ETV Bharat / bharat

ಖತರ್ನಾಕ್ ಹನಿ ಟ್ರ್ಯಾಪ್ ಗ್ಯಾಂಗ್ ಅರೆಸ್ಟ್​.. ಆರೋಪಿಗಳಿಗೆ ಪೊಲೀಸರಿಂದ ವಿಐಪಿ ಟ್ರೀಟ್​ಮೆಂಟ್ ಆರೋಪ! - ಹನಿ ಟ್ರ್ಯಾಪ್ ಗ್ಯಾಂಗ್​

ಮಧ್ಯಪ್ರದೇಶವನ್ನ ಬೆಚ್ಚಿಬೀಳಿಸಿದ್ದ ಹನಿ ಟ್ರ್ಯಾಪ್ ಗ್ಯಾಂಗ್​ ಮೇಲೆ ಆರೋಪಿ ತಂದೆಯೇ ದೂರು ದಾಖಲು ಮಾಡಿದ್ದಾರೆ.

ಖತರ್ನಾಕ್ ಹನಿ ಟ್ರ್ಯಾಪ್ ಗ್ಯಾಂಗ್ ಅರೆಸ್ಟ್
author img

By

Published : Sep 25, 2019, 9:30 PM IST

ಇಂದೋರ್(ಮಧ್ಯಪ್ರದೇಶ): ಹನಿ ಟ್ರ್ಯಾಪ್​ ಪ್ರಕರಣದಲ್ಲಿ ಬಂಧನವಾಗಿರುವ ಆರತಿ ದಯಾಳ್​ ಮತ್ತು ನಾಲ್ವರು ಆರೋಪಿಗಳ ಮೇಲೆ ಮಾನವ ಕಳ್ಳಸಾಗಣೆ ಮತ್ತು ಲೈಂಗಿಕ ಶೋಷಣೆ ಆರೋಪದ ಅಡಿ ಪ್ರಕರಣ ದಾಖಲಾಗಿದೆ.

ಆರೋಪಿಗಳಿಗೆ ಪೊಲೀಸರಿಂದ ವಿಐಪಿ ಟ್ರೀಟ್​ಮೆಂಟ್

ಇಂದೋರ್ ಮಹಾನಗರ ಪಾಲಿಕೆ ಅಧಿಕಾರಿಯೊಬ್ಬರು 3 ಕೋಟಿ ರೂಪಾಯಿ ಹಣ ನೀಡುವಂತೆ ಕೆಲವರು ಬೆದರಿಕೆ ಹಾಕುತಿದ್ದಾರೆ ಎಂದು ದೂರು ದಾಖಲಿಸಿದ್ದರು. ಪ್ರಕರಣ ಬೆನ್ನು ಬಿದ್ದ ಪೊಲೀಸರು ಖತರ್ನಾನಾಕ್ ಹನಿ ಟ್ರ್ಯಾಪ್​ ಗ್ಯಾಂಗ್​ ಅನ್ನ ಬಂಧಿಸಿದೆ. ಅರತಿ ದಯಾಳ್, ಓಂಪ್ರಕಾಶ್ ಕೊರಿ, ಶ್ವೇತಾ ವಿಜಯ್ ಜೈನ್, ಶ್ವೇತಾ ಸ್ವಪ್ನಿಲ್ ಜೈನ್ ಮತ್ತು ಬರ್ಖಾ ಸೋನಿ ಎಂಬ ಐವರು ಆರೋಪಿಗಳು ಈಗ ಪೊಲೀಸರ ವಶದಲ್ಲಿದ್ದಾರೆ.

ಬಂಧನಕ್ಕೊಳಗಾಗಿರುವ ಯುವತಿಯ ತಂದೆಯ ದೂರಿನಂತೆ ಪೊಲೀಸರು ಮತ್ತೊಂದು ಎಫ್ಐಆರ್ ದಾಖಲಿಸಿದ್ದಾರೆ. ನನ್ನ ಪುತ್ರಿಯನ್ನ ಈ ಗ್ಯಾಂಗ್​ನವರು ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕಿಸಿ, ಆಕೆಯನ್ನ ಟ್ರ್ಯಾಪ್ ಮಾಡಿ ಈ ದಂಧೆಗೆ ಬಳಸಿಕೊಂಡಿದ್ದಾರೆ ಎಂದು ಆರೋಪಿ ತಂದೆ ದೂರಿದ್ದಾರೆ.

ಈ ಗ್ಯಾಂಗ್​ ಮಹಿಳೆಯರನ್ನ ಬಳಸಿಕೊಂಡು ಖಾಸಗಿ ವಿಡಿಯೋ ಚಿತ್ರೀಕರಿಸಿ ಹಣ ನೀಡುವಂತೆ ಬ್ಯಾಕ್​ಮೇಲ್ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

ಆರೋಪಿಗಳಿಗೆ ವಿಐಪಿ ಟ್ರೀಟ್​ಮೆಂಟ್:
ಇನ್ನು ಆರೋಪಿಗಳಿಗೆ ಪೊಲೀಸರು ವಿಐಪಿ ಟ್ರೀಟ್​ಮೆಂಟ್​ ನೀಡುತಿದ್ದಾರೆ ಎನ್ನಲಾಗಿದೆ. ಆರೋಪಿಗಳನ್ನ ವೈದ್ಯಕೀಯ ತಪಾಸಣೆಗೆ ಕರೆದೊಯ್ದ ನಂತರ ಠಾಣೆಗೆ ಕರೆದೊಯ್ಯುವಾಗ ಮಾರ್ಗದಲ್ಲಿ ಜ್ಯೂಸ್​ ಕೊಡಿಸಲು ಮುಂದಾಗಿದ್ದಾರೆ. ಸ್ಥಳಕ್ಕೆ ಮಾಧ್ಯಮದವರು ಎಂಟ್ರಿ ಕೊಡುತ್ತಿದ್ದಂತೆ ಪೊಲೀಸರು ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಮಧ್ಯಪ್ರದೇಶದಾದ್ಯಂತ ಸಂಚಲನ ಸೃಷ್ಟಿಸಿದ್ದ ಈ ಪ್ರಕರಣದ ತನಿಖೆಗೆ ವಿಶೆಷ ತನಿಖಾ ತಂಡವನ್ನ ರಚನೆ ಮಾಡಲಾಗಿತ್ತು. ಇದೀಗ ಆ ತಂಡವನ್ನ ಕೈಬಿಟ್ಟು ಮತ್ತೊಂದು ನೂತನ ತಂಡವನ್ನ ರಚನೆ ಮಾಡಲಾಗಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.