ETV Bharat / bharat

ರಾಮಮಂದಿರ ಭೂಮಿ ಪೂಜೆಯಂದು ಪ್ರಧಾನಿ ಮೋದಿಗೆ ವಿಶೇಷ ಶಲ್ಯ ಉಡುಗೊರೆ - ಭೂಮಿ ಪೂಜೆ

ಆಗಸ್ಟ್‌ 5 ರಂದು ರಾಮಮಂದಿರ ನಿರ್ಮಾಣದ ಭೂಮಿ ಪೂಜೆಯಲ್ಲಿ ಭಾಗವಹಿಸುವ ಪ್ರಧಾನಿ ಮೋದಿಗೆ ಡಾ.ರಜನಿಕಾಂತ್‌ ಎಂಬುವವರು ವಿಶೇಷವಾದ ಶಲ್ಯ ನೀಡಲು ಸಿದ್ಧತೆ ಮಾಡಿಕೊಂಡಿದ್ದಾರೆ.

special-gamcha-for-pm-modi-on-the-occasion-of-bhoomi-pujan-of-ram-temple
ರಾಮಮಂದಿರದ ಭೂಮಿ ಪೂಜೆಯಲ್ಲಿ ಭಾಗವಹಿಸುವ ಪ್ರಧಾನಿ ಮೋದಿಗೆ ವಿಶೇಷವಾದ ಗಂಚ ಉಡುಗೊರೆ
author img

By

Published : Aug 1, 2020, 11:21 PM IST

ವಾರಣಾಸಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಭೂಮಿ ಪೂಜೆಗೆ ದಿನಗಣನೆ ಆರಂಭವಾಗಿದ್ದು, ಇದಕ್ಕಾಗಿ ಇಡೀ ದೇಶ ಕಾತುರದಿಂದ ಕಾಯುತ್ತಿದೆ. 500 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣವಾಗಲಿರುವ ರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮ ಇದೇ ಆ. 5 ರಂದು ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುತ್ತಿದ್ದಾರೆ.

ಅಂದಿನ ಶುಭ ಸಂದರ್ಭದಲ್ಲಿ ಪ್ರಧಾನಿ ಮೋದಿಯವರಿಗೆ ವಿಶೇಷವಾಗಿ ತಯಾರಿಸಲಾದ ಶಲ್ಯವೊಂದನ್ನು ಉಡುಗೊರೆಯಾಗಿ ನೀಡಲಾಗುತ್ತಿದೆ. ಇದರ ಮೇಲೆ ಭಗವಂತ ಶ್ರೀರಾಮನ ಹೆಸರನ್ನು ನೇಯಲಾಗಿದ್ದು, ಶ್ರೀರಾಮ ಮಂದಿರ ನಿರ್ಮಾಣದ ಸಾಕಾರಕ್ಕೆ ಕಾರಣಕರ್ತರಾದ ಪ್ರಧಾನಿ ಮೋದಿಯವರಿಗೆ ಈ ಶಲ್ಯವನ್ನು ಕೃತಜ್ಞತಾಪೂರ್ವಕವಾಗಿ ಅರ್ಪಿಸಲಾಗುವುದು.

ವೃತ್ತಿಯಲ್ಲಿ ವೈದ್ಯರಾಗಿರುವ ಡಾ. ರಜನೀಕಾಂತ್ ಎಂಬುವರು ಈ ಶಲ್ಯವನ್ನು, ಸಾರನಾಥ ಬಳಿಯ ಛಾಹಿ ಗ್ರಾಮದ ಖ್ಯಾತ ನೇಕಾರ ಬಚ್ಚಾ ಲಾಲ್ ಮೌರ್ಯ ಎಂಬುವರಿಂದ ತಯಾರಿಸಿ ತರಿಸಿದ್ದಾರೆ. ಈ ಶಲ್ಯವನ್ನು ತಯಾರಿಸಲು ಮೌರ್ಯ 15 ದಿನ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಬೆಳ್ಳಿಯ ಇಟ್ಟಿಗೆಯನ್ನು ಪೂಜೆ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಶ್ರೀರಾಮ ಮಂದಿರ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ ಎನ್ನಲಾಗಿದೆ. ಈ ಇಟ್ಟಿಗೆ 22.6 ಕೆಜಿ ಭಾರವಿದ್ದು, 15,59,000 ರೂ. ಬೆಲೆ ಬಾಳುತ್ತದೆ ಎಂದು ಹೇಳಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.