ETV Bharat / bharat

ಡ್ರಗ್ಸ್​​ ಪ್ರಕರಣ: ರಿಯಾ ಚಕ್ರವರ್ತಿ ಸಹೋದರ, ಸುಶಾಂತ್​​ ​ಮ್ಯಾನೇಜರ್​​ ಸೆ. 9ರವರೆಗೆ ನ್ಯಾಯಾಂಗ ಬಂಧನಕ್ಕೆ! - ಸುಶಾಂತ್​ ಸಿಂಗ್​​ ರಜಪೂತ್​

ಸುಶಾಂತ್ ಸಿಂಗ್​ ರಜಪೂತ್​ ಸಾವಿನ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯಲ್ಲಿ ನಟಿ ರಿಯಾ ಚಕ್ರವರ್ತಿ ಮತ್ತು ಸಹೋದರ ಶೋವಿಕ್ ಸೇರಿದ್ದಂತೆ ಅನೇಕರು ಡ್ರಗ್ಸ್​​​​ ಪೆಡ್ಲರ್​ಗಳ ಜೊತೆಗಿನ ವಾಟ್ಸಪ್ ಚಾಟ್ ಬಹಿರಂಗವಾದ ಕಾರಣ ಇದೀಗ ರಿಯಾ ಚಕ್ರವರ್ತಿ ಸಹೋದರ ಶೋಯಿಕ್ ಚಕ್ರವರ್ತಿ ಅವರನ್ನ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

Showik Chakraborty
Showik Chakraborty
author img

By

Published : Sep 5, 2020, 3:41 PM IST

ಮುಂಬೈ: ನಟ ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರ ವಿಚಾರಣೆ ನಡೆಯುತ್ತಿದ್ದು, ಡ್ರಗ್ಸ್​​ ಆರೋಪದ ಮೇಲೆ ನಟಿ ರಿಯಾ ಸಹೋದರ ಶೊವಿಕ್​​​ ಹಾಗೂ ಸುಶಾಂತ್​ ರಜಪೂತ್​ ಮ್ಯಾನೇಜರ್ ಸಾಮ್ಯುಯೆಲ್​ ಮಿರಂಡಾ​ ಬಂಧನವಾಗಿದ್ದಾರೆ. ಇದೀಗ ಅವರನ್ನ ಸೆಪ್ಟೆಂಬರ್​ 9ರವರೆಗೆ ನ್ಯಾಯಾಂಗ ಬಂಧನಕ್ಕೆ ಪಡೆದುಕೊಳ್ಳಲಾಗಿದೆ.

ಸುಶಾಂತ್​ ಸಿಂಗ್​ ಪ್ರಕರಣ: ಡ್ರಗ್ಸ್​​ ಆರೋಪದ ಮೇಲೆ ರಿಯಾ ಚಕ್ರವರ್ತಿ ಸಹೋದರನ ಬಂಧನ

ನಟಿ ರಿಯಾ ಚಕ್ರವರ್ತಿ ಡ್ರಗ್ಸ್​​ ಪೆಡ್ಲರ್​ಗಳ ಜೊತೆ ಸಂಪರ್ಕದಲ್ಲಿದ್ದರು ಎಂಬ ವಿಚಾರ ಹೊರಬರುತ್ತಿದ್ದಂತೆ ಮಾದಕ ವಸ್ತು ನಿಯಂತ್ರಣ ಬ್ಯೂರೋ ಅಧಿಕಾರಿಗಳು ತನಿಖೆ ಆರಂಭಿಸಿದ್ದರು. ನಿನ್ನೆ ಬೆಳಗ್ಗೆ ಅವರ ಮನೆ ಮೇಲೆ ದಾಳಿ ನಡೆಸಿದ್ದರು. ಜತೆಗೆ ರಿಯಾ ಸಹೋದರ ಶೋವಿಕ್ ಚಕ್ರವರ್ತಿ​ ಹಾಗೂ ಸುಶಾಂತ್​ ಸಿಂಗ್​​ ರಜಪೂತ್​ ಮ್ಯಾನೇಜರ್​​ ಸಾಮ್ಯುಯೆಲ್​​ ಮಿರಂಡಾ​ ವಿಚಾರಣೆ ನಡೆಸಿದ್ದರು. ಇದಾದ ಬಳಿಕ ತೀವ್ರ ವಿಚಾರಣೆ ನಡೆಸಿ ಅವರನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.

ನ್ಯಾಯಾಂಗ ಬಂಧನದಲ್ಲಿ ರಿಯಾ ಚಕ್ರವರ್ತಿ ಸಹೋದರ

ಸುಶಾಂತ್ ಸಿಂಗ್ ರಜಪೂತ್ ನಿಗೂಢ ಸಾವಿನ ಕುರಿತು ಎನ್‌ಸಿಪಿ ಎನ್‌ಡಿಪಿಎಸ್ (ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್) ಕಾಯ್ದೆಯ ಸೆಕ್ಷನ್ 20, 22, 27 ಮತ್ತು 29ರ ಅಡಿಯಲ್ಲಿ ರಿಯಾ ಚಕ್ರವರ್ತಿ, ಅವಳ ಸಹೋದರ ಶೊವಿಕ್​​ ಚಕ್ರವರ್ತಿ ಮತ್ತು ಇತರರ ವಿರುದ್ಧವೂ ಎನ್‌ಸಿಬಿ ಇತ್ತೀಚೆಗೆ ಪ್ರಕರಣ ದಾಖಲಿಸಿತ್ತು.

ನಟ ಸುಶಾಂತ್‌ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ನಂಟು ಹೊಂದಿರುವ ಮಾದಕ ದ್ರವ್ಯ ಹಗರಣಕ್ಕೆ ಸಂಬಂಧಿಸಿದಂತೆ ನಟಿ ರಿಯಾ ಚಕ್ರವರ್ತಿ ಸಹೋದರ ಶೊವಿಕ್‌ ಚಕ್ರವರ್ತಿ ಮತ್ತು ಸಾಮ್ಯುಯೆಲ್‌ ಮಿರಂಡಾ ಅವರನ್ನು ನ್ಯಾಷನಲ್‌ ನಾರ್ಕೊಟಿಕ್ಸ್‌ ಕಂಟ್ರೋಲ್‌ ಬ್ಯೂರೊ (ಎನ್‌ಸಿಬಿ) ಶುಕ್ರವಾರ ಬಂಧಿಸಿದೆ. ಇಬ್ಬರನ್ನೂ ಮುಂಬೈ ಶುಕ್ರವಾರ ವಿಚಾರಣೆಗೆ ಒಳಪಡಿಸಿದ ಬಳಿಕ ಬಂಧಿಸಲಾಗಿದೆ. ಇಂದು ಕೋರ್ಟ್​​​ಗೆ ಹಾಜರುಪಡಿಸಲಾಗಿದ್ದು, ಸೆಪ್ಟೆಂಬರ್​ 9ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.