ETV Bharat / bharat

72 ಗಂಟೆಗಳಲ್ಲಿ ಈಶಾನ್ಯ ರಾಜ್ಯಗಳಲ್ಲಿ ಭಾರಿ ಮಳೆ: ಹಲವೆಡೆ ತಾಪಮಾನದಲ್ಲಿಲ್ಲ ಬದಲಾವಣೆ!

72 ಗಂಟೆಗಳಲ್ಲಿ ನೈರುತ್ಯ ಮುಂಗಾರು ಪ್ರವೇಶಿಸಲಿದ್ದು, ಈಶಾನ್ಯ ರಾಜ್ಯಗಳಾದ ಅಸ್ಸೋಂ, ಮಣಿಪುರ, ನಾಗಾಲ್ಯಾಂಡ್​, ಸಿಕ್ಕಿಂ ಹಾಗೂ ತ್ರಿಪುಗಳಲ್ಲಿ ಮೇ 29ರಿಂದ ಜೂನ್​ವರೆಗೆ ಧಾರಕಾರಾವಾಗಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

author img

By

Published : May 28, 2019, 7:52 PM IST

ತಾಪಮಾನ

ನವದೆಹಲಿ: ಮುಂದಿನ 72 ಗಂಟೆಗಳ ಭಾರತದ ಕೆಲವೆಡೆ ವಿಪರೀತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಆದರೆ, ಬಹುತೇಕ ಭಾಗಗಳಲ್ಲಿ ತಾಪಮಾನ ಯಥಾಸ್ಥಿತಿ ಇರಲಿದ್ದು, ಮತ್ತೆ ಕೆಲವೆಡೆ ಇನ್ನಷ್ಟು ಏರಿಕೆಯಾಗುವ ಮಾಹಿತಿಯನ್ನೂ ನೀಡಿದೆ.

72 ಗಂಟೆಗಳಲ್ಲಿ ನೈರುತ್ಯ ಮುಂಗಾರು ಪ್ರವೇಶಿಸಲಿದ್ದು, ಬಂಗಾಳ, ಅಂಡಮಾನ್​ ದ್ವೀಪ ಪ್ರದೇಶ ಹಾಗೂ ಉತ್ತರ ಅಂಡಮಾನ್​ ಸಮುದ್ರ ಪ್ರದೇಶಗಳಲ್ಲಿ ಮಳೆಯಾಗಲಿದೆ. ಅಲ್ಲದೆ, ಈಶಾನ್ಯ ರಾಜ್ಯಗಳಾದ ಅಸ್ಸೋಂ, ಮಣಿಪುರ, ನಾಗಾಲ್ಯಾಂಡ್​, ಸಿಕ್ಕಿಂ ಹಾಗೂ ತ್ರಿಪುಗಳಲ್ಲಿ ಮೇ 29ರಿಂದ ಜೂನ್​ವರೆಗೆ ಧಾರಕಾರ ಮಳೆ ಸುರಿಯಲಿದೆ ಎಂದು ಇಲಾಖೆ ಹೇಳಿದೆ.

ಮಧ್ಯಪ್ರದೇಶ, ಛತ್ತೀಸ್​ಗಢ, ಮಾಹಾರಾಷ್ಟ್ರ, ತೆಲಂಗಾಣ, ಹರ್ಯಾಣ, ಚಂಡೀಗಢ, ದೆಹಲಿ, ರಾಜಸ್ಥಾನ ಬಿಹಾರ, ಜಾರ್ಖಂಡ, ಉತ್ತರಪ್ರದೇಶ ಹಾಗೂ ಒಡಿಶಾಗಳಲ್ಲಿ ಇನ್ನೂ 2-3 ದಿನಗಳ ಕಾಲ ಬಿಸಿ ಗಾಳಿ ಬೀಸಲಿದೆ.

ಹರ್ಯಾಣ, ರಾಜಸ್ಥಾನ ಹಾಗೂ ಉತ್ತರಪ್ರದೇಶಗಳಲ್ಲಿ 3-4ದಿನಗಳ ಕಾಲ ಧೂಳುಮಿಶ್ರಿತ ಬಿರುಗಾಳಿ ಬೀಸಲಿದೆ ಎಂದೂ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

3-4 ದಿನಗಳಲ್ಲಿ ವಾಯವ್ಯ ಭಾರತದಲ್ಲಿ ತಾಪಮಾನ ಪ್ರಸ್ತುತ ಇರುವುದಕ್ಕಿಂತ 2-3 ಸೆ.ನಷ್ಟು ಏರಿಕೆಯಾಗಲಿದೆ. ಇನ್ನುಳಿದ ಭಾಗಗಳಲ್ಲಿ ತಾಪಮಾನದ ಯಾವುದೇ ಬದಲಾವಣೆ ಆಗಲ್ಲ ಎಂದು ತಿಳಿದುಬಂದಿದೆ.

Intro:Body:

monsoon

Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.