ಉಜ್ಜಯಿನಿ (ಮಧ್ಯಪ್ರದೇಶ): ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಿಂದ ಮಣ್ಣು ಮತ್ತು ಭಸ್ಮ (ಚಿತಾಭಸ್ಮ) ವನ್ನು ಅಗಸ್ಟ್ 5ರಂದು ರಾಮ ಮಂದಿರದ ‘ಭೂಮಿ ಪೂಜೆ’ ಸಮಾರಂಭಕ್ಕಾಗಿ ಅಯೋಧ್ಯೆಗೆ ಕಳುಹಿಸಲಾಗುವುದು.
ರಾಮನ ಉಜ್ಜಯಿನಿಗೆ ಬಂದು ಶಿಪ್ರಾ ನದಿಯ ಬಳಿ ತಂಗಿದ್ದನೆಂದು ನಂಬಲಾಗಿದೆ. ನಂತರ ನದಿಯ ದಡಗಳಲ್ಲಿ ಒಂದನ್ನು ರಾಮ್ ಘಾಟ್ ಎಂದು ಹೆಸರಿಸಲಾಯಿತು.
ಈಟಿವಿ ಭಾರತದೊಂದಿಗೆ ಮಾತನಾಡಿದ ಆವಾನ್ ಅಖಾರ ನಾಯಕ ಮತ್ತು ವಿಶ್ವ ಹಿಂದೂ ಪರಿಷತ್ತಿನ ಕೇಂದ್ರ ಮಾರ್ಗದರ್ಶಿ ಸದಸ್ಯ ಆಚಾರ್ಯ ಶೇಖರ್, ಶಿಪ್ರಾ ನದಿ ಮತ್ತು ಮಹಾಕಾಳ ದೇವಾಲಯದ ಪೂಜೆಯ ನಂತರ ಅವರು ಮಹಾಳೇಕಾಶ್ವರ ದೇವಸ್ಥಾನದ ಮಣ್ಣು ಮತ್ತು ಭಸ್ಮದೊಂದಿಗೆ ಅಯೋಧ್ಯೆಗೆ ತೆರಳಲಿದ್ದಾರೆ ಎಂದು ಹೇಳಿದರು.
ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ದೃಷ್ಟಿಯಿಂದ ಕೇವಲ 200 ಜನರು ಮಾತ್ರ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಾರೆ. ಈ ಸಮಾರಂಭದಲ್ಲಿ ಎಲ್ಲಾ ಕೋವಿಡ್ ಮುನ್ನೆಚ್ಚರಿಕಾ ಮಾನದಂಡಗಳನ್ನು ಅನುಸರಿಸಲಾಗುವುದು ಎಂದು ಟ್ರಸ್ಟ್ ಸದಸ್ಯ ಸ್ವಾಮಿ ಗೋವಿಂದ್ ದೇವಗಿರಿ ಮಹಾರಾಜ್ ಹೇಳಿದ್ದಾರೆ.