ETV Bharat / bharat

ಪ್ರಶ್ನಾವಳಿ ಅವಧಿ ಸಂಸತ್​ನ ಪ್ರಮುಖ ಭಾಗ: ಇಲ್ಲಿದೆ ಅದರ ಪ್ರಾಮುಖ್ಯತೆಯ ವಿವರ

ಸಂಸತ್​ ಮುಂಗಾರು ಅಧಿವೇಶನದಲ್ಲಿ ಪ್ರಶ್ನೆಗಳ ಅವಧಿ ಇರುವುದಿಲ್ಲ ಎಂದು ಲೋಕಸಭೆ ಮತ್ತು ರಾಜ್ಯಸಭಾ ಕಾರ್ಯದರ್ಶಿಗಳು ಹೇಳಿದ್ದಾರೆ. ಆದ್ರೆ ಇದಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ "ಚುಕ್ಕೆ ರಹಿತ ಪ್ರಶ್ನೆಗಳಿಗೆ" ಅವಕಾಶ ನೀಡುವುದಾಗಿ ಕೇಂದ್ರ ಸರ್ಕಾರ ಹೇಳಿದೆ.

author img

By

Published : Sep 3, 2020, 12:03 PM IST

ಸಂಸತ್​ನ ಪ್ರಶ್ನಾವಧಿ
ಸಂಸತ್​ನ ಪ್ರಶ್ನಾವಧಿ

ನವದೆಹಲಿ: ಇದೇ ತಿಂಗಳ 14ರಿಂದ ಆರಂಭವಾಗಲಿರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಪ್ರಶ್ನಾವಳಿ ಅವಧಿ, ಶೂನ್ಯ ವೇಳೆ ಮತ್ತು ಖಾಸಗಿ ಮಸೂದೆಗಳ ಮಂಡನೆ ಇರುವುದಿಲ್ಲ ಎಂದು ಲೋಕಸಭೆ ಮತ್ತು ರಾಜ್ಯಸಭಾ ಕಾರ್ಯದರ್ಶಿಗಳು ತಿಳಿಸಿದ್ದಾರೆ.

  • * ಚುಕ್ಕೆ ರಹಿತ (ಅನ್​ ಸ್ಟಾರ್​) ಪ್ರಶ್ನೆಗಳಿಗೆ ಸರ್ಕಾರ ಒಪ್ಪುತ್ತದೆ: ಮುಂಬರುವ ಸಂಸತ್​ ಅಧಿವೇಶನದಲ್ಲಿ ಪ್ರಶ್ನಾವಳಿ ಅವಧಿಯನ್ನು ರದ್ದುಗೊಳಿಸಿದ ಹಿನ್ನೆಲೆಯಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಆದ್ದರಿಂದ ಸರ್ಕಾರವು "ಚುಕ್ಕೆ ರಹಿತ ಪ್ರಶ್ನೆಗಳಿಗೆ" ಅವಕಾಶ ನೀಡುವುದಾಗಿ ಹೇಳಿದೆ. ಪ್ರತಿಪಕ್ಷಗಳ ಪ್ರಶ್ನೆಗಳಿಗೆ ಆಡಳಿತ ಪಕ್ಷವು ಲಿಖಿತ ರೂಪದಲ್ಲಿ ಉತ್ತರಿಸಲಿದೆ.

ಪ್ರಶ್ನೆಗಳ ಪ್ರಕಾರ:

(i) ಚುಕ್ಕೆ ಹಾಕಿದ ಪ್ರಶ್ನೆಗಳು- ಚುಕ್ಕೆ ಹಾಕಿದ ಪ್ರಶ್ನೆಯೆಂದರೆ, ಸದನದಲ್ಲಿ ಒಬ್ಬ ಸದಸ್ಯರು ಸಚಿವರಿಂದ ಮೌಖಿಕ ಉತ್ತರವನ್ನು ಬಯಸುತ್ತಾರೆ.

(ii) ಚುಕ್ಕೆ ರಹಿತ ಪ್ರಶ್ನೆಗಳು- ಚುಕ್ಕೆ ರಹಿತ ಪ್ರಶ್ನೆಯು ಸದಸ್ಯರಿಂದ ಲಿಖಿತ ಉತ್ತರವನ್ನು ಬಯಸುತ್ತದೆ ಮತ್ತು ಅದನ್ನು ಸಚಿವರು ಸದನದ ಮೇಜಿನ ಮೇಲೆ ಇಡುತ್ತಾರೆ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಇದನ್ನು ಸದನದಲ್ಲಿ ಮೌಖಿಕ ಉತ್ತರವೆಂದು ಕರೆಯಲಾಗುವುದಿಲ್ಲ ಮತ್ತು ಅದರ ಮೇಲೆ ಯಾವುದೇ ಪೂರಕ ಪ್ರಶ್ನೆಯನ್ನು ಕೇಳಲಾಗುವುದಿಲ್ಲ.

(iii) ಕಿರು ಸೂಚನೆ ಪ್ರಶ್ನೆಗಳು- ಸಾರ್ವಜನಿಕ ಪ್ರಾಮುಖ್ಯತೆಯ ಪ್ರಶ್ನೆಗಳನ್ನು ಸಂಸತ್​ ಮುಂದೆ ಪ್ರಸ್ತುತಪಡಿಸಿ 10 ದಿನದೊಳಗೆ ಉತ್ತರಿಸುವಂತೆ ಒತ್ತಾಯಿಸುವ ಪ್ರಕ್ರಿಯೆ. ಇದರಲ್ಲಿ ಮೌಖಿಕ ಉತ್ತರಕ್ಕಾಗಿ ನೋಟಿಸ್​ ನೀಡಬಹುದು.

(iv) ಖಾಸಗಿ ಸದಸ್ಯರಿಗೆ ಪ್ರಶ್ನೆಗಳು- ಒಂದು ಪ್ರಶ್ನೆಯನ್ನು ಖಾಸಗಿ ಸದಸ್ಯರಿಗೂ ತಿಳಿಸಬಹುದು (ಲೋಕಸಭೆಯಲ್ಲಿನ ವ್ಯವಹಾರ ಮತ್ತು ನಡವಳಿಕೆಯ ನಿಯಮ 40ರ ಅಡಿಯಲ್ಲಿ). ಪ್ರಶ್ನೆಯ ವಿಷಯವು ಕೆಲವು ಮಸೂದೆ, ನಿರ್ಣಯಕ್ಕೆ ಸಂಬಂಧಿಸಿರುತ್ತದೆ. ಇನ್ನು ಖಾಸಗಿ ಸದಸ್ಯರು ಕೇಳುವ ಪ್ರಶ್ನೆಗಳು ಅಗತ್ಯವೆಂದು ಸ್ಪೀಕರ್​ ಪರಿಗಣಿಸುತ್ತಾರೆ.

ಪ್ರಶ್ನೆ ಅವಧಿಯ ಮಹತ್ವ:

ಸಾಮಾನ್ಯವಾಗಿ, ಲೋಕಸಭೆಯಲ್ಲಿ ಮೊದಲ ಅವಧಿಯನ್ನು ಪ್ರಶ್ನೆಗಳಿಗೆ ಮೀಸಲಿಡಲಾಗುತ್ತದೆ ಮತ್ತು ಈ ಅವಧಿಯನ್ನು ಪ್ರಶ್ನಾವಳಿ ಅವಧಿ ಎಂದು ಕರೆಯಲಾಗುತ್ತದೆ. ಸಂಸತ್ತಿನ ವಿಚಾರಣೆಯಲ್ಲಿ ಇದಕ್ಕೆ ವಿಶೇಷವಾದ ಮಹತ್ವವಿದೆ. ಪ್ರಶ್ನೆಗಳನ್ನು ಕೇಳುವುದು ಸಂಸತ್​ ಸದಸ್ಯರ ಹಕ್ಕು. ಪ್ರಶ್ನೆ ಅವಧಿಯ ಸಮಯದಲ್ಲಿ ಸದಸ್ಯರು ಆಡಳಿತ ಮತ್ತು ಸರ್ಕಾರಿ ಚಟುವಟಿಕೆಯ ಪ್ರತಿಯೊಂದು ಅಂಶಗಳ ಬಗ್ಗೆ ಪ್ರಶ್ನೆಗಳನ್ನು ಕೇಳಬಹುದು. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ಷೇತ್ರಗಳಲ್ಲಿನ ಸರ್ಕಾರದ ನೀತಿಗಳು ತೀಕ್ಷ್ಣವಾಗಿ ಈ ವೇಳೆ ಗಮನಕ್ಕೆ ಬರುತ್ತವೆ. ಏಕೆಂದರೆ ಸದಸ್ಯರು ಪ್ರಶ್ನೆಯ ಸಮಯದಲ್ಲಿ ಸಂಬಂಧಿತ ಮಾಹಿತಿಯನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಾರೆ.

ಪ್ರಶ್ನೆ ಗಂಟೆಯ ಮೂಲಕ ಸರ್ಕಾರವು ರಾಷ್ಟ್ರದ ನಾಡಿಮಿಡಿತವನ್ನು ತ್ವರಿತವಾಗಿ ಅನುಭವಿಸಲು, ಅದರ ನೀತಿಗಳು ಮತ್ತು ಕಾರ್ಯಗಳಿಗೆ ಅನುಗುಣವಾಗಿ ಹೊಂದಿಕೊಳ್ಳಲು ಸಾಧ್ಯವಾಗುತ್ತದೆ. ಸಂಸತ್ತಿನಲ್ಲಿನ ಪ್ರಶ್ನೆಗಳ ಮೂಲಕವೇ ಸಾರ್ವಜನಿಕರ ಕುಂದು-ಕೊರತೆಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.

ಸದಸ್ಯರು ಎತ್ತಿದ ವಿಷಯಗಳು ಸಾರ್ವಜನಿಕ ಮನಸ್ಸನ್ನು ಕೆರಳಿಸುವಷ್ಟು ಗಂಭೀರವಾಗಿದ್ದಾಗ ಆಯೋಗ, ನೇಮಕಾತಿ ನ್ಯಾಯಾಲಯ ಅಥವಾ ಶಾಸನಗಳ ನೇಮಕಕ್ಕೆ ಕಾರಣವಾಗಬಹುದು. ಪ್ರಶ್ನಾವಳಿ ಅವಧಿ ಸಂಸದೀಯ ವಿಚಾರಣೆಯ ಒಂದು ಪ್ರಮುಖ ಭಾಗವಾಗಿದೆ. ಒಂದು ಪ್ರಶ್ನೆಯು ಮುಖ್ಯವಾಗಿ ಮಾಹಿತಿಯನ್ನು ಹುಡುಕುತ್ತದೆ ಮತ್ತು ನಿರ್ದಿಷ್ಟ ವಿಷಯದ ಬಗ್ಗೆ ಸತ್ಯವನ್ನು ಹೊರಗೆಡವಲು ಪ್ರಯತ್ನಿಸುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.