ETV Bharat / bharat

ಕೇದಾರನಾಥ ಮೇಘಸ್ಫೋಟದಲ್ಲಿ ಸಾವನ್ನಪ್ಪಿದ ನಾಲ್ವರ ಅವಶೇಷ 7 ವರ್ಷಗಳ ನಂತರ ಪತ್ತೆ - Uttarkhand News

ಕೇದಾರನಾಥ ಮೇಘ ಸ್ಫೋಟ ಸಂಭವಿಸಿ 7 ವರ್ಷ ಕಳೆದ ಬಳಿಕ ಪೊಲೀಸರು ಮತ್ತು ಎಸ್‌ಡಿಆರ್‌ಎಫ್ ಸಿಬ್ಬಂದಿ ಕೇದಾರನಾಥ ದೇವಾಲಯದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆ ಮಾಡುತ್ತಿದ್ದಾರೆ. ಈ ವೇಳೆ ದುರಂತದಲ್ಲಿ ಸಾವನ್ನಪ್ಪಿದ ನಾಲ್ವರ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿದೆ.

ಸಾವನ್ನಪ್ಪಿದ ನಾಲ್ವರ ಅವಶೇಷ ಪತ್ತೆ
ಸಾವನ್ನಪ್ಪಿದ ನಾಲ್ವರ ಅವಶೇಷ ಪತ್ತೆ
author img

By

Published : Sep 21, 2020, 5:02 PM IST

Updated : Sep 21, 2020, 6:47 PM IST

ಡೆಹ್ರಾಡೂನ್ (ಉತ್ತರಾಖಂಡ): ಕೇದಾರನಾಥ ಮೇಘ ಸ್ಫೋಟ ಸಂಭವಿಸಿ 7 ವರ್ಷಗಳೇ ಕಳೆದಿದೆ. ಅದರೆ, ಇದೀಗ ಆ ದುರಂತದಲ್ಲಿ ಸಾವನ್ನಪ್ಪಿದ ನಾಲ್ವರ ಅಸ್ಥಿಪಂಜರದ ಅವಶೇಷಗಳನ್ನು ರಾಂಬಾರದಿಂದ ಹಿಮಾಲಯನ್ ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿ ಪತ್ತೆಯಾಗಿದೆ.

ಪೊಲೀಸರು ಮತ್ತು ಎಸ್‌ಡಿಆರ್‌ಎಫ್ ಸಿಬ್ಬಂದಿ ನಡೆಸಿದ ಜಂಟಿ ಶೋಧ ಕಾರ್ಯಾಚರಣೆಯಲ್ಲಿ ಅವಶೇಷಗಳು ಪತ್ತೆಯಾಗಿವೆ ಎಂದು ರುದ್ರಪ್ರಯಾಗ್ ಪೊಲೀಸ್ ವರಿಷ್ಠಾಧಿಕಾರಿ ನವನೀತ್ ಸಿಂಗ್ ಭುಲ್ಲರ್ ತಿಳಿಸಿದ್ದಾರೆ. ಇನ್ನು ಅವಶೇಷಗಳನ್ನು ಡಿಎನ್‌ಎ ಮಾದರಿ ಪರೀಕ್ಷೆ ನಡೆಸಲು ಆರೋಗ್ಯ ಇಲಾಖೆ ಸಿಬ್ಬಂದಿಗೆ ನೀಡಲಾಗಿದೆ. ಈ ವೇಳೆ ದುರಂತದಲ್ಲಿ ನಾಪತ್ತೆಯಾದವರ ಕುಟುಂಬದ ಸದಸ್ಯರ ಡಿಎನ್‌ಎ ಮಾದರಿಗಳನ್ನು ಹೋಲಿಕೆ ಮಾಡಿ ಅವಶೇಷಗಳ ಗುರುತು ಪತ್ತೆ ಹಚ್ಚುವ ಕಾರ್ಯ ನಡೆಯಲಿದೆ.

ಇನ್ನು ಅಸ್ಥಿಪಂಜರದ ಅವಶೇಷಗಳ ಪತ್ತೆ ಹಚ್ಚಲು ಉತ್ತರಾಖಂಡ್ ಹೈಕೋರ್ಟ್‌ ಈ ಹಿಂದೆ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಶೋಧಕಾರ್ಯ ಕೈಗೊಳ್ಳಲಾಗಿತ್ತು. ಸತತ ಶೋಧ ಕಾರ್ಯಾಚರಣೆಯಲ್ಲಿ ದೇವಾಲಯದ ಸುತ್ತಮುತ್ತಲಿನ ಪ್ರದೇಶಗಳಿಂದ ಇಲ್ಲಿಯವರೆಗೆ ಪತ್ತೆಯಾದ ಕೇದಾರನಾಥ ಸಂತ್ರಸ್ತರ ಸಂಖ್ಯೆ 703ಕ್ಕೆ ಏರಿದೆ. ಇನ್ನು 3,183 ಜನರು ಕಾಣೆಯಾಗಿದ್ದಾರೆ.

60 ಪೊಲೀಸ್, ಎಸ್‌ಡಿಆರ್‌ಎಫ್ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಒಳಗೊಂಡ ತಂಡವು ಕಾರ್ಯಾಚರಣೆ ನಡೆಸಿವೆ.

Last Updated : Sep 21, 2020, 6:47 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.