ನವದೆಹಲಿ: ಮೆಹ್ರೌಲಿಯ ಆಪ್ ಶಾಸಕ ನರೇಶ್ ಯಾದವ್ ಅವರ ಬೆಂಗಾವಲು ವಾಹನದ ಮೇಲೆ ಗುಂಡು ಹಾರಿಸಲಾಗಿದ್ದು, ಘಟನೆಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ಈ ಸಂಬಂಧ FIR ದಾಖಲಾಗಿದೆ.
ಮೆಹ್ರೌಲಿಯ ಆಮ್ ಆದ್ಮಿ ಶಾಸಕ ದೇವಸ್ಥಾನದಿಂದ ಹಿಂದಿರುಗಿ ಬರುತ್ತಿದ್ದ ವೇಳೆ ಅವರ ಬೆಂಗಾವಲು ವಾಹನದ ಮೇಲೆ ದಾಳಿ ಮಾಡಲಾಗಿದ್ದು, ಗುಂಡು ತಗುಲಿ ಪಕ್ಷದ ಅಶೋಕ್ ಮಾನ್ ಎಂಬ ಕಾರ್ಯಕರ್ತ ಮೃತಪಟ್ಟಿದ್ದು, ಇನ್ನೋರ್ವನಿಗೆ ಗಾಯಗಳಾಗಿರುವುದಾಗಿ AAP ತನ್ನ ಅಧಿಕೃತ ಟ್ವಿಟರ್ನಲ್ಲಿ ತಿಳಿಸಿದೆ.
-
Naresh Yadav, AAP MLA: The incident is really unfortunate. I don't know the reason behind the attack but it happened all of a sudden. Around 4 rounds were fired. The vehicle I was in was attacked. I am sure if Police inquires properly they will be able to identify the assailant. https://t.co/M5mpJm7ljp pic.twitter.com/kzwbql6lmP
— ANI (@ANI) February 11, 2020 " class="align-text-top noRightClick twitterSection" data="
">Naresh Yadav, AAP MLA: The incident is really unfortunate. I don't know the reason behind the attack but it happened all of a sudden. Around 4 rounds were fired. The vehicle I was in was attacked. I am sure if Police inquires properly they will be able to identify the assailant. https://t.co/M5mpJm7ljp pic.twitter.com/kzwbql6lmP
— ANI (@ANI) February 11, 2020Naresh Yadav, AAP MLA: The incident is really unfortunate. I don't know the reason behind the attack but it happened all of a sudden. Around 4 rounds were fired. The vehicle I was in was attacked. I am sure if Police inquires properly they will be able to identify the assailant. https://t.co/M5mpJm7ljp pic.twitter.com/kzwbql6lmP
— ANI (@ANI) February 11, 2020
ಈ ಕುರಿತು ಪ್ರತಿಕ್ರಿಯೆ ನೀಡಿರುವ ಶಾಸಕ ನರೇಶ್ ಯಾದವ್, ಇದೊಂದು ದರದೃಷ್ಟಕರ ಸಂಗತಿ. ನಾನಿದ್ದ ವಾಹನಕ್ಕೆ ನಾಲ್ಕು ಬಾರಿ ಗುಂಡು ಹಾರಿಸಲಾಗಿದೆ. ಈ ದಾಳಿಯ ಹಿಂದಿನ ಕಾರಣ ನನಗೆ ಅರ್ಥವಾಗುತ್ತಿಲ್ಲ. ಪೊಲೀಸರು ಸರಿಯಾಗಿ ತನಿಖೆ ನಡೆಸಿದರೆ ದುಷ್ಕರ್ಮಿಗಳನ್ನು ಬೇಗ ಪತ್ತೆ ಹಚ್ಚಬಹುದು ಎಂದು ಘಟನೆಗೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಆಪ್ನ ನಾಯಕ ಸಂಜಯ್ ಸಿಂಗ್ ಕೂಡ ರಾಜಧಾನಿಯ ಕಾನೂನು ಸುವ್ಯವಸ್ಥೆಯನ್ನು ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.
ಮಂಗಳವಾರ ಹೊರಬಿದ್ದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ 70 ಸ್ಥಾನಗಳ ಪೈಕಿ 62 ಸ್ಥಾನಗಳನ್ನು ಪಡೆಯುವ ಮೂಲಕ AAP ಪಕ್ಷ ದೊಡ್ಡ ಮಟ್ಟದಲ್ಲಿ ಗೆಲುವು ಸಾಧಿಸಿದೆ.