ಭೋಪಾಲ್: ಮಧ್ಯಪ್ರದೇಶದಲ್ಲಿ ಕುತೂಹಲಕಾರಿ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ.
ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರ ಸಂಬಂಧಿ ಸಂಜಯ್ ಮಸಾನಿ ಅವರನ್ನ ರಾಜ್ಯ ಕಾಂಗ್ರೆಸ್ ಉಪಾಧ್ಯಕ್ಷರನ್ನಾಗಿ ರಾಜ್ಯ ಕಾಂಗ್ರೆಸ್ ಸಮಿತಿ ಬುಧವಾರ ನೇಮಕ ಮಾಡಿದೆ. ಮಸಾನಿ ತಮ್ಮ ಸೋದರ ಮಾವನ ವಿರುದ್ಧವೇ ದಂಗೆ ಎದ್ದಿದ್ದರು. 2018ರಲ್ಲಿ ವಾರಸೋನಿಯಿಂದ ಕಾಂಗ್ರೆಸ್ ಟಿಕೆಟ್‌ನಿಂದ ವಿಧಾನಸಭೆ ಚುನಾವಣೆ ಎದುರಿಸಿ ಸ್ವತಂತ್ರ ಅಭ್ಯರ್ಥಿ ವಿರುದ್ಧ ಪರಾಭವಗೊಂಡಿದ್ದರು.
ಇನ್ನು ಹರಸಾಹಸ ಮಾಡಿ ಅಧಿಕಾರ ಹಿಡಿದಿದ್ದ ಕಮಲನಾಥ್, ಮಸಾನಿ ವಿರುದ್ಧ ಗೆದ್ದಿದ್ದ ಸ್ವತಂತ್ರ ಶಾಸಕರ ಪ್ರದೀಪ್ ಜೈಸ್ವಾಲ್ ಅವರನ್ನ ಸಚಿವ ಸಂಪುಟಕ್ಕೆ ಸೇರಿಸಿಕೊಂಡು ಮಂತ್ರಿ ಮಾಡಿದ್ದರು. ಆದರೆ, ಜೈಸ್ವಾಲ್ ಕಮಲನಾಥ್ ಸರ್ಕಾರದ ವಿರುದ್ಧ ಬಂಡೆದ್ದಿದ್ದರು. ಬಳಿಕ ಜೈಸ್ವಾಲ್ ಶಿವರಾಜ್ ಸಿಂಗ್ ಚೌಹಾಣ್ ಅವರ ಆಡಳಿತದಲ್ಲಿ ರಾಜ್ಯ ಖನಿಜ ನಿಗಮದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಈ ನಡುವೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಪರಾಜಯವಾಗಿದ್ದ ಶಿವರಾಜ್ ಸಿಂಗ್ ಚೌಹಾಣ್ ಅವರ ಸೋದರ ಮಾವ ಸಂಜತ್ ಮಸಾನಿ ಅವರನ್ನ ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕಮಲನಾಥ್, ರಾಜ್ಯ ಕಾಂಗ್ರೆಸ್ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿದೆ. ಈಗ ಉಪ ಚುನಾವಣೆಯ ಪ್ರದೇಶ ಸಂಯೋಜಕರ ಜವಾಬ್ದಾರಿ ನೀಡಿ, ಸಿಎಂ ವಿರುದ್ಧ ಅಖಾಡಕ್ಕೆ ಇಳಿಸಿದೆ.