ETV Bharat / bharat

'ಭಾರತ್​​​ ಮಾತಾ ಕೀ ಜೈ' ಎನ್ನದವರು ಪಾಕಿಸ್ತಾನಿಗಳು... ಕ್ಷಮೆ ಕೇಳಿದ ಟಿಕ್​​ ಟಾಕ್​ ಸ್ಟಾರ್​!

ಹರಿಯಾಣ ವಿಧಾನಸಭಾ ಚುನಾವಣೆ ಕಣಕ್ಕಿಳಿದಿರುವ ಟಿಕ್​ ಟಾಕ್​ ನಟಿ ಸೋನಾಲಿ ಪೋಗಟ್​ ವಿವಾದಿತ ಹೇಳಿಕೆ ನೀಡಿದ್ದು, ಅದು ಭಾರೀ ಆಕ್ರೋಶಕ್ಕೆ ಗುರಿಯಾಗುತ್ತಿದ್ದಂತೆ ಕ್ಷಮೆ ಕೇಳಿದ್ದಾರೆ.

ಸೋನಾಲಿ ಪೋಗಟ್
author img

By

Published : Oct 9, 2019, 4:13 PM IST

ಚಂಡೀಗಢ: ಹರಿಯಾಣ ವಿಧಾನಸಭೆ ಚುನಾವಣೆಗೆ ಬರುವ ಅಕ್ಟೋಬರ್​​ 21ರಂದು ಚುನಾವಣೆ ನಡೆಯಲಿದ್ದು, ಬಿಜೆಪಿಯಿಂದ ಆದಂಪುರ ಕ್ಷೇತ್ರದಿಂದ ಟಿಕ್​ ಟಾಕ್​ ನಟಿ ಸೋನಾಲಿ ಕಣಕ್ಕಿಳಿದಿದ್ದಾರೆ. ತನ್ನ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದ ವೇಳೆ ಭಾರತ್ ಮಾತಾ ಕೀ ಜೈ ಎನ್ನದವರು ಪಾಕಿಸ್ತಾನಿಗಳು ಎಂದು ಹೇಳಿಕೆ ನೀಡಿದ್ದರು. ಇದೀಗ ಅದಕ್ಕೆ ಕ್ಷಮೆಯಾಚನೆ ಮಾಡಿದ್ದಾರೆ.

ಸೋನಾಲಿ ಪೋಗಟ್

ಕಳೆದ ಮಂಗಳವಾರ ಆದಂಪುರದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗಿಯಾಗಿ ಮಾತನಾಡುತ್ತಿದ್ದ ವೇಳೆ ಎಲ್ಲರೂ ಭಾರತ್ ಮಾತಾ ಕೀ ಜೈ ಎಂದು ಕೂಗಿ ಎಂದು ಸಮಾವೇಶದಲ್ಲಿ ಸೇರಿದ್ದ ಜನರನ್ನು ಸೋನಾಲಿ ಪೋಗಟ್ ಉತ್ತೇಜಿಸಿದರು. ಈ ವೇಳೆ ಕೆಲವರು ಜೋರಾಗಿ ಘೋಷಣೆ ಕೂಗಿರಲಿಲ್ಲ. ಇದರಿಂದ ಆಕ್ರೋಶಗೊಂಡ ಸೋನಾಲಿ, ನೀವು ಪಾಕಿಸ್ತಾನದಿಂದ ಬಂದಿದ್ದೀರಾ? ಪಾಕಿಸ್ತಾನದವರಾ? ಭಾರತದ ನಿವಾಸಿಗಳಾಗಿದ್ದರೆ ಭಾರತ್ ಮಾತಾ ಕೀ ಜೈ ಅಂತಾ ಘೋಷಣೆ ಕೂಗಿ ಎಂದು ಹೇಳಿದ್ದರು.

ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿ ವಿವಾದಕ್ಕೆ ಕಾರಣವಾಗಿತ್ತು. ಸದ್ಯ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕ್ಷಮೆಯಾಚನೆ ಮಾಡಿರುವ ಪೋಗಟ್​, ನಾನು ಹೇಳಿರುವ ಮಾತಿನಿಂದ ನೋವಾಗಿದ್ದರೆ ಕ್ಷಮಿಸಿ ಎಂದು ಕೇಳಿಕೊಂಡಿದ್ದಾರೆ. ನಾನು ಯಾವುದೇ ಕೆಟ್ಟ ಉದ್ದೇಶದಿಂದ ಈ ಹೇಳಿಕೆ ನೀಡಿಲ್ಲ ಎಂದಿದ್ದಾರೆ.

Intro:Body:

'ಭಾರತ್​ ಮಾತಾ ಕೀ ಜೈ' ಎನ್ನದವರು ಪಾಕಿಸ್ತಾನಿಗಳು... ಕ್ಷಮೆ ಕೇಳಿದ ಟಿಕ್​​ಟಾಕ್​ ಸ್ಟಾರ್​!

ಚಂಡೀಗಢ:  ಹರಿಯಾಣ ವಿಧಾನಸಭೆ ಚುನಾವಣೆಗೆ ಬರುವ ಅಕ್ಟೋಬರ್​​ 21ರಂದು ಚುನಾವಣೆ ನಡೆಯಲಿದ್ದು, ಬಿಜೆಪಿಯಿಂದ ಆದಂಪುರ ಕ್ಷೇತ್ರದಿಂದ  ಟಿಕ್​ಟಾಕ್​ ನಟಿ ಸೋನಾಲಿ ಕಣಕ್ಕಿಳಿದಿದ್ದಾರೆ. ತನ್ನ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದ ವೇಳೆ  ಭಾರತ್ ಮಾತಾ ಕೀ ಜೈ ಎನ್ನದವರು ಪಾಕಿಸ್ತಾನಿಗಳು ಎಂದು ಹೇಳಿಕೆ ನೀಡಿದ್ದರು ಇದೀಗ ಅದಕ್ಕೆ ಕ್ಷಮೆ ಯಾಚನೆ ಮಾಡಿದ್ದಾರೆ. 

ಕಳೆದ ಮಂಗಳವಾರ ಆದಂಪುರದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗಿಯಾಗಿ ಮಾತನಾಡುತ್ತಿದ್ದ ವೇಳೆ ಎಲ್ಲರೂ ಭಾರತ್ ಮಾತಾ ಕೀ ಜೈ ಎಂದು ಕೂಗಿ ಎಂದು ಸಮಾವೇಶದಲ್ಲಿ ಸೇರಿದ್ದ ಜನರನ್ನು ಸೋನಾಲಿ ಪೋಗಟ್ ಉತ್ತೇಜಿಸಿದರು. ಈ ವೇಳೆ ಕೆಲವರು ಜೋರಾಗಿ ಘೋಷಣೆ ಕೂಗಿರಲಿಲ್ಲ. ಇದರಿಂದ ಆಕ್ರೋಶಗೊಂಡಿದ್ದ ಸೋನಾಲಿ, ನೀವು ಪಾಕಿಸ್ತಾನದಿಂದ ಬಂದಿದ್ದೀರಾ? ಪಾಕಿಸ್ತಾನದವರಾ? ಭಾರತದ ನಿವಾಸಿಗಳಾಗಿದ್ದರೆ ಭಾರತ್ ಮಾತಾ ಕೀ ಜೈ ಅಂತ ಘೋಷಣೆ ಕೂಗಿ ಎಂದು ಹೇಳಿದ್ದರು. 

ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿ, ವಿವಾದಕ್ಕೆ ಕಾರಣವಾಗಿತ್ತು. ಸದ್ಯ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕ್ಷಮೆಯಾಚನೆ ಮಾಡಿರುವ ಪೋಗಟ್​, ನಾನು ಹೇಳಿರುವ ಮಾತಿನಿಂದ ನೋವಾಗಿದ್ದರೆ ಕ್ಷಮಿಸಿ ಎಂದು ಹೇಳಿಕೆ ನೀಡಿದ್ದಾರೆ. ನಾನು ಯಾವುದೇ ಕೆಟ್ಟ ಉದ್ದೇಶದಿಂದ ಈ ಹೇಳಿಕೆ ನೀಡಿಲ್ಲ ಎಂದು ತಿಳಿಸಿದ್ದಾರೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.