ಉತ್ತರ ಪ್ರದೇಶ: ಕಾನ್ಪುರದಲ್ಲಿ ಎಂಟು ಮಂದಿ ಪೊಲೀಸರ ಹತ್ಯೆ ಕುರಿತು ವಿಶೇಷ ತನಿಖಾ ತಂಡ (ಎಸ್‌ಐಟಿ) ಸ್ಥಾಪಿಸಲಾಗಿದ್ದು, ವಿಕಾಸ್ ದುಬೆ ಮತ್ತು ಆತನ ಸಹಚರರ ಕ್ರಿಮಿನಲ್ ವಿಚಾರಗಳ ಕುರಿತು ಜನರಿಂದ ಮಾಹಿತಿ ಕೋರಲಾಗಿದೆ.
ಉತ್ತರಪ್ರದೇಶದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಂಜಯ್ ಆರ್ ಭೂಸರೆಡ್ಡಿ ನೇತೃತ್ವದ ಮೂವರು ಸದಸ್ಯರ ವಿಶೇಷ ತನಿಖಾ ತಂಡವು ಮಾಹಿತಿ ನೀಡಲು ಇ-ಮೇಲ್ ಐಡಿ ಮತ್ತು ಅಂಚೆ ವಿಳಾಸಗಳ ಜೊತೆಗೆ ಮೊಬೈಲ್ ಸಂಖ್ಯೆಯನ್ನು ಬಿಡುಗಡೆ ಮಾಡಿದೆ.
ಜುಲೈ 31ರೊಳಗೆ ತನ್ನ ತನಿಖಾ ವರದಿಯನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಸಲ್ಲಿಸಬೇಕಾಗಿರುವುದರಿಂದ, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಹರಿರಾಮ್ ಶರ್ಮಾ ಮತ್ತು ಡಿಐಜಿ ಜೆ ರವೀಂದ್ರ ಗೌಡ್ ಅವರನ್ನೊಳಗೊಂಡ ತನಿಖಾ ಸಮಿತಿಯನ್ನು ಜುಲೈ 20ರಿಂದ 24ರವರೆಗೆ ಜನರು ಸಂಪರ್ಕಿಸಬಹುದು ಎಂದು ಹೇಳಿದರು.
"ಎಸಿಎಸ್ ಭೂಸರೆಡ್ಡಿ ಅವರ ಕಚೇರಿಯಲ್ಲಿ ವಿಚಾರಣೆ ನಡೆಸಲಾಗುವುದು. ಸಾಕ್ಷ್ಯಗಳು, ಅಥವಾ ಮೌಖಿಕ ಹೇಳಿಕೆ ನೀಡ ಬಯಸುವವರು ಜುಲೈ 20ರಿಂದ 24ರ ನಡುವೆ ಮಧ್ಯಾಹ್ನ ಹೊತ್ತಿನಲ್ಲಿ ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಬಹುದು" ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.