆಡಿಕಲ್​ ಸೂಪರಿಟೆಂಡೆಂಟ್​ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಆದ್ರೆ 1883ರಲ್ಲಿ ಇಡ್ವಿನ್​ ತಮ್ಮ 50ನೇ ವಯಸ್ಸಿನಲ್ಲಿ ಇಲ್ಲಿಯೇ ಮೃತರಾಗ್ತಾರೆ. ಆಗ ಮಹಾರಾಜರು ನಹಾನ್‌ನಲ್ಲಿಯೇ ಇಡ್ವಿನ್​ರ ಸಮಾಧಿ ನಿರ್ಮಿಸುತ್ತಾರೆ. ಹೀಗೆ ಪತಿ ತಮ್ಮನ್ನ ಅಗಲಿದ್ರೂ ಕೂಡ ಸ್ವದೇಶಕ್ಕೆ ತೆರಳದ ಲೂಸಿಯಾ ಭಾರತದಲ್ಲೇ ನೆಲೆಸಿರ್ತಾರೆ. ಅದಕ್ಕೆ ಕಾರಣ ಅವರಲ್ಲಿ ಇರೋ ಒಂದು ಕೊನೆಯಾಸೆ ಹಾಗೂ ಪತಿಯನ್ನು ಬಿಟ್ಟಿರಲಾರದ ಬಾಂಧವ್ಯ.

ಅದೇನಂದ್ರೆ ತಮ್ಮ ಪತಿಯ ಪಕ್ಕದಲ್ಲಿಯೇ ತಾವೂ ಕೂಡ ಸಮಾಧಿಯಾಗಬೇಕು ಎಂಬುದು. ಹೀಗೆ ಪತಿಯ ಪಕ್ಕದಲ್ಲಿಯೇ ಶಾಶ್ವತವಾಗಿರಬೇಕೆಂಬ ಲೂಸಿಯಾ ಬಯಕೆ 38 ವರ್ಷಗಳ ಬಳಿಕ ನೆರವೇರುತ್ತೆ. ಪತಿಯ ಕಳೆದುಕೊಂಡ ದುಃಖದಲ್ಲಿ ದಿನ ಕಳೆಯುತ್ತಿದ್ದ ಲೂಸಿಯಾ 1921ರ ಅ.19ರಂದು ಕೊನೆಯುಸಿರೆಯುತ್ತಾರೆ. ಅವರ ಇಚ್ಚೆಯಂತೆ ಇಡ್ವಿನ್​ ಸಮಾಧಿಯ ಪಕ್ಕದಲ್ಲಿಯೇ ಲೂಸಿಯಾರ ಅಂತಿಮ ವಿಧಿವಿಧಾನ ನೆರವೇರಿಸಿ ಸಮಾಧಿ ನಿರ್ಮಿಸಲಾಗಿದೆ.

ಇಂದಿಗೂ, ನಹಾನ್‌ನ ವಿಲ್ಲಾ ರೌಂಡ್‌ನಲ್ಲಿರುವ ಕ್ಯಾಥೊಲಿಕ್ ಸ್ಮಶಾನದಲ್ಲಿ, ಈ ಪಿಯರ್ಸಲ್ ದಂಪತಿಯ ಅಮರ ಪ್ರೇಮಕಥೆ ಹೇಳುವ ವಾಸ್ತುಶಿಲ್ಪಭರಿತ ಸಮಾಧಿಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ.

Last Updated : Feb 14, 2020, 2:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.