ETV Bharat / bharat

'ನಿಮ್ಮ ಧೈರ್ಯಕ್ಕೆ ಹ್ಯಾಟ್ಸ್​​ ಆಫ್​​​​​​​​​​​'... ಭಗತ್​​ ಸಿಂಗ್​ಗೆ ಕಂಗನಾ ಹೋಲಿಕೆ ಮಾಡಿದ ನಟ ವಿಶಾಲ್!

ಮಹಾರಾಷ್ಟ್ರ ಸರ್ಕಾರ ಹಾಗೂ ನಟಿ ಕಂಗನಾ ರಣಾವತ್​ ನಡುವೆ ಮುಸುಕಿನ ಗುದ್ದಾಟ ಮುಂದುವರೆದಿದ್ದು, ಇದೀಗ ಬಾಲಿವುಡ್​ ನಟಿ ಪರ ತಮಿಳು ನಟ ವಿಶಾಲ್​ ಟ್ವೀಟ್​ ಮಾಡಿದ್ದಾರೆ.

kangana ranaut
kangana ranaut
author img

By

Published : Sep 10, 2020, 7:43 PM IST

ಚೆನ್ನೈ: ಮಹಾರಾಷ್ಟ್ರದಲ್ಲಿ ಕಂಗನಾ ರಣಾವತ್​ ಹಾಗೂ ಸರ್ಕಾರದ ನಡುವಿನ ಮುಸುಕಿನ ಗುದ್ದಾಟ ಮುಂದುವರೆದಿದ್ದು, ಇದರ ಮಧ್ಯೆ ತಮಿಳು ನಟ ವಿಶಾಲ್​ ಕಂಗನಾ ರಣಾವತ್​​ ಪರ ಬ್ಯಾಟ್​ ಬೀಸಿದ್ದಾರೆ.

ನಿಮ್ಮ ಧೈರ್ಯಕ್ಕೆ ಹ್ಯಾಟ್ಸ್​​ ಆಫ್​​. ಯಾವುದು ಸರಿ ಮತ್ತು ಯಾವುದು ತಪ್ಪು ಎಂದು ಹೇಳಲು ನೀವು ಎಂದಿಗೂ ಎರಡು ಸಲ ಯೋಚಿಸಿಲ್ಲ. ಇದು ನಿಮ್ಮ ವೈಯಕ್ತಿಕ ಸಮಸ್ಯೆಯಲ್ಲ. ಸರ್ಕಾರದಿಂದ ತೊಂದರೆ ಎದುರಿಸುತ್ತಿದ್ದಾಗ ಕೂಡ ನೀವೂ ಧೈರ್ಯವಾಗಿದ್ದೀರಿ. 1920ರಲ್ಲಿ ಭಗತ್​ ಸಿಂಗ್​ ಮಾಡಿದಂತೆಯೇ ನೀವೂ ಮಾಡುತ್ತಿದ್ದೀರಿ ಎಂದು ಟ್ವೀಟರ್​​ನಲ್ಲಿ ಬರೆದುಕೊಂಡಿದ್ದಾರೆ.

South Actor Vishal
ತಮಿಳು ನಟ ವಿಶಾಲ್​

ಸರ್ಕಾರ ನಡೆದುಕೊಳ್ಳುವ ರೀತಿ ಸರಿಯಾಗಿಲ್ಲ ಎಂದು ಗೊತ್ತಾದರೆ ಅದರ ವಿರುದ್ಧ ಜನರು ಮಾತನಾಡಲು ಇದೊಂದು ಉದಾಹರಣೆಯಾಗಿದೆ. ನಿಮಗೆ ನಾನು ನಮಸ್ಕರಿಸುತ್ತೇನೆ ಎಂದು ಹೇಳಿದ್ದಾರೆ. ರಾಷ್ಟ್ರೀಯ ಪ್ರಶಸ್ತಿ ವಿಜೇತೆ ಕಂಗನಾ ರಣಾವತ್​​ ಸದ್ಯ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಜೀವನ ಆಧಾರಿತ ಚಿತ್ರದಲ್ಲಿ ನಟನೆ ಮಾಡುತ್ತಿದ್ದಾರೆ.

ಮುಂಬೈ ಈಗ ಪಾಕ್​ ಆಕ್ರಮಿತ ಕಾಶ್ಮೀರದಂತೆ ಭಾಸವಾಗುತ್ತಿದೆ ಎಂದು ನಟಿ ಕಂಗನಾ ರಣಾವತ್​ ಟ್ವೀಟ್​ ಮಾಡುತ್ತಿದ್ದಂತೆ ಮಹಾರಾಷ್ಟ್ರ ಆಡಳಿತರೂಢ ಪಕ್ಷ ಅವರ ಮೇಲೆ ಟೀಕಾ ಪ್ರಹಾರ ನಡೆಸುತ್ತಿದೆ. ಜತೆಗೆ ಅವರ ಕಚೇರಿ ಕೂಡ ಧ್ವಂಸ ಮಾಡಲಾಗಿದೆ. ಈಗಾಗಲೇ ಕೇಂದ್ರ ಸಚಿವ ರಾಮದಾಸ್​ ಅಟ್ಟವಾಲೆ ಅವರ ನಿವಾಸಕ್ಕೆ ಭೇಟಿ ನೀಡಿ, ಮಾಹಿತಿ ಸಹ ಪಡೆದುಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.