ಹೈದರಾಬಾದ್/ಕಿಂಗ್ಸ್ಟನ್: ಕೊರೊನಾ ಲಾಕ್ಡೌನ್ ನಡುವೆ ಸೋಷಿಯಲ್ ಡಿಸ್ಟೆನ್ಸ್ (ಸಾಮಾಜಿಕ ಅಂತರ) ಕಾಪಾಡುವಂತೆ ಎಲ್ಲೆಡೆ ಕೂಗು ಕೇಳಿಬರುತ್ತಿದೆ. ಆದ್ರೆ, ಈ ಸಾಮಾಜಿಕ ಅಂತರದ ಬಗ್ಗೆ ನಿಮ್ಗೇನಾದ್ರೂ ಗೊಂದಲ ಇದ್ರೆ, ಜಗತ್ತಿನ ವೇಗದ ಓಟಗಾರ ಉಸೈನ್ ಬೋಲ್ಟ್ ಅದನ್ನು ಸರಿಪಡಿಸ್ತಾರೆ ಬಿಡಿ.
-
Social Distancing #HappyEaster pic.twitter.com/lDCAsxkOAw
— Usain St. Leo Bolt (@usainbolt) April 13, 2020 " class="align-text-top noRightClick twitterSection" data="
">Social Distancing #HappyEaster pic.twitter.com/lDCAsxkOAw
— Usain St. Leo Bolt (@usainbolt) April 13, 2020Social Distancing #HappyEaster pic.twitter.com/lDCAsxkOAw
— Usain St. Leo Bolt (@usainbolt) April 13, 2020
ಬೋಲ್ಟ್, ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಾಕಿರೋ ಈ ಫೋಟೋವನ್ನು ಒಮ್ಮೆ ಸರಿಯಾಗಿ ನೋಡಿ. ಅವ್ರ ಪ್ರಕಾರ ಸಾಮಾಜಿಕ ಅಂತರ ಅಂದ್ರೆ ಇದೇ ಅಂತೆ. ಅಬ್ಬಾ, ಉಸೈನ್ ಬೋಲ್ಟ್ ಇಷ್ಟೊಂದು ಸ್ವಾರ್ಥಿಯಾಗ್ಬಿಟ್ರಾ? ಅವ್ರೊಬ್ರೇ ಮುಂದೆ ಓಡ್ತಾ ಉಳಿದವ್ರನ್ನೆಲ್ಲಾ ಹಿಂದೆ ಬಿಟ್ಟು ಆಟ ನೋಡ್ತಿದ್ದಾರಾ? ಅಂತಾ ಮೂಗಿನ ಮೇಲೆ ಬೆರಳಿಡ್ಬೇಡಿ. ಅವ್ರು ಮಾಡಿದ್ದು ಸರಿಯಾಗೇ ಇದೆ. ಅದು ಹೇಗೆ ಅಂತಾ ಮುಂದೆ ಹೇಳ್ತೀವಿ ನೋಡಿ.
ಬೋಲ್ಟ್ ಈ ಫೋಟೋ ಹಾಕಿರೋದು ಈ ಸಂದರ್ಭಕ್ಕೆ ತುಂಬಾ ಸೂಕ್ತವಾಗಿದೆ. ಯಾಕಂದ್ರೆ ಜಗತ್ತಿಗೆ ಈಗ ವಕ್ಕರಿಸಿಕೊಂಡಿರೋದು ಕೊರೊನಾ ಅನ್ನೋ ಸಾಂಕ್ರಾಮಿಕ ರೋಗ. ಈ ರೋಗ ಯಾವಾಗ, ಯಾರಿಗೆ ಹರಡುತ್ತೆ ಅನ್ನೋದನ್ನು ಹೇಳೋದು ಕಷ್ಟ. ಆದ್ರೆ ಇದು ನಮ್ಮನ್ನು ಬಂದು ತಬ್ಬಿಕೊಳ್ಳದ ಹಾಗೆ ಮಾಡೋಕೆ ಕೆಲವಷ್ಟು ದಾರಿಗಳಿವೆ. ಅದನ್ನು ನಮ್ಮ ಬುದ್ಧಿವಂತಿಕೆ ತೋರಿಸಿ ಮಾಡಿದ್ರೆ ನಾವು ಕೊರೊನಾ ವಿರುದ್ಧ ಗೆಲ್ಲೋದು ಪಕ್ಕಾ ಅಂತಾ ಬೋಲ್ಟ್ ಈ ಫೋಟೋ ಮೂಲಕ ತೋರಿಸಿದ್ದಾರೆ.
ನಿಮ್ಗೆ ಅರ್ಥ ಆಗಿಲ್ಲಾ ಅನಿಸುತ್ತೆ! ಮತ್ತೂ ಬಿಡಿಸಿ ಹೇಳ್ತೀವಿ ನೋಡಿ. ಈ ಫೋಟೋನ ಮತ್ತೊಮ್ಮೆ ನೋಡಿ. ಬೋಲ್ಟ್ ಇನ್ನೇನು ಒಂದೇ ಒಂದು ಹೆಜ್ಜೆ ಮುಂದೆ ಹಾರಿದ್ರೆ ರೇಸ್ ಗೆದ್ದೇ ಬಿಡ್ತಾರೆ. ಅವ್ರ ಹಿಂದೆ ಇರುವವರನ್ನ ನೋಡಿ. ಕನಿಷ್ಟ 5 ಮಂದಿ ಇದ್ದಾರೆ. ಅದು ಕೂಡಾ ಅಕ್ಕಪಕ್ಕದಲ್ಲೇ. ಅವ್ರ ನಡುವೆ ಅಂತರವೇ ಇಲ್ಲ. ಆದ್ರೆ ಬೋಲ್ಟ್ ಮತ್ತು ಅವರ ಹಿಂದಿರೋ ಅದಷ್ಟೂ ಜನರ ನಡುವೆ ಸಾಕಷ್ಟು ಅಂತರ ಇದೆ. ಇದನ್ನೇ ಬೋಲ್ಟ್ ಹೇಳೋಕ್ಕೆ ಬಂದಿರೋದು. ಅವರು ಅಷ್ಟೊಂದು ಅಂತರ ಕಾಯ್ದುಕೊಂಡಿರೋದ್ರಿಂದ ಇನ್ನೊಂದೇ ಹೆಜ್ಜೆಯಲ್ಲಿ ಆಟ ಗೆದ್ದುಬಿಡ್ತಾರೆ. ಅಂದ್ರೆ ಕೊರೊನಾ ವಿರುದ್ಧದ ಆಟ. ಯಾಕಂದ್ರೆ ಅವ್ರು ಅಷ್ಟೊಂದು ಅಂತರವನ್ನು ಕಾಯ್ದುಕೊಂಡು ಬಂದಿದ್ದಾರೆ. ಉಳಿದವ್ರು ಯಾವುದೇ ಅಂತರ ಕಾಯ್ದುಕೊಳ್ಳದೆ ಕೊರೊನಾ ವಿರುದ್ಧದ ಆಟದಲ್ಲಿ ಸೋತುಬಿಡ್ತಾರೆ.
ವಿಷಯ ಇಷ್ಟೇ. ಎಲ್ಲಾ ನಿಮ್ಮ ಕೈಯಲ್ಲಿ. ಸಾಮಾಜಿಕ ಅಂತರ ಕಾಪಾಡಿದ್ರೆ ಗೆದ್ದು ಬಿಡ್ತೀರಾ. ಇಲ್ಲ ನಿಮ್ಗೂ ಸೋಲು ಕಟ್ಟಿಟ್ಟ ಬುತ್ತಿ. ಈಗ ಯೋಚನೆ ಮಾಡಿ. ಬೋಲ್ಟ್ ಥರ ಸ್ವಾರ್ಥಿಯಾದ್ರೂ ಅಂತರ ಕಾಪಾಡಿಕೊಂಡು ಗೆಲ್ತೀರಾ. ಅಥವಾ ಹಿಂದಿನವರಂತೆ ಉಳಿದುಬಿಡ್ತಿರಾ? ಆಯ್ಕೆ ನಿಮ್ದು...!