ರಾಯ್ಪುರ(ಛತ್ತೀಸ್ಘಡ್): ಹುಲಿಗಳು ಮನುಷ್ಯರಿಗೆ, ಪ್ರಾಣಿಗಳಿಗೆ ಕಾಡುವವುದನ್ನು ನೋಡಿದ್ದೇವೆ, ಕೇಳಿದ್ದೇವೆ. ಆದ್ರೆ ಮನುಷ್ಯರೆ ಹುಲಿಗಳಿಗೆ ಹಿಂಸೆ ಕೊಟ್ಟು, ಅದನ್ನು ವಿಡಿಯೋ ಕೂಡ ಮಾಡಿದ್ದಾರೆ.
ಈ ರೀತಿ ಮೃಗೀಯವಾಗಿ ನಡೆದುಕೊಂಡಿರುವುದು ಯಾರೋ ಸಾಮಾನ್ಯ ಜನರನ್ನಲ್ಲ, ಬದಲಾಗಿ ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುವ ನೌಕರರು. ಛತ್ತೀಸ್ಘಡ್ ನಯಾ ರಾಯ್‌ಪುರದಲ್ಲಿರುವ ಜಂಗಲ್ ಸಫಾರಿಯಲ್ಲಿ ಮಾರ್ಗದರ್ಶಿಯಾಗಿ ಕೆಲಸ ನಿರ್ವವಹಿಸುವ ನವೀನ್ ಪುರಾಣ ಮತ್ತು ನರೇಂದ್ರ ಸಿನ್ಹಾ ಹಾಗೂ ವಾಹನ ಚಾಲಕನಾಗಿ ಕೆಲಸ ನಿರ್ವವಹಿಸುವ ಓಂಪ್ರಕಾಶ್ ಭಾರತಿ ಈ ರೀತಿ ವರ್ತಿಸಿರುವ ಆರೋಪಿಗಳು.
ಶುಕ್ರವಾರ ಈ ಮೂವರು ಜಂಗಲ್ ಸಫಾರಿಯಲ್ಲಿ ಪ್ರವಾಸಿಗರನ್ನು ಹವಾನಿಯಂತ್ರಣ ರಹಿತ ಬಸ್ಸಿನಲ್ಲಿ ಕರೆದೊಯ್ಯುವ ವೇಳೆ, ಬಸ್ಸಿನ ಗಾಜಿಗೆ ಜೋಡಿಸಲಾದ ಪರದೆ ರಸ್ತೆಯ ಮೇಲೆ ಬಿದ್ದಿದ್ದನ್ನು ಕಂಡ ಹುಲಿಗಳು, ಆ ಬಟ್ಟೆಯನ್ನು ತಮ್ಮ ದವಡೆಯಿಂದ ಹಿಡಿಯಲು ಪ್ರಯತ್ನಿಸುವಾಗ, ಆ ಹುಲಿಗಳು ಸಮಾಧಾದಿಂದ ಹೋಗುವವರೆಗೂ ಕಾಯದೇ, ಈ ಮೂರು ಜನ ನೌಕರರು ಕೂಗಾಡುತ್ತಾ ಹುಲಿಯನ್ನು ಕೆರಳಿಸಲು ಪ್ರಯತ್ನಿಸಿದ್ದಾರೆ. ಜೊತೆಗೆ ಅದನ್ನು ವಿಡಿಯೋ ಕೂಡ ಮಾಡಿದ್ದಾರೆ.
ಬಸ್ಸಿನಲ್ಲಿದ್ದ ನೌಕರರು ಮತ್ತು ಪ್ರವಾಸಿಗರ ಗದ್ದಲದಿಂದ ಹುಲಿಗಳು ಕೆಲ ಕಾಲ ಬಸ್ಸಿನ ಹಿಂದೆ ಓಡಿ ಬರುವುದರ ಜೊತೆಗೆ, ಎರಡು ಹುಲಿಗಳು ಪರಸ್ಪರ ದಾಳಿ ಕೂಡ ಮಾಡಿಕೊಂಡದ್ದನ್ನು ಚಿತ್ರೀಕರಿಸಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಅರಣ್ಯ ಇಲಾಖೆಯು ಜಂಗಲ್ ಸಫಾರಿಯ ಮೂವರು ದೈನಂದಿನ ಕೂಲಿ ಕಾರ್ಮಿಕರನ್ನು ಕೆಲಸದಲ್ಲಿನ ನಿರ್ಲಕ್ಷ್ಯದ ಆರೋಪದ ಮೇಲೆ ವಜಾ ಮಾಡಿದೆ.
ಮೂಲಗಳ ಪ್ರಕಾರ, ಜಂಗಲ್ ಸಫಾರಿ ಉದ್ಯೋಗಿಗಳಿಗೆ (ಮಾರ್ಗದರ್ಶಿ-ಚಾಲಕರು) ಇಂತಹ ಪರಿಸ್ಥಿತಿ ಎದುರಾದಾಗ ಹೇಗೆ ಕಾರ್ಯನಿರ್ವಹಿಸಬೇಕು ಎಂಬುದರ ಕುರಿತು ತರಬೇತಿ ನೀಡಲಾಗಿರುತ್ತೆ. ಆದಾಗ್ಯೂ ಕಾರ್ಮಿಕರು ಅಸಡ್ಡೆ ತೋರುವ ಜೊತೆಗೆ ವಿಡಿಯೋ ರೆಕಾರ್ಡಿಂಗ್ ಮಾಡಿರುವುದು ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.