ನಾರಾಯಣಪುರ (ಛತ್ತೀಸ್ ಗಡ) : ಪೊಲೀಸರು ಮತ್ತು ನಕ್ಸಲೇಟ್ ಬಂಡುಕೋರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಯೋಧ ಹುತಾತ್ಮನಾಗಿದ್ದಾನೆ.
ನಾರಾಯಣಪುರದ ಓರ್ಚಾದ ಕಡೇರ್ ಕಾಡಿನಲ್ಲಿ ಪೊಲೀಸರು ನಕ್ಸಲ್ ವಿರೋಧಿ ಸ್ಥಳಗಳ ಶೋಧ ಕಾರ್ಯಚರಣೆಯಲ್ಲಿ ತೊಡಗಿದ್ದರು. ಈ ವೇಳೆ ಪೊಲೀಸರು ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಈ ವೇಳೆ ಯೋಧನೋರ್ವ ಹುತಾತ್ಮನಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಘಟನೆಯಲ್ಲಿ ಭದ್ರತಾ ಪಡೆಗಳು ನಕ್ಸಲರಿಗೆ ಸೇರಿದ ಶಿಬಿರವನ್ನು ನೆಲಸಮಗೊಳಿಸಿದ್ದು, ಹೆಚ್ಚಿನ ಸಂಖ್ಯೆಯ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇನ್ನು ಘಟನೆ ನಡೆದ ಪ್ರದೇಶದ ಬಲವರ್ಧನೆಗಾಗಿ ಹೆಚ್ಚಿನ ಸಿಬ್ಬಂದಿಗಳನ್ನು ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.