ETV Bharat / bharat

ಚಿಂತಾಜನಕ ಸ್ಥಿತಿಯಲ್ಲೇ ಎಸ್​ಪಿಬಿ ಆರೋಗ್ಯ: ಎಕ್ಮೋ ಮಷಿನ್​,ವೆಂಟಿಲೇಟರ್​ನಲ್ಲಿ ಚಿಕಿತ್ಸೆ - ಎಸ್​​ಪಿ ಬಾಲಸುಬ್ರಹ್ಮಣ್ಯಂ

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಖ್ಯಾತ ಹಿನ್ನೆಲೆ ಗಾಯಕ ಎಸ್.ಪಿ.ಬಾಲಸುಬ್ರಮಣ್ಯಂ ಅವರ ಚೇತರಿಕೆಗಾಗಿ ಚಿತ್ರ ಕಲಾವಿದರು, ನಟರು, ಖ್ಯಾತ ಗಾಯಕರು ಇಂದು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದಾರೆ. ಇದರ ಮಧ್ಯೆ ಅವರ ಆರೋಗ್ಯ ಸ್ಥಿತಿ ಕುರಿತು ಆಸ್ಪತ್ರೆ ಹೆಲ್ತ್​ ಬುಲೆಟಿನ್​ ರಿಲೀಸ್ ಮಾಡಿದೆ.

Singer SPB
Singer SPB
author img

By

Published : Aug 20, 2020, 9:30 PM IST

ಚೆನ್ನೈ: ಕೊರೊನಾ ವೈರಸ್ ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗಿರುವ ಖ್ಯಾತ ಗಾಯಕ ಎಸ್​​.ಪಿ. ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಚಿಂತಾಜನಕ ಸ್ಥಿತಿಯಲ್ಲೇ ಮುಂದುವರೆದಿದೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ಚೆನ್ನೈ ಎಂಜಿಎಂ ಹೆಲ್ತ್​ ಕೇರ್​ ಪ್ರಕಟಣೆ ಬಿಡುಗಡೆ ಮಾಡಿದೆ.

ಐಸಿಯುನಲ್ಲಿ ಅವರಿಗೆ ಚಿಕಿತ್ಸೆ ಮುಂದುವರೆದಿದ್ದು, ಎಕ್ಮೋ ಮಷಿನ್​, ವೆಂಟಿಲೇಟರ್​​ನಲ್ಲೇ ಇದ್ದಾರೆ ಎಂದು ತಿಳಿಸಿದೆ. ಇದರ ಜತೆಗೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ವೈದ್ಯರಿಂದ ಚಿಕಿತ್ಸೆ ಮುಂದುವರೆದಿದೆ ಎಂದು ಆಸ್ಪತ್ರೆ ಆಡಳಿತ ಮಂಡಳಿ ತಿಳಿಸಿದೆ.

Singer SPB health condition
ಎಸ್​ಪಿಬಿ ಆರೋಗ್ಯ ಕುರಿತು ಹೆಲ್ತ್​ ಬುಲೆಟಿನ್​

ಕೊರೊನಾ ವೈರಸ್ ಕಾರಣ ಆಗಸ್ಟ್​ 5ರಂದು ಎಸ್‌ಪಿಬಿ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ದಿನದಿಂದ ದಿನಕ್ಕೆ ಅವರ ಆರೋಗ್ಯ ಹದೆಗೆಟ್ಟಿದ್ದರಿಂದ ಆಗಸ್ಟ್​ 13ರ ಬಳಿಕ ಐಸಿಯುನಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ವೆಂಟಿಲೇಟರ್​ ಅಳವಡಿಸಿ ನುರಿತ ತಜ್ಞರ ತಂಡ ಚಿಕಿತ್ಸೆ ನಡೆಯುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.