ಗೋವಾ: ಮೇರಿಕೊಮ್ ಆರು ಸಾರಿ ವರ್ಲ್ಡ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಪದಕ ಮುಡಿಗೇರಿಸಿಕೊಂಡಿದ್ದಾರೆ. ಮದುವೆಯಾಗಿ ಮಕ್ಕಳಿದ್ದರೂ ಬಾಕ್ಸಿಂಗ್‌ನಲ್ಲಿ ಮೇರಿ ಮೀರಿಸುವುದು ಕಷ್ಟ ಸಾಧ್ಯ. ಮೇರಿಕೋಮ್ವೊಳಗೆ ಒಬ್ಬ ಅದ್ಭುತ ಗಾಯಕಿಯೂ ಇದ್ದಾರೆ.
ಏಪ್ರಿಲ್ 13ರಂದು ಗೋವಾ ಫೆಸ್ಟಿವಲ್ -2019 ನಡೆಯಿತು. ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದವರನ್ನ ಈ ಫೆಸ್ಟಿವಲ್‌ನಲ್ಲಿ ಆಮಂತ್ರಿಸಿ ಗೌರವಿಸಲಾಗುತ್ತೆ. ವಿವಿಧ ಕ್ಷೇತ್ರದ ಸೆಲೆಬ್ರಿಟಿಗಳು ಇದರಲ್ಲಿ ಪಾಲ್ಗೊಳ್ಳುತ್ತಾರೆ. ಪಂಕಜ್ ತ್ರಿಪಾಠಿ, ಕಲ್ಕಿ ಕೊಚಲಿನ್, ಅನುಪಮಾ ಚೋಪ್ರಾ, ಲೆಫ್ಟಿನೆಂಟ್ ಜನರಲ್ ಡಿ.ಎಸ್ ಹೂಡಾ ಜತೆ ಕ್ರೀಡಾ ತಾರೆಗಳಾದ ವಿರೇಂದ್ರ ಸೆಹ್ವಾಗ್ ಮತ್ತು ಬಾಕ್ಸಿಂಗ್ ಲೇಡಿ ಐಕಾನ್ ಮೇರಿಕೋಮ್ ಸಹ ಈ ಸಾರಿಯ 'ಗೋವಾ ಫೆಸ್ಟ್ 2019'ನಲ್ಲಿ ಪಾಲ್ಗೊಂಡಿದ್ದರು. ಏಪ್ರಿಲ್ 13ರಂದು ರಾತ್ರಿ ನಡೆದ ಈ ಫೆಸ್ಟಿವಲ್‌ನಲ್ಲಿ ಎಲ್ಲರೂ ಎಂಜಾಯ್ ಮಾಡಿದರು.
6 ಬಾರಿ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದ ಮೇರಿಕೋಮ್, ಹಾಡು ಹಾಡಿ ಎಲ್ಲರ ಗಮನ ಸೆಳೆದರು. What’s Up? by 4 Non Blondes? ಹಾಡುಗಳಿಗೆ ಕಾರ್ಯಕ್ರಮದಲ್ಲಿದ್ದವರೆಲ್ಲ ತಲೆದೂಗಿದರು. ಸ್ಟೇಜ್ ಮೇಲೆ ಮೇರಿಕೋಮ್ ತಮ್ಮ ಕಂಠದಿಂದ ಮಿಂಚು ಹರಿಸಿದರು.