ETV Bharat / bharat

ಭಾರತದ ಈ ಹಳ್ಳಿಯ ಮಣ್ಣು ಮಂಗಳ ಗ್ರಹದ ಮಣ್ಣು ಹೋಲುತ್ತಂತೆ ! - ಗುಜರಾತ್ ರಾಜ್ಯದ ಕಛ್

ಗುಜರಾತ್ ರಾಜ್ಯದ ಕಛ್​​ ತಾಲೂಕಿನಲ್ಲಿರುವ 'ಮಾತಾ ನೊ ಮಾಧ' ಹಳ್ಳಿಯಲ್ಲಿನ ಮಣ್ಣು, ಮಂಗಳ ಗ್ರಹದ ಮಣ್ಣನ್ನೇ ಹೋಲುತ್ತದೆ ಎಂಬುದಾಗಿ ವಿಜ್ಞಾನಿಗಳು ಹೇಳಿದ್ದಾರೆ. ನಾಸಾ, ಇಸ್ರೊ, ಹೈದರಾಬಾದ್​​​ನ ನ್ಯಾಷನಲ್ ಜಿಯೊಫಿಸಿಕಲ್ ರಿಸರ್ಚ್ ಇನ್​ಸ್ಟಿಟ್ಯೂಟ್ ಮತ್ತು ಖರಗ್​ಪುರ ಐಐಟಿಯ ವಿಜ್ಞಾನಿಗಳು ಈ ಹಳ್ಳಿಯಲ್ಲಿ ಸಂಶೋಧನಾ ಕೇಂದ್ರ ತೆರೆಯಲು ನಿರ್ಧರಿಸಿದ್ದಾರೆ.

Kutch district
ಮಂಗಳ ಗ್ರಹ
author img

By

Published : Mar 17, 2020, 5:14 PM IST

ಗುಜರಾತ್: ಜಗತ್ತಿನ ಹಲವಾರು ರಾಷ್ಟ್ರಗಳು ಈಗಾಗಲೇ ಮಂಗಳ ಗ್ರಹದ ಬಗ್ಗೆ ಸಾಕಷ್ಟು ಅನ್ವೇಷಣೆ ನಡೆಸಿ ಅದೆಷ್ಟೋ ಮಾಹಿತಿಯನ್ನು ಕಲೆ ಹಾಕಿವೆ. ಆದರೆ ಈಗ ಭಾರತದ ಹಳ್ಳಿಯೊಂದರಲ್ಲಿನ ಮಣ್ಣು, ಮಂಗಳ ಗ್ರಹದ ಮಣ್ಣನ್ನೇ ಹೋಲುತ್ತದೆ ಎಂಬುದಾಗಿ ವಿಜ್ಞಾನಿಗಳು ಹೇಳಿದ್ದಾರೆ.

ಗುಜರಾತ್ ರಾಜ್ಯದ ಕಛ್ ತಾಲೂಕಿನಲ್ಲಿರುವ 'ಮಾತಾ ನೊ ಮಾಧ' ಹಳ್ಳಿಯಲ್ಲಿನ ಮಣ್ಣು ಮಂಗಳ ಗ್ರಹದ ಮಣ್ಣಿನಂತೆಯೇ ಇದೆ. ಈಗ ವಿಜ್ಞಾನಿಗಳು ಮಂಗಳ ಗ್ರಹದ ಭೌಗೋಳಿಕ, ರಾಸಾಯನಿಕ, ಭೌತಿಕ ಗುಣಗಳ ಬಗ್ಗೆ ಇದೇ ಹಳ್ಳಿಯಲ್ಲಿ ಸಂಶೋಧನೆ ಮಾಡಲು ಮುಂದಾಗಿದ್ದಾರೆ.

ಭಾರತದ ಈ ಹಳ್ಳಿಯ ಮಣ್ಣು ಮಂಗಳ ಗ್ರಹದ ಮಣ್ಣನ್ನು ಹೋಲುತ್ತಂತೆ !

ಎರಡು ಬೆಟ್ಟಗಳ ನಡುವೆ ಇರುವ ಈ ಹಳ್ಳಿಯು ಮಾ ಆಶಾಪುರಾ ದೇವಿಯ ಸ್ಥಾನವೆಂದು ಹೆಸರಾಗಿದೆ. ಇದೇ ಹಳ್ಳಿಯಲ್ಲಿ ಸಿಗುವ ಖನಿಜಾಂಶವೊಂದು ಮಂಗಳನ ಮೇಲಿನ ಖನಿಜವನ್ನು ಹೋಲುತ್ತದೆ. ಹೀಗಾಗಿ ನಾಸಾ, ಇಸ್ರೊ, ಹೈದರಾಬಾದಿನ ನ್ಯಾಷನಲ್ ಜಿಯೊಫಿಸಿಕಲ್ ರಿಸರ್ಚ್ ಇನ್​ಸ್ಟಿಟ್ಯೂಟ್ ಮತ್ತು ಖರಗ್​ಪುರ ಐಐಟಿಯ ವಿಜ್ಞಾನಿಗಳು ಈ ಹಳ್ಳಿಯಲ್ಲಿ ಸಂಶೋಧನಾ ಕೇಂದ್ರ ತೆರೆಯಲು ನಿರ್ಧರಿಸಿದ್ದಾರೆ.

ಕಛ್ ವಿಶ್ವವಿದ್ಯಾಲಯದ ಭೂಮಿ ಮತ್ತು ವಿಜ್ಞಾನ ವಿಭಾಗವು 2015 ರಲ್ಲಿ ಈ ಹಳ್ಳಿಯಲ್ಲಿ ಅಧ್ಯಯನ ನಡೆಸಿತ್ತು. ಇಲ್ಲಿನ ಮಣ್ಣು ಮಂಗಳನ ಮಣ್ಣಿನಂತೆ ಇರುವುದು ಹಾಗೂ ಎರಡು ಬೆಟ್ಟಗಳು ತಟ್ಟೆಯಾಕಾರದಲ್ಲಿರುವುದು ಅಧ್ಯಯನದ ವೇಳೆ ತಿಳಿದು ಬಂದಿತ್ತು. ಹಾಗೆಯೇ ಇಲ್ಲಿನ ಬಸಾಲ್ಟ್​ ಭೂಮೇಲ್ಮೈ ಮಾದರಿಯು ಭೂಮಿಯ ಮೇಲೆಯೇ ವಿಶಿಷ್ಟವಾಗಿದೆ ಎಂದು ನಾಸಾ ಹಾಗೂ ಇಸ್ರೊ ಹೇಳಿವೆ.

ಈಟಿವಿ ಭಾರತ್​ ಜೊತೆ ಮಾತನಾಡಿದ ಕಛ್ ವಿಶ್ವವಿದ್ಯಾಲಯದ ಭೂವಿಜ್ಞಾನಿ ಡಾ. ಮಹೇಶ ಠಕ್ಕರ್, ಇತ್ತೀಚೆಗೆ ಕಛ್​ಗೆ ಬಂದಿದ್ದ ಕೆಲ ನಾಸಾ ವಿಜ್ಞಾನಿಗಳು ಇಲ್ಲಿನ ವಿಶಿಷ್ಟತೆಯನ್ನು ಒಪ್ಪಿಕೊಂಡಿದ್ದು, ಈ ಸ್ಥಳದಲ್ಲಿ ಸಂಶೋಧನೆಗಳನ್ನು ಮುಂದುವರಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.

ಆಕಾಶದಿಂದ ತೆಗೆದ ಈ ಹಳ್ಳಿಯ ಫೋಟೊಗಳು ಹಾಗೂ ಮಂಗಳ ಗ್ರಹದ ಫೋಟೊಗಳು ಒಂದೇ ರೀತಿ ಕಾಣುತ್ತವೆ. ಇನ್ನಷ್ಟು ಸಂಶೋಧನೆಗಳನ್ನು ಕೈಗೊಂಡಲ್ಲಿ ಮಂಗಳನ ಮೇಲೆ ನೀರು ಇದೆಯಾ ಅಥವಾ ಇಲ್ಲ ಎಂಬ ಬಗ್ಗೆ ಬೆಳಕು ಚೆಲ್ಲಬಹುದಾಗಿದೆ. ಮಂಗಳನ ಮೇಲೆ ಹೋಗಿ ಸಂಶೋಧನೆ ಮಾಡುವುದು ತೀರಾ ಕಷ್ಟವಾದ್ದರಿಂದ ಅದರ ಬದಲು ಇಲ್ಲಿಯೇ ಅಧ್ಯಯನ ಮಾಡುವುದು ಉತ್ತಮ ಎನ್ನಲಾಗಿದೆ.

ಭೂಮಿಯ ಮೇಲಿನ ಅಧ್ಯಯನದಿಂದ, ಮುಂದಿನ ಬಾರಿ ಮಂಗಳಯಾನ ಕೈಗೊಂಡಾಗ ವ್ಯೋಮನೌಕೆಯನ್ನು ಎಲ್ಲಿ ಇಳಿಸಿದರೆ ಉತ್ತಮ ಎಂಬುದನ್ನು ಸಹ ತಿಳಿಯಬಹುದು. ಮಾತಾ ನೊ ಮಾಧ ಗ್ರಾಮದ ಮಣ್ಣಿನಲ್ಲಿರುವ ಕಬ್ಬಿಣದ ಅಂಶ ಹೊಂದಿರುವ ಪೊಟ್ಯಾಶಿಯಂ ಹಾಗೂ ಗೈರೋಸೆಟ್​ನ ಹೈಡ್ರಸ್ ಸಲ್ಫೇಟ್​ಗಳು ಮಂಗಳ ಗ್ರಹದಂತೆಯೇ ಇವೆ ಎನ್ನುತ್ತಾರೆ ನಾಸಾ ವಿಜ್ಞಾನಿಗಳು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.