ETV Bharat / bharat

ಕೊರೊನಾ ಸ್ಥಿತಿಗತಿ ಬಗ್ಗೆ ಚರ್ಚಿಸಲು 11 ಸದಸ್ಯರ ಸಮಿತಿ ರಚಿಸಿದ ಕಾಂಗ್ರೆಸ್ - ಕಾಂಗ್ರೆಸ್​ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ

ಕೋವಿಡ್​ 19 ಸಂಬಂಧಿತ ವಿಷಯಗಳ ಕುರಿತು ಪಕ್ಷದ ಅಭಿಪ್ರಾಯಗಳನ್ನು ರೂಪಿಸುವ ಸಲುವಾಗಿ, ಪ್ರಸ್ತುತ ಸ್ಥಿತಿಗತಿಯ ಬಗ್ಗೆ ಚರ್ಚಿಸಲು ಕಾಂಗ್ರೆಸ್​ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ 11 ಸದಸ್ಯರೊಳಗೊಂಡ ಸಮಿತಿಯೊಂದನ್ನು ರಚಿಸಿದ್ದಾರೆ.

11 member congress panel
ಕಾಂಗ್ರೆಸ್
author img

By

Published : Apr 18, 2020, 6:41 PM IST

ನವದೆಹಲಿ: ಲಾಕ್​ಡೌನ್​ ನಡುವೆಯೂ ಕೋವಿಡ್​ 19 ವಿರುದ್ಧ ಹೋರಾಡಲು ರಾಷ್ಟ್ರೀಯ ಕಾಂಗ್ರೆಸ್,​ ಸಮಿತಿಯೊಂದನ್ನು ರಚಿಸಿದೆ.

ಕೊರೊನಾ ಸಂಬಂಧಿತ ವಿಷಯಗಳ ಕುರಿತು ಪಕ್ಷದ ಅಭಿಪ್ರಾಯಗಳನ್ನು ರೂಪಿಸುವ ಸಲುವಾಗಿ, ಪ್ರಸ್ತುತ ಸ್ಥಿತಿಗತಿಯ ಬಗ್ಗೆ ಚರ್ಚಿಸಲು ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ನೇತೃತ್ವದಲ್ಲಿ 11 ಸದಸ್ಯರೊಳಗೊಂಡ ಸಮಿತಿಯನ್ನು ಕಾಂಗ್ರೆಸ್​ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ರಚಿಸಿದ್ದಾರೆ.

11 ಸದಸ್ಯರ ಈ ಸಮಿತಿಯಲ್ಲಿ ಡಾ.ಮನಮೋಹನ್ ಸಿಂಗ್ ಸಮಿತಿಯ ಅಧ್ಯಕ್ಷರಾಗಿದ್ದು, ಇತರ ಕಾಂಗ್ರೆಸ್​ ನಾಯಕರಾದ ರಾಹುಲ್ ಗಾಂಧಿ, ಪಿ.ಚಿದಂಬರಂ, ಕೆ.ಸಿ. ವೇಣುಗೋಪಾಲ್, ಮನೀಶ್ ತಿವಾರಿ, ಜೈರಾಮ್ ರಮೇಶ್, ರಂದೀಪ್ ಸಿಂಗ್ ಸುರ್ಜೇವಾಲಾ, ಪ್ರವೀಣ್ ಚಕ್ರವರ್ತಿ, ಗೌರವ್ ವಲ್ಲಭ್, ಸುಪ್ರಿಯಾ ಶ್ರೀನಾಟೆ ಮತ್ತು ರೋಹನ್ ಗುಪ್ತಾ ಸದಸ್ಯರಾಗಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್, ಕೋವಿಡ್​ 19 ಬಿಕ್ಕಟ್ಟು ಸಂಬಂಧಿತ ವಿಷಯಗಳ ಕುರಿತು ಸಮಿತಿಯು ನಿತ್ಯ ಪಕ್ಷದ ಅಭಿಪ್ರಾಯಗಳನ್ನು ರೂಪಿಸಲು ಸಭೆಗಳನ್ನು ನಡೆಸಲಿದೆ ಎಂದು ತಿಳಿಸಿದ್ದಾರೆ.

ಇನ್ನು ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 957 ಕೋವಿಡ್​ 19 ಪ್ರಕರಣಗಳು, 36 ಸಾವು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 14,792ಕ್ಕೆ, ಸಾವಿನ ಸಂಖ್ಯೆ 488ಕ್ಕೆ ಏರಿಕೆಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.