ಮುಂಬೈ : ಸಿಲ್ವರ್ ಲೇಕ್ನಿಂದ ರಿಲಯನ್ಸ್ ಇಂಡಸ್ಟ್ರೀಸ್ನ ಅಂಗಸಂಸ್ಥೆ RRVLನಲ್ಲಿ 7,500 ಕೋಟಿ ರೂ. ಹೂಡಿಕೆ ಮಾಡಲಾಗುವುದು ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಹಾಗೂ ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ ಬುಧವಾರ ಘೋಷಣೆ ಮಾಡಿವೆ.
ಈ ಹೂಡಿಕೆಯು ಆರ್ಆರ್ವಿಎಲ್ ಪ್ರೀ-ಮನಿ ಈಕ್ವಿಟಿ ಮೌಲ್ಯ 4.21 ಲಕ್ಷ ಕೋಟಿ ಮಾಡುತ್ತದೆ. ಸಿಲ್ವರ್ ಲೇಕ್ ಮಾಡಲಿರುವ ಹೂಡಿಕೆಗೆ ಆರ್ಆರ್ವಿಎಲ್ನಲ್ಲಿ 1.75% ಈಕ್ವಿಟಿ ಷೇರಿನ ಪಾಲು ದೊರೆಯುತ್ತದೆ. ಈ ಮೂಲಕ ರಿಲಯನ್ಸ್ ಇಂಡಸ್ಟ್ರೀಸ್ನ 2ನೇ ಅಂಗಸಂಸ್ಥೆಯಲ್ಲಿ ಸಿಲ್ವರ್‌ಲೇಕ್ ಒಂದು ಬಿಲಿಯನ್ ಡಾಲರ್ ಹೂಡಿಕೆ ಮಾಡುತ್ತಿದೆ.
ಇದಕ್ಕೂ ಮುನ್ನ ರಿಲಯನ್ಸ್ ಇಂಡಸ್ಟ್ರೀಸ್ನ ಅಂಗಸಂಸ್ಥೆ ಜಿಯೋ ಪ್ಲಾಟ್ಫಾರ್ಮ್ನಲ್ಲಿ 1.35 ಬಿಲಿಯನ್ ಡಾಲರ್ ಹೂಡಿಕೆ ಮಾಡಿತ್ತು ಸಿಲ್ವರ್ ಲೇಕ್. ಅಂದಹಾಗೆ ರಿಲಯನ್ಸ್ ರೀಟೇಲ್ ಲಿಮಿಟೆಡ್ ಎಂಬುದು ಆರ್ಆರ್ವಿಎಲ್ ಅಂಗಸಂಸ್ಥೆ. ಭಾರತದ ಅತಿ ದೊಡ್ಡ ಹಾಗೂ ವೇಗವಾಗಿ ಬೆಳೆಯುತ್ತಿರುವ ಮತ್ತು ಲಾಭದಾಯಕ ಉದ್ಯಮ. ದೇಶದಾದ್ಯಂತ 12 ಸಾವಿರ ಮಳಿಗೆಗಳನ್ನು ಹೊಂದಿದೆ. ಭಾರತದ ಎಂಎಸ್ಎಂಇ ವಲಯಕ್ಕೆ ನೆರವು ನೀಡುವ ಉದ್ದೇಶ ಕೂಡ ಸಂಸ್ಥೆಗಿದೆ.
ಡಿಜಿಟಲೈಸೇಷನ್ ಮೂಲಕ ಎರಡು ಕೋಟಿಗೂ ಹೆಚ್ಚು ವರ್ತಕರಿಗೆ ಈ ಜಾಲ ವಿಸ್ತರಿಸುವುದಕ್ಕೆ ರಿಲಯನ್ಸ್ ರೀಟೇಲ್ ಬದ್ಧವಾಗಿದೆ. ಸಿಲ್ವರ್‌ಲೇಕ್ ಎಂಬುದು ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನದ ಮೇಲೆ ಭಾರಿ ಪ್ರಮಾಣದಲ್ಲಿ ಹೂಡಿಕೆ ಮಾಡುವ ಕಂಪನಿ.
ವಿಶ್ವ ಮಟ್ಟದ ಮ್ಯಾನೇಜ್ಮೆಂಟ್ ತಂಡದ ಸಹಾಯದೊಂದಿಗೆ ಸಹಭಾಗಿತ್ವವಹಿಸಿ, ಅದ್ಭುತ ಕಂಪನಿಗಳನ್ನು ಕಟ್ಟಿ, ಬೆಳೆಸುವುದು ಸಿಲ್ವರ್ ಲೇಕ್ ಗುರಿ. ಸಿಲ್ವರ್‌ಲೇಕ್ ಒಟ್ಟಾರೆ ಆಸ್ತಿ ಮೌಲ್ಯವು 60 ಬಿಲಿಯನ್ ಅಮೆರಿಕನ್ ಡಾಲರ್ ದಾಟುತ್ತದೆ. ಈಗಾಗಲೇ ಏರ್ಬಿಎನ್ಬಿ, ಅಲಿಬಾಬ, ಆಲ್ಫಾಬೆಟ್ನ ವೆರಿಲಿ ಮತ್ತು ಮೇಯ್ಮೋ ಯೂನಿಟ್ಸ್, ಡೆಲ್ ಟೆಕ್ನಾಲಜೀಸ್, ಟ್ವಿಟರ್ ಸೇರಿ ಇತರ ಜಾಗತಿಕ ಟೆಕ್ನಾಲಜಿ ಕಂಪನಿಗಳಲ್ಲಿ ಸಿಲ್ವರ್ ಲೇಕ್ ಹೂಡಿಕೆ ಮಾಡಿದೆ.
ಸಿಲ್ವರ್ ಲೇಕ್ ಹೂಡಿಕೆ ಬಗ್ಗೆ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಹಾಗೂ ಎಂಡಿ ಮುಖೇಶ್ ಅಂಬಾನಿ ಮಾತನಾಡಿ, ಸಿಲ್ವರ್ ಲೇಕ್ ಜತೆಗೆ ಸಂಬಂಧ ವಿಸ್ತರಣೆ ಆಗುತ್ತಿರುವುದಕ್ಕೆ ಸಂತೋಷ ಆಗುತ್ತಿದೆ. ಭಾರತದ ರೀಟೇಲ್ ವಲಯದಲ್ಲಿ ಭಾರತೀಯ ಗ್ರಾಹಕರಿಗೆ ಮೌಲ್ಯ ಒದಗಿಸುವ ಜತೆಗೆ ಹತ್ತಾರು ಲಕ್ಷ ಸಣ್ಣ ವರ್ತಕರನ್ನು ಒಳಗೊಳ್ಳುವುದು ಹಾಗೂ ಬದಲಾವಣೆ ತರುವುದು ನಮ್ಮ ಪ್ರಯತ್ನ. ಈ ವಲಯದಲ್ಲಿ ಬದಲಾವಣೆ ತರಲು ತಂತ್ರಜ್ಞಾನ ತುಂಬ ಮುಖ್ಯ ಎಂದಿದ್ದಾರೆ.
ಮುಂದುವರಿದು ಮಾತನಾಡಿ, ರೀಟೇಲ್ ವಲಯದ ಅಗತ್ಯಗಳೆಲ್ಲವನ್ನು ತಂತ್ರಜ್ಞಾನದ ಮೂಲಕ ಒಗ್ಗೂಡಿಸಬಹುದು. ಜತೆಗೆ ಬೆಳವಣಿಗೆಗೆ ವೇದಿಕೆ ನಿರ್ಮಿಸಬಹುದು. ಭಾರತೀಯ ರೀಟೇಲ್ನಲ್ಲಿ ನಮ್ಮ ದೂರದೃಷ್ಟಿಯನ್ನು ಅನುಷ್ಠಾನಗೊಳಿಸುವಲ್ಲಿ ಸಿಲ್ವರ್ ಲೇಕ್ ಕಂಪನಿಯು ಬೆಲೆಯೇ ಕಟ್ಟಲಾಗದ ಭಾಗೀದಾರ ಎಂದು ಅಂಬಾನಿ ಹೇಳಿದ್ದಾರೆ.
ಸಿಲ್ವರ್ ಲೇಕ್ ಸಿಇಒ ಹಾಗೂ ಮ್ಯಾನೇಜಿಂಗ್ ಪಾರ್ಟನರ್ ಎಗೋನ್ ಡರ್ಬನ್ ಈ ಹೂಡಿಕೆ ಬಗ್ಗೆ ಮಾತನಾಡಿ, ಹೂಡಿಕೆ ಮೂಲಕ ರಿಲಯನ್ಸ್ ಜತೆಗಿನ ನಮ್ಮ ಬಾಂಧವ್ಯ ಇನ್ನೂ ಗಟ್ಟಿಯಾಗಿದೆ ಎಂದು ತಿಳಿಸುವುದಕ್ಕೆ ಸಂತೋಷ ಆಗುತ್ತಿದೆ. ಧೈರ್ಯದ ದೂರದೃಷ್ಟಿ, ಸಮಾಜಕ್ಕೆ ಅನುಕೂಲ ಮಾಡಿಕೊಡುವ ಬದ್ಧತೆ, ಆವಿಷ್ಕಾರದಲ್ಲಿ ಸಾಧನೆ ಹಾಗೂ ದಣಿವರಿಯದ ಅನುಷ್ಠಾನದ ಮೂಲಕ ಮುಖೇಶ್ ಅಂಬಾನಿ ಮತ್ತು ಅವರ ತಂಡ ರಿಲಯನ್ಸ್ ಮೂಲಕ ರೀಟೇಲ್ ವಲಯ ಹಾಗೂ ತಂತ್ರಜ್ಞಾನದಲ್ಲಿ ಅಮೋಘ ನಾಯಕತ್ವ ಸೃಷ್ಟಿ ಮಾಡಿದೆ ಎಂದಿದ್ದಾರೆ.
ಇಡೀ ವಿಶ್ವವು ಕೊರೊನಾದೊಂದಿಗೆ ಹೋರಾಟ ನಡೆಸುತ್ತಿರುವ ಸಂದರ್ಭದಲ್ಲಿ, ಅದರಲ್ಲೂ ಭಾರತದಲ್ಲಿ ಅಲ್ಪಾವಧಿಯಲ್ಲೇ ಜಿಯೋಮಾರ್ಟ್ ಯಶಸ್ಸು ಪಡೆದಿರುವುದು ನಿಜವಾಗಲೂ ಈ ಹಿಂದೆ ಕಂಡಿರದ ಸಾಧನೆ ಮತ್ತು ಬೆಳವಣಿಗೆ ಹಾದಿಯ ಆರಂಭವಷ್ಟೇ ಇದು. ರಿಲಯನ್ಸ್ನ ಈ ಹೊಸ ವಾಣಿಜ್ಯ ವ್ಯೂಹವು ದಶಕದ ಅತಿ ದೊಡ್ಡ ಕ್ರಾಂತಿಕಾರಿ ಬದಲಾವಣೆ ಆಗಿದೆ. ಭಾರತದ ರೀಟೇಲ್ನಲ್ಲಿ ರಿಲಯನ್ಸ್ ಗುರಿಯ ಭಾಗವಾಗಿ ಸಹಭಾಗಿತ್ವವಹಿಸಲು ನಮಗೆ ಅತ್ಯಂತ ಖುಷಿ ಎಂದು ಅವರು ಹೇಳಿದ್ದಾರೆ.