ETV Bharat / bharat

ವಿಶೇಷ ಅಂಕಣ: ಮಕ್ಕಳು ಮತ್ತು ಮಹಿಳೆಯರ ಸಾಂವಿಧಾನಿಕ ಹಕ್ಕುಗಳ ಲಾಭದ ಅವಲೋಕನ

ನಮ್ಮ ಗಣರಾಜ್ಯದ 71ನೇ ವರ್ಷದ ಹೊಸ್ತಿಲಿನಲ್ಲಿರುವ ನಾವು, ನಮ್ಮ ಸಂವಿಧಾನವು ಮಹಿಳೆಯರು ಮತ್ತು ಮಕ್ಕಳಿಗೆ ನೀಡಿರುವ ಪೂರ್ವಭಾವಿ ಸಾಂವಿಧಾನಿಕ ಬೆಂಬಲದ ಲಾಭವನ್ನು ನಾವು ಎಷ್ಟರ ಮಟ್ಟಿಗೆ ಪಡೆದುಕೊಂಡಿದ್ದೇವೆ ಎಂಬುದನ್ನು ಅವಲೋಕಿಸಬೇಕಿದೆ.

Special Article
ವಿಶೇಷ ಲೇಖನ
author img

By

Published : Jan 27, 2020, 1:40 PM IST

ನಮ್ಮ ಗಣರಾಜ್ಯದ 71ನೇ ವರ್ಷದ ಹೊಸ್ತಿಲಿನಲ್ಲಿರುವ ನಾವು, ನಮ್ಮ ಸಂವಿಧಾನವು ಮಹಿಳೆಯರು ಮತ್ತು ಮಕ್ಕಳಿಗೆ ನೀಡಿರುವ ಪೂರ್ವಭಾವಿ ಸಾಂವಿಧಾನಿಕ ಬೆಂಬಲದ ಲಾಭವನ್ನು ನಾವು ಎಷ್ಟರ ಮಟ್ಟಿಗೆ ಪಡೆದುಕೊಂಡಿದ್ದೇವೆ ಎಂಬುದನ್ನು ಅವಲೋಕಿಸಬೇಕಿದೆ.

ನಮ್ಮ ಸಂವಿಧಾನದ ಮೂಲಭೂತ ಹಕ್ಕುಗಳ ಅಧ್ಯಾಯವು ಕಾನೂನಿನ ಎದುರು ಎಲ್ಲರಿಗೂ ಸಮಾನತೆಯನ್ನು ಒದಗಿಸುತ್ತದೆ ಮತ್ತು ಕಾನೂನುಗಳ ಸಮಾನ ರಕ್ಷಣೆಯನ್ನು ನೀಡುತ್ತದೆ. ಜೊತೆಗೆ, ಧರ್ಮ, ಜನಾಂಗ, ಜಾತಿ, ಲಿಂಗ, ಹುಟ್ಟಿದ ಸ್ಥಳ ಅಥವಾ ಅವುಗಳಲ್ಲಿ ಯಾವುದಾದರೂ ಆಧಾರದ ಮೇಲೆ ತಾರತಮ್ಯ ಮಾಡುವುದಕ್ಕೆ ಸಂವಿಧಾನ ಎಲ್ಲಿಯೂ ಅವಕಾಶ ನೀಡುವುದಿಲ್ಲ. “ಮಹಿಳೆಯರು ಮತ್ತು ಮಕ್ಕಳಿಗಾಗಿ ಯಾವುದೇ ವಿಶೇಷ ನಿಬಂಧನೆಗಳನ್ನು ಮಾಡುವುದನ್ನು ಈ ವಿಧೇಯಕವು ತಡೆಯುವುದಿಲ್ಲ” ಎಂಬ ಮಾತನ್ನು ವಿಧೇಯಕ 15 (3) ರಲ್ಲಿನ ಆದೇಶವು ಸ್ಪಷ್ಟಪಡಿಸುತ್ತದೆ. ನಮ್ಮ ಸಂವಿಧಾನದ ಚೌಕಟ್ಟುಗಳು ನಮ್ಮ ರಾಜಕೀಯದಲ್ಲಿ ಮುಖ್ಯವಾಹಿನಿಯ ಮಹಿಳೆಯರ ಜವಾಬ್ದಾರಿಯನ್ನು ಗುರುತಿಸಿವೆ ಮತ್ತು ಮಕ್ಕಳ ಆರೈಕೆ ಮತ್ತು ರಕ್ಷಣೆಯ ಮಹತ್ವವನ್ನು ಸಕಾರಾತ್ಮಕವಾಗಿ ಒಪ್ಪಿಕೊಂಡಿವೆ ಎಂಬುದಕ್ಕೆ ಇದು ಸ್ಪಷ್ಟ ಸೂಚನೆಯಾಗಿದೆ. ನಾವು ನಮ್ಮ ಸಂವಿಧಾನದಲ್ಲಿನ ದೃಷ್ಟಿಕೋನವನ್ನು ನಾವು ಗೌರವಿಸಿ, ಮುಂದುವರಿಸಿಕೊಂಡು ಬರುತ್ತಿದ್ದೇವೆಯೇ ಎಂಬುದು 70ನೇ ಗಣತಂತ್ರದ ಹೊಸ್ತಿನಲ್ಲಿ ನಮ್ಮನ್ನು ಕಾಡುವ ಪ್ರಶ್ನೆಯಾಗಿದೆ.

ಮಹಿಳೆಯರಿಗೆ ಸಮಾನತೆ ಮತ್ತು ಅವರ ಹಕ್ಕುಗಳು ಎಂಬ ಕಾನೂನು ಗಣರಾಜ್ಯದ ಆರಂಭಿಕ ವರ್ಷಗಳಲ್ಲಿ ಕೆಲವು ಅಡೆತಡೆಗಳೊಂದಿಗೆ ಪ್ರಾರಂಭವಾಯಿತು. ಆದರೆ 1950ರ ದಶಕದ ಮಧ್ಯಭಾಗದಲ್ಲಿ ಹಿಂದೂ ಸಂಹಿತೆಯ ಅಂಗೀಕಾರವು ಮಹಿಳೆಯರ ಜಗತ್ತಿನಲ್ಲಿ ಒಂದು ಲೋಕವನ್ನು ತೆರೆಯಿತು. ಅವರಿಗೂ ಮಾತನಾಡುವ ಸ್ವತಂತ್ರ ನೀಡಿತು. ಇದರ ಪ್ರಗತಿ ನಿಧಾನವಾಗಿತ್ತು, ಆದರೆ ಸ್ಥಿರವಾಗಿತ್ತು.

ಹೆರಿಗೆ ಪ್ರಯೋಜನ ಕಾಯ್ದೆ ಮತ್ತು ವರದಕ್ಷಿಣೆ ನಿಷೇಧ ಕಾಯ್ದೆ 1961 ರಲ್ಲಿ ಜಾರಿಗೆ ಬಂದಿತು. ಆದರೆ ಕಾನೂನುಗಳಿಂದ ಮಾತ್ರ ಸಮಾಜದಲ್ಲಿನ ಎಲ್ಲವನ್ನೂ ಬದಲಾಯಿಸಲು ಸಾಧ್ಯವಿಲ್ಲ ಎಂಬುದು ಎಂದಿಗೂ ಸತ್ಯ. ಉದಾಹರಣೆಗೆ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304 ಬಿ ವರದಕ್ಷಿಣೆ ಸಂಬಂಧಿತ ಮರಣವನ್ನು ಘೋರ ಅಪರಾಧವನ್ನಾಗಿ ಪರಿಗಣಿಸುತ್ತದೆ. ಹಾಗಿದ್ದರೆ ಈ ಕಾಯ್ದೆಯಿಂದ ವರದಕ್ಷಿಣೆಯಂತಹ ರಾಕ್ಷಸ ಪಿಡುಗಿನಿಂದ ಸಂಭವಿಸುವ ಸಾವು ಪೂರ್ಣವಾಗಿ ನಿರ್ಮೂಲನೆಗೊಂಡಿದೆಯಾ? ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ (ಎನ್‌ಸಿಆರ್‌ಬಿ) ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ ಇಂದಿಗೂ ಪ್ರತಿ ಗಂಟೆಗೆ ಒಂದು ವರದಕ್ಷಿಣೆ ಸಂಬಂಧಿತ ಸಾವು ಸಂಭವಿಸುತ್ತದೆ. ಅಂತೆಯೇ, ಕೌಟುಂಬಿಕ ಹಿಂಸಾಚಾರದಿಂದ ಮಹಿಳೆಯರ ರಕ್ಷಣೆ ಮತ್ತು ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳದ ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರಕ್ಕಾಗಿ ಇತ್ತೀಚಿನ ಕಾನೂನುಗಳು ನಿಜವಾಗಿಯೂ ಪರಿಣಾಮಕಾರಿಯಾಗಿವೆ ಎಂಬುದು ಕೂಡ ಪ್ರಶ್ನೆಯಾಗಿಯೇ ಉಳಿದಿದೆ.

ಮಹಿಳೆಯರ ಶೋಷಣೆ ಹೆಚ್ಚಾಗಿದ್ದ ಭಾರತೀಯ ಸಮಾಜದಲ್ಲಿ ಈ ಕಾನೂನುಗಳು ಅಗತ್ಯವಾಗಿದ್ದವು ಮತ್ತು ಜಾರಿಗೆ ಬಹಳ ಸಮಯ ತೆಗೆದುಕೊಂಡವು. ಇನ್ನೊಂದು ಒಳ್ಳೆಯ ಸುದ್ದಿ ಎಂದರೆ ಈ ಕಾನೂನುಗಳ ಅಸ್ತಿತ್ವದೊಂದಿಗೆ ಸಂವಿಧಾನವು ರೂಪಿಸಿರುವ ಕೆಲವು ಹಕ್ಕುಗಳನ್ನು ಪ್ರತಿಪಾದಿಸಲು ಮಹಿಳೆಯರಿಗೆ ಅಧಿಕಾರ ನೀಡಲಾಗಿದೆ. ಕೇಂದ್ರ ಮಟ್ಟದಲ್ಲಿ ಮಾತ್ರವಲ್ಲದೆ ರಾಜ್ಯದಲ್ಲಿ, ಆ ಮೂಲಕ ತಳಮಟ್ಟದಲ್ಲಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವ, ಸಮಾಜದಲ್ಲಿ ಅವರ ಧ್ವನಿಯನ್ನು ಹೆಚ್ಚಿಸುವ ಕಾರ್ಯ ನಿರಂತರವಾಗಿ ನಡೆದಿದೆ. ಡೈರೆಕ್ಟಿವ್ ಪ್ರಿನ್ಸಿಪಲ್ಸ್ ಆಫ್ ಸ್ಟೇಟ್ ಪಾಲಿಸಿ (ಡಿಪಿಎಸ್ಪಿ) ಎಲ್ಲಾ ಪುರುಷರು ಮತ್ತು ಮಹಿಳೆಯರಿಗೆ ಸಮರ್ಪಕ ಜೀವನೋಪಾಯದ ಹಕ್ಕನ್ನು ನೀಡಲಾಗಿದೆ ಮತ್ತು ಸಮಾನ ಕೆಲಸಕ್ಕೆ ಸಮಾನ ವೇತನವಿದೆ ಎಂದು ರಾಜ್ಯವು ಭದ್ರಪಡಿಸಿಕೊಳ್ಳಬೇಕು ಎಂದು ಸೂಚಿಸುತ್ತದೆ. ಪಂಚಾಯಿತಿಗಳು ಮತ್ತು ಪುರಸಭೆಗಳಲ್ಲಿ ಮಹಿಳೆಯರಿಗೆ (ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು ಜನಾಂಗದವರು ಸೇರಿದಂತೆ) ಸ್ಥಾನಗಳನ್ನು ಕಾಯ್ದಿರಿಸಲು ಸಂವಿಧಾನವು ಅವಕಾಶ ನೀಡುತ್ತದೆ. ಆದರೆ ನಂತರ ನಡೆದಿದ್ದು ಬೇರೆಯೆ.

ನಮ್ಮಲ್ಲಿ ಅನೇಕ ಸಾರ್ವಜನಿಕ ಹೇಳಿಕೆಗಳು(ಅಧಿಕಾರದಲ್ಲಿರುವ ಉನ್ನತ ಸ್ಥಾನಗಳನ್ನು, ರಾಜಕಾರಣಿಗಳನ್ನು ಒಳಗೊಂಡಂತೆ) ಮಹಿಳೆಯರ ಜಾಗವು ಮನೆಯ ಅಡುಗೆ ಎಂಬ ಧೋರಣೆಯನ್ನು ಹೊಂದಿರುವುದನ್ನು ಸೂಚಿಸುತ್ತದೆ. ಕೆಲವು ಕಾಯ್ದಿರಿಸಿದ ಸ್ಥಾನಗಳಲ್ಲಿ ನೆಪ ಮಾತ್ರಕ್ಕೆ ಮಹಿಳೆಯರು ಕುಳಿತಿದ್ದಾರೆ. ಅಧಿಕಾರ ಚಲಾಯಿಸುವವರು ಪುರುಷರೇ ಎಂಬುದು ನೋಡಿದ ಕೂಡಲೆ ತಿಳಿಯುವ ಸಾಮಾನ್ಯ ಸಂಗತಿಯಾಗಿದೆ. ಮೀಸಲು ಸ್ಥಾನಗಳಲ್ಲಿ ಪ್ರಭಾವಿ ರಾಜಕಾರಣಿಗಳ ಪತ್ನಿಯರು ಕುಳಿತುಕೊಳ್ಳುವುದು ಇದಕ್ಕೊಂದು ಅತ್ಯುತ್ತಮ ನಿದರ್ಶನ. ಆದ್ದರಿಂದ, ನಮ್ಮ ಸಂವಿಧಾನದ ಚೌಕಟ್ಟುಗಳು ಬಯಸಿದ ಮತ್ತು ದೃಶ್ಯೀಕರಿಸಿದ ಸಬಲೀಕರಣವನ್ನು ಸಾಧಿಸಲು ಕಾನೂನುಗಳು ಮಾತ್ರ ಸಾಕಾಗುವುದಿಲ್ಲ. ನಮ್ಮಲ್ಲಿನ ಮನಸ್ಥಿತಿ ಬದಲಾವಣೆಯ ತುರ್ತು ಅಗತ್ಯವಿದೆ. ಕಾನೂನು ರೂಪಿಸಿದ ಕೂಡಲೇ ಎಲ್ಲವೂ ಬದಲಾಗುವುದಿಲ್ಲ. ಕಾನೂನು ಪಾಲನೆಯೊಂದಿಗೆ ನಾವು ಬದಲಾಗಬೇಕು.

ಇಂದಿನ ಮಕ್ಕಳೆ ಮುಂದಿನ ಪ್ರಜೆಗಳು ಎಂದು ನಂಬಿಕೊಂಡು ಬಂದಿರುವ ಪ್ರಜಾತಂತ್ರ ರಾಷ್ಟ್ರ ನಮ್ಮದು. ಹೀಗಾಗಿ ಮಕ್ಕಳ ಹಕ್ಕುಗಳ ರಕ್ಷಣೆಗೂ ಸಂವಿಧಾನದಲ್ಲಿ ಪ್ರಾರಂಭದಲ್ಲಿಯೇ ಜಾಗ ನೀಡಲಾಗಿದೆ. ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯ 25 ನೇ ವಿಧೇಯಕವು ವಿಶೇಷ ಕಾಳಜಿ ಮತ್ತು ಸಹಾಯಕ್ಕಾಗಿ ಬಾಲ್ಯದ ಅರ್ಹತೆಯನ್ನು ಗುರುತಿಸುತ್ತದೆ. ಈ ಅರ್ಹತೆಗೆ ಅನುಗುಣವಾಗಿ, ನಮ್ಮ ಸಂವಿಧಾನವು 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾವುದೇ ಮಗುವನ್ನು ಯಾವುದೇ ಕಾರ್ಖಾನೆ ಅಥವಾ ಗಣಿಗಳಲ್ಲಿ ಕೆಲಸ ಮಾಡಲು ಅಥವಾ ಯಾವುದೇ ಅಪಾಯಕಾರಿ ಉದ್ಯೋಗದಲ್ಲಿ ತೊಡಗಿಸಿಕೊಳ್ಳಲು ಅವಕಾಶ ನೀಡುವುದಿಲ್ಲ. ಮಕ್ಕಳ ಕೋಮಲ ವಯಸ್ಸನ್ನು ಭದ್ರಪಡಿಸುವ ನಿಟ್ಟಿನಲ್ಲಿ ರಾಜ್ಯವು ತನ್ನ ನೀತಿಯನ್ನು ಕಟ್ಟುನಿಟ್ಟುಗೊಳಿಸಬೇಕು. ಈ ವಿಷಯದಲ್ಲಿ ಸಂವಿಧಾನದ ದುರುಪಯೋಗವಾಗಬಾರದು ಎಂದು ಡಿಪಿಎಸ್ಪಿ ಬಯಸುತ್ತದೆ ಮತ್ತು ಮಕ್ಕಳಿಗೆ ಆರೋಗ್ಯಕರ ರೀತಿಯಲ್ಲಿ ಅಭಿವೃದ್ಧಿ ಹೊಂದಲು ಸ್ವಾತಂತ್ರ್ಯ ನೀಡುತ್ತದೆ.

ಈ ನಿಟ್ಟಿನಲ್ಲಿ ಸಾಕಷ್ಟು ಅವಕಾಶಗಳು ಮತ್ತು ಸೌಲಭ್ಯಗಳನ್ನು ನೀಡಲಾಗುತ್ತದೆ. ಬಾಲಕರು ಮತ್ತು ಯುವಕರನ್ನು ಶೋಷಣೆಯಿಂದ ರಕ್ಷಿಸುವ ಹಕ್ಕನ್ನು ನೀಡಲಾಗಿದೆ. ನೈತಿಕ ಮತ್ತು ದೈಹಿಕ ಶೋಷಣೆಯಿಂದ ಕಾಪಾಡುವ ಕಾನೂನಿದೆ. ಇವು ಕಾನೂನಿನ ಪುಸ್ತಕದಲ್ಲಿರುವ ಆದರ್ಶಗಳು. ಆದರೆ ಮಕ್ಕಳ ಈ ಹಕ್ಕುಗಳನ್ನು ರಕ್ಷಿಸಲು ನಿಜವಾಗಿಯೂ ನಾವು ಏನು ಮಾಡಿದ್ದೇವೆ? ದೇಶದಲ್ಲಿ ಮಕ್ಕಳ ಸ್ಥಿತಿ ಹೇಗಿದೆ? ಬಾಲ ಕಾರ್ಮಿಕ ಪದ್ಧತಿ ನಿಜವಾಗಿಯೂ ನಿರ್ಮೂಲನೆಗೊಂಡಿದೆಯೇ ಎಂಬುದು ದೇಶ ಸ್ವತಂತ್ರ ಪಡೆದು 7 ದಶಕಗಳ ಬಳಿಕವೂ ನಮಗೆ ನಾವೇ ಕೇಳಿಕೊಳ್ಳಬೇಕಾದ ಪ್ರಶ್ನೆಯಾಗಿದೆ.

ಸಮಾಜದಲ್ಲಿ ತಮ್ಮ ವಿರುದ್ಧದ ಅನ್ಯಾಯಗಳಿಗೆ ಧ್ವನಿಯೆತ್ತಲಾಗದ ಮಕ್ಕಳ ಅನುಕೂಲಕ್ಕಾಗಿ, ವಿಶೇಷವಾಗಿ ಹೆಣ್ಣು ಮಗುವಿಗೆ ರಾಷ್ಟ್ರೀಯ ನೀತಿಗಳನ್ನು ರೂಪಿಸಲಾಗಿದೆ. ಅವರ ಆರೈಕೆ ಮತ್ತು ರಕ್ಷಣೆಗಾಗಿ ಬಾಲಾಪರಾಧಿ ನ್ಯಾಯ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಅಂತೆಯೇ, ಹದಿನಾಲ್ಕು ವರ್ಷದವರೆಗೆ ಉಚಿತ ಶಿಕ್ಷಣದ ಹಕ್ಕನ್ನು ಸಹ ಒದಗಿಸಲಾಗಿದೆ. ಆದಾಗ್ಯೂ, ನೈಜ ಚಿತ್ರಣವು ಭಯಾನಕವಾಗಿದೆ ಮತ್ತು ಅತ್ಯಂತ ನಿರಾಶಾದಾಯಕವಾಗಿದೆ.

ಕೈಲಾಶ್ ಸತ್ಯಾರ್ಥಿಯಂತಹ ಹೋರಾಟಗಾರರ ಗಮನಾರ್ಹ ಪ್ರಯತ್ನಗಳ ಹೊರತಾಗಿಯೂ ಬಾಲಕಾರ್ಮಿಕ ಪದ್ಧತಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮುಂದುವರೆದಿದೆ. ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದಾಗಿ ದೇಶದ ಕೆಲವೆಡೆ ಕಳೆದ ಕೆಲವು ತಿಂಗಳುಗಳಲ್ಲಿ ಸಂಭವಿಸಿದ ನೂರಾರು ಶಿಶುಗಳ ಸಾವು ಆಘಾತವನ್ನುಂಟು ಮಾಡಿದೆ. ಎನ್‌ಸಿಆರ್‌ಬಿ ಒದಗಿಸಿದ ಅಂಕಿಅಂಶಗಳ ಪ್ರಕಾರ ಪ್ರತಿದಿನ 250ಕ್ಕೂ ಹೆಚ್ಚು ಮಕ್ಕಳು ಕಾಣೆಯಾಗುತ್ತಿದ್ದಾರೆ.

ಅನಾಥ ಮಕ್ಕಳ ಆಶ್ರಯ ಮನೆಯಲ್ಲಿ 30ಕ್ಕೂ ಹೆಚ್ಚು ಯುವತಿಯರನ್ನು ವ್ಯವಸ್ಥಿತವಾಗಿ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿರುವ ಹಲವಾರು ವ್ಯಕ್ತಿಗಳನ್ನು ಬಂಧಿಸಲಾಗಿದೆ ಎಂಬ ಇತ್ತೀಚಿನ ಅಪರಾಧದ ಸುದ್ದಿಯೊಂದು ನಮ್ಮ ಸಂವಿಧಾನದ ಪ್ರಕಾರ ಮಕ್ಕಳಿಗೆ ರಕ್ಷಣೆ ನೀಡಲಾಗುತ್ತಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಬಾಲಾಪರಾಧಿಗಳು ಮಾಡಿದ ಅಪರಾಧಗಳು ಕಡಿಮೆಯಾಗುತ್ತಿದೆ. ಆದರೆ ಮಕ್ಕಳನ್ನು ಶೋಷಿಸುವ ಅಪರಾಧಗಳು ಹೆಚ್ಚುತ್ತಿವೆ.

ದೊಡ್ಡವರಿಂದ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು 2016 ಮತ್ತು 2018 ರ ನಡುವೆ ಗಣನೀಯ ಹೆಚ್ಚಳವನ್ನು ತೋರಿಸಿದೆ ಎಂದು ಎನ್‌ಸಿಆರ್‌ಬಿ ಹೇಳುತ್ತದೆ. ಶಿಕ್ಷಣ ಹಕ್ಕು ಕಾಯ್ದೆಯನ್ನು ಸುಮಾರು ಒಂಬತ್ತು ವರ್ಷಗಳ ಹಿಂದೆ ಜಾರಿಗೆ ತರಲಾಯಿತು. ಇದು ಪ್ರಯೋಜನಕಾರಿಯಾಗಿದೆ, ಆದರೆ ಎಷ್ಟರ ಮಟ್ಟಿಗೆ? ಎಂಬುದು ಪ್ರಶ್ನೆಯಾಗಿಯೇ ಉಳಿಯುತ್ತದೆ! ಮೂಲಸೌಕರ್ಯ ಅಗತ್ಯತೆಗಳು ಮತ್ತು ಅರ್ಹ ಶಿಕ್ಷಕರ ಕೊರತೆಯು ಅನೇಕ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಮೂಲಭೂತ ಹಕ್ಕನ್ನು ನಿರಾಕರಿಸಿದೆ. ಹಳ್ಳಿಗಳು ಮತ್ತು ನಗರಗಳಲ್ಲಿ ಇಂದಿಗೂ ಅದೆಷ್ಟೋ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ಕೂಡ ದೊರೆಯುತ್ತಿಲ್ಲ ಎಂಬುದು ವಿಷಾದದ ಸಂಗತಿ.

ಹೀಗಾಗಿ, ಸಕ್ರಿಯ ಸಮಾಜವಾಗಿ ಮತ್ತು ಪ್ರಬಲ ಪ್ರಜಾಪ್ರಭುತ್ವದ ಧ್ವನಿಯಾಗಿ ನಾವು ಉತ್ತರಿಸಬೇಕಾದ ಪ್ರಶ್ನೆಗಳು ಸಾಕಷ್ಟಿವೆ. ಸಂವಿಧಾನದ ಮೂಲಭೂತ ಆಶಯಕ್ಕೆ ಅನುಗುಣವಾಗಿ ನಾವು ಏನನ್ನು ಸಾಧಿಸಿದ್ದೇವೆ?, ನಾವೇಕೆ ಕೆಲವಷ್ಟು ವಿಷಯಗಳಲ್ಲಿ ಕಣ್ಣಿಗೆ ಕಾಣುವಂತೆ ವೈಫಲ್ಯ ಎದುರಿಸುತ್ತಿದ್ದೇವೆ, ಮತ್ತು ಅದಕ್ಕೆ ಲಭ್ಯವಿರುವ ಪರಿಹಾರಗಳು ಏನು? ಎಂಬುದನ್ನು ಅವಲೋಕಿಸಬೇಕಿದೆ. ಆದರೆ ಮೊದಲಿಗೆ, ಸಮಯವು ಬದಲಾಗುತ್ತಿದೆ ಎಂಬುದನ್ನು ನೆನಪಿಸಲು ಚೀರಾಡಬೇಕಿದೆ. ಬಹಳ ಹಿಂದೆಯೇ ಮಹಿಳೆಯರು ತಮಗೆ ಹಕ್ಕಿದೆ ಎಂಬುದನ್ನು ತಿಳಿದುಕೊಂಡಿದ್ದಾರೆ. ಆದರೆ ಈಗ ಈ ಹಕ್ಕುಗಳನ್ನು ಪ್ರತಿಪಾದಿಸಲಾಗುತ್ತಿದೆ ಮತ್ತು ಸಮಾನತೆ ಮತ್ತು ಅವರ ಘನತೆಯ ಆಧಾರದ ಮೇಲೆ ಅದರ ರಕ್ಷಣೆಗೆ ಸಂವಿಧಾನವು ಅವರನ್ನು ಪ್ರೋತ್ಸಾಹಿಸುತ್ತದೆ.

ಇದನ್ನು ನಮ್ಮ ನಾಯಕರು ಸೇರಿದಂತೆ ಯಾರೂ ನಿರ್ಲಕ್ಷಿಸಲು ಅಥವಾ ನಿಗ್ರಹಿಸಲು ಪ್ರಯತ್ನಿಸಬಾರದು. ನಮ್ಮ ಜನಸಂಖ್ಯೆಯ ಸುಮಾರು ಶೇ.37ರಷ್ಟಿರುವ ಮತ್ತು ನಮ್ಮ ದೇಶದ ಭವಿಷ್ಯವಾಗಿರುವ ಮಕ್ಕಳ ಹಕ್ಕುಗಳನ್ನು ಕಳೆದ 70 ವರ್ಷಗಳಲ್ಲಿ ಕಡೆಗಣಿಸಲಾಗಿದೆ ಅಥವಾ ಅವರ ಹಕ್ಕುಗಳ ರಕ್ಷಣೆಗೆ ಕಡಿಮೆ ಪ್ರಾಮುಖ್ಯತೆ ನೀಡಲಾಗಿದೆ. ನಾವು ಖಂಡಿತವಾಗಿಯೂ ಅವರ ಹಕ್ಕುಗಳನ್ನು ಗುರುತಿಸಬೇಕು ಮತ್ತು ಅದರ ರಕ್ಷಣೆಗೆ ಒತ್ತು ನೀಡಬೇಕು. ಮಹಿಳೆಯರು ಮತ್ತು ಮಕ್ಕಳ ಅನುಕೂಲಕ್ಕಾಗಿ ಜಾರಿಗೆ ತಂದ ಮತ್ತು ರೂಪಿಸಲಾದ ಕಾನೂನುಗಳು ಮತ್ತು ಕಲ್ಯಾಣ ಯೋಜನೆಗಳ ಅನುಷ್ಠಾನದ ಸಾಮಾಜಿಕ ಲೆಕ್ಕಪರಿಶೋಧನೆಯನ್ನು ನಾವು ನಡೆಸಬೇಕಾಗಿದೆ. ಇದು ಕೇವಲ ಒಂದು ನಿಷ್ಪಕ್ಷಪಾತ ಮತ್ತು ವಸ್ತುನಿಷ್ಠ ವಿಶ್ಲೇಷಣೆಯಾಗಬೇಕು, ಉದಾಹರಣೆಗೆ ಬಾಲಕಿಯರಿಗೆ ಆಶ್ರಯ ನೀಡುವ ಮನೆಯಲ್ಲಿನ ಭಯಾನಕ ಸ್ಥಿತಿಯನ್ನು ಬಹಿರಂಗಪಡಿಸಿದ್ದು ಸಮಾಜದಲ್ಲಿನ ನೈಜ ಚಿತ್ರಣವನ್ನು ಬೆಳಕಿಗೆ ತರುತ್ತದೆ.

ಇಂಥ ಸಾಕಷ್ಟು ಉದಾಹರಣೆಗಳು ನಮ್ಮ ಮುಂದೆ ಸಿಗುತ್ತವೆ. ಕೆಲಸದ ಸ್ಥಳದಲ್ಲಿ ಮಹಿಳೆಯರ ಸಮಾತನೆ ಹಾಳಾಗಲಿ, ಅವರ ಮೇಲಿನ ದೌರ್ಜನ್ಯ ಕೂಡ ನಿಂತಿಲ್ಲ. ಇಂತಹ ಅದೆಷ್ಟೋ ವರದಿಗಳನ್ನು ದಿನನಿತ್ಯ ನೋಡುತ್ತೇವೆ. ಇಂದಿನ ಮಕ್ಕಳೆ ಮುಂದಿನ ಪ್ರಜೆಗಳು ಎನ್ನುತ್ತಲೇ ಮಕ್ಕಳ ಮಾರಾಟ ಜಾಲ, ಮಕ್ಕಳನ್ನು ಭಿಕ್ಷಾಟನೆ ತಳ್ಳುವ ಜಾಲಗಳ ಬಲೆಗೆ ಸಿಲುಕುತ್ತೇವೆ. ನಮ್ಮ ಗಣರಾಜ್ಯದ 70ನೇ ವರ್ಷದಲ್ಲರುವ ನಮ್ಮ ಮುಂದೆ ಇದರ ನಿವಾರಣೆಗೆ ಇರುವ ಮಾರ್ಗಸೂಚಿ ಏನು? ಭಾರತ ಸೇರಿದಂತೆ 193 ದೇಶಗಳ ನಾಯಕರು ಒಪ್ಪಿಕೊಂಡಿರುವ ಸುಸ್ಥಿರ ಅಭಿವೃದ್ಧಿ ಗುರಿಗಳೊಂದೇ ಇದಕ್ಕೆ ಉತ್ತರ.

ಮುಂಬರುವ ದಶಕದಲ್ಲಿ ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳನ್ನು ಒಳಗೊಂಡಿರುವ ಈ ಗುರಿಗಳನ್ನು ಸಾಧಿಸಲು ನಾವು ಪ್ರಜಾಪ್ರಭುತ್ವ ರೀತಿಯಲ್ಲಿ ಒಟ್ಟಾಗಿ ಕೆಲಸ ಮಾಡಬೇಕಾಗಿದೆ ಮತ್ತು ಆಗ ಮಾತ್ರ ನಾವು ಏಳಿಗೆ ಹೊಂದುತ್ತೇವೆ. ನಾವು ಎಲ್ಲಿ ಎಡವಿದ್ದೇವೆ? ಸಂವಿಧಾನ ಆರಂಭದಲ್ಲಿಯೇ ಈ ಹಕ್ಕುಗಳನ್ನು ನೀಡಿದ್ದರೂ ಯಾಕೆ ಅದರ ಅನುಷ್ಠಾನವಾಗುತ್ತಿಲ್ಲ? ಖಂಡಿತ ಈ ಹೊತ್ತಿನಲ್ಲಿ ಅವಲೋಕಿಸಬೇಕಾದ ಸಂಗತಿಯಿದು. ನಾವು ಮಲಗುವ ಮುನ್ನ ಸಾಗಬೇಕಿರುವ ಮೈಲುಗಳು ದೂರವಿದೆ ಎಂಬುದನ್ನು ಅರಿಯಬೇಕು.

-ಜಸ್ಟೀಸ್‌ ಮದನ್‌ ಬಿ. ಲೋಕೂರ್‌ (ನಿವೃತ್ತ)

Intro:Body:

FOR UPLOAD 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.