ಗಝಿಯಾಬಾದ್(ಉತ್ತರ ಪ್ರದೇಶ): ತಬ್ಲಿಗಿ ಜಮಾತ್ನಿಂದ ಹಿಂತಿರುಗಿದವರನ್ನು ಇಲ್ಲಿನ ಎಂಎಂಜಿ ಆಸ್ಪತ್ರೆಯಲ್ಲಿ ಕ್ವಾರಂಟೈನ್ನಲ್ಲಿಡಲಾಗಿದೆ. ಆದರೆ ಆಸ್ಪತ್ರೆಯಲ್ಲಿ ಶಿಸ್ತಿನಿಂದಿರಬೇಕಾಗಿದ್ದವರು ಇಲ್ಲಿನ ಮಹಿಳಾ ಸಿಬ್ಬಂದಿ ಮೇಲೆ ಅನುಚಿತ ವರ್ತನೆ ತೋರುತ್ತಿದ್ದಾರೆ. ಈ ಬಗ್ಗೆ ಆಸ್ಪತ್ರೆ ಮುಖ್ಯಸ್ಥ ಡಾ. ರವೀಂದ್ರ ಸಿಂಗ್ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಆಸ್ಪತ್ರೆಯಲ್ಲಿ ದಾಖಲಾಗಿರುವ ಆರು ಜನ ನಮ್ಮ ಆಸ್ಪತ್ರೆಯ ಮಹಿಳಾ ಸಿಬ್ಬಂದಿಯ ಮೇಲೆ ಅಶ್ಲೀಲವಾಗಿ ವರ್ತಿಸುತ್ತಿದ್ದಾರೆ. ಅಲ್ಲದೆ ಅವರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿದ್ದಾರೆ.
ನಮ್ಮ ಮಹಿಳಾ ಸಿಬ್ಬಂದಿ ಅವರ ನಡವಳಿಕೆಯಿಂದ ಆಘಾತಕ್ಕೊಳಗಾಗಿದ್ದಾರೆ. ಅವರು ಆಸ್ಪತ್ರೆ ನಿಯಮಗಳನ್ನು ಅನುಸರಿಸುತ್ತಿಲ್ಲ. ಸಿಬ್ಬಂದಿಯೊಂದಿಗೆ ಕೆಟ್ಟದಾಗಿ ವರ್ತಿಸುತ್ತಾರೆ. ಅವರನ್ನು ನಿಂದಿಸುತ್ತಾರೆ. ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವಂತೆ ಸೂಚಿಸಿದರೆ ನೋಡಿ ಅವರು ನಗುತ್ತಾರೆ. ಒಂದೇ ಬೆಡ್ ಮೇಲೆ ಬಂದು ಕೂರುತ್ತಾರೆ ಎಂದು ದೂರಿದ್ದಾರೆ.
ಅಲ್ಲದೆ ಬಟ್ಟೆ ಇಲ್ಲದೆ ಆಸ್ಪತ್ರೆಯಲ್ಲಿ ಓಡಾಡಿದ್ದಾರೆ. ನರ್ಸ್ಗಳ ಮುಂದೆ ಅಸಭ್ಯ ಸನ್ನೆಗಳನ್ನು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಆಸ್ಪತ್ರೆ ಮುಖ್ಯಸ್ಥರ ದೂರಿನ ಮೇಲೆ ಈಗಾಗಲೇ ಈ ಆರು ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ ಎಂದು ಗಾಝಿಯಾಬಾದ್ ಎಸ್ಪಿ ಮನೀಶ್ ಮಿಶ್ರಾ ತಿಳಿಸಿದ್ದಾರೆ.
ಸದ್ಯ ಈ ಆರೋಪಿಗಳನ್ನು ರಾಜ್ ಕುಮಾರ್ ಗೋಯಲ್ ತಾಂತ್ರಜ್ಞಾನ ಸಂಸ್ಥೆಗೆ ದಾಖಲಿಸಿ ಕ್ವಾರಂಟೈನ್ನಲ್ಲಿಡಲಾಗಿದೆ.