ETV Bharat / bharat

ಹೊಸರೂಪದಲ್ಲಿ   ಸೋನಿ ಎಕ್ಸ್​​ಪೀರಿಯಾ ಅನಾವರಣ: ಇದರ ವೈಶಿಷ್ಟ್ಯತೆಗಳೇನು? - ಎಕ್ಸ್ಪೀರಿಯಾ 1 ಮಾರ್ಕ್ 2 ನ ವೈಶಿಷ್ಟ್ಯಗಳು

ಸೋನಿ ತನ್ನ ಈ ಹೊಸ ಸ್ಮಾರ್ಟ್​ಫೋನ್​ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದು, ಅತ್ಯಂತ ವಿಭಿನ್ನ ರೀತಿಯ ವೈಶಿಷ್ಟಗಳನ್ನು ಈ ಮೊಬೈಲ್​ ಹೊಂದಿದೆ ಎಂದು ತಿಳಿಸಿದೆ.

sony-resurrects-headphone-jack-with-camera-focused-5g-phone
ಎಕ್ಸ್ಪೀರಿಯಾ 1 ಮಾರ್ಕ್ 2
author img

By

Published : Feb 25, 2020, 6:08 PM IST

ಕೊರೊನಾ ವೈರಸ್​ ಹಿನ್ನೆಲೆ ವೈರಸ್ ಬಾರ್ಸಿಲೋನಾದಲ್ಲಿ ಆಯೋಜನೆ ಮಾಡಲಾಗಿದ್ದ ಮೊಬೈಲ್ ವರ್ಲ್ಡ್ ಕಾಂಗ್ರೆಸ್ (ಎಂಡಬ್ಲ್ಯೂಸಿ) ಟೆಕ್ ಮೇಳವನ್ನು ರದ್ದುಗೊಳಿಸಲಾಗಿದೆ. ಆದರೆ, ನಿನ್ನೆ ಸೋನಿಯ ಹೊಸ ಎಕ್ಸ್​​ಪೀರಿಯಾ1 ಮಾರ್ಕ್ 2 (Xperia 1 Mark 2) ಅನ್ನು ವೀಡಿಯೊ ಕಾನ್ಫರೆನ್ಸ್​​​ ಮಾಡುವ ಮೂಲಕ ಅನಾವರಣಗೊಳಿಸಲಾಗಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಸೋನಿ ಉಳಿವು ನಿರ್ಣಾಯಕ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಸೋನಿ ತನ್ನ ಈ ಹೊಸ ಸ್ಮಾರ್ಟ್​ಫೋನ್​ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದು, ಅತ್ಯಂತ ವಿಭಿನ್ನ ರೀತಿಯ ವೈಶಿಷ್ಟಗಳನ್ನು ಈ ಮೊಬೈಲ್​ ಹೊಂದಿದೆ ಎಂದು ತಿಳಿಸಿದೆ. ಇತ್ತೀಚೆಗೆ ಜಾಗತಿಕ ಮಟ್ಟದಲ್ಲಿ ಕುಸಿಯುತ್ತಿರುವ ಸೋನಿ ಈ ಸ್ಮಾರ್ಟ್​ಫೋನ್​ನಿಂದ ಹೊಸ ಯಶಸ್ಸನ್ನು ಕಾಣಲಿದೆ ಎಂದು ಹೇಳಿಕೊಂಡಿದೆ.

Sony resurrects headphone jack with camera-focused 5G phone
ಕ್ಯಾಮರಾ

ಎಕ್ಸ್​​ಪೀರಿಯಾ1 ಮಾರ್ಕ್ 2 ನ ವೈಶಿಷ್ಟ್ಯಗಳು:

  • ಎಕ್ಸ್​​ಪೀರಿಯಾ 1 ಮಾರ್ಕ್ 2 ಅತ್ಯಂತ ವೇಗವಾಗಿ ಕಾರ್ಯನಿರ್ವಹಿಸಲಿದೆ.
  • ಇದು ವಿಶೇಷ ಇಮೇಜಿಂಗ್ ತಂತ್ರಜ್ಞಾನ ಮತ್ತು 5 ಜಿ ಸಂಪರ್ಕವನ್ನು ಹೊಂದಿದೆ.
  • ವಿಶ್ವದ ಮೊದಲ ಟ್ರಿಪಲ್-ಲೆನ್ಸ್ ವ್ಯವಸ್ಥೆ ಇದರಲ್ಲಿದ್ದು, ಪ್ರತಿ ಸೆಕೆಂಡಿಗೆ 20 ಪ್ರೇಮ್​ಗಳನ್ನು ಸೆರೆಹಿಡಿಯುವ ಶಕ್ತಿ ಈ ಮೊಬೈಲ್​ಗೆ ಇದೆ.
  • ಹ್ಯಾಂಡ್​ಸೆಟ್​ನಲ್ಲಿ ಮನುಷ್ಯರಿಗೆ ಮಾತ್ರ ಐ_ಟ್ರಾಕಿಂಗ್​ ವ್ಯವಸ್ಥೆ ಇತ್ತು, ಈಗ ಪ್ರಾಣಿಗಳಿಗೂ ಇದನ್ನು ಅನ್ವಯ ಆಗುವ ಹಾಗೆ ತಯಾರು ಮಾಡಲಾಗಿದೆ. ಪ್ರಾಣಿಪ್ರಿಯರು ಸುಂದರವಾದ ಚಿತ್ರಗಳನ್ನು ಈ ಮುಖಾಂತರ ತೆಗೆಯಬಹುದಾಗಿದೆ.
  • ಸ್ಮಾರ್ಟ್ ಫೋನ್ 6.5-ಇಂಚಿನ ಅಳತೆ ಹೊಂದಿದ್ದು, 4 ಕೆ ಎಚ್‌ಡಿಆರ್ ಡಿಸ್​ಪ್ಲೇ ಇದೆ. ಸಿನೆಮಾ ಶೈಲಿಯ 21: 9 ಅಸ್ಪೆಕ್ಟ್​ ರೇಟಿಯೋ ಒಳಗೊಂಡಿದ್ದು, ಇದಕ್ಕೆ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 865 5 ಜಿ ಚಿಪ್‌ಸೆಟ್​ನ್ನು ಅಳವಡಿಸಲಾಗಿದೆ.

ಹೊಚ್ಚ ಹೊಸ 5 ಜಿ ತಂತ್ರಜ್ಞಾನ ಇದರಲ್ಲಿದ್ದು, ಅದ್ಭುತ ಪರದೆ, ಧೀರ್ಘ ಬ್ಯಾಟರಿ ಬಾಳಿಕೆ ಹಾಗೂ ವೇಗದ ಚಾರ್ಜಿಂಗ್ ಈ ಮೊಬೈಲ್​ನ ಪ್ರಮುಖ ವೈಶಿಷ್ಟ. ಸೋನಿ ಮೊಬೈಲ್ ಬ್ರ್ಯಾಂಡ್ ಇತ್ತೀಚಿನ ದಿನಗಳಲ್ಲಿ ಯಶಸ್ವಿ ಕ್ಷೇತ್ರಗಳ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.