ETV Bharat / bharat

5ನೇ ತರಗತಿಗೇ ಬಾಲಕನ ಕುದುರೆ ಸವಾರಿ: ಪ್ರತಿದಿನ 'ರಾಜ'ನ ಮೇಲೇರಿ ಶಾಲೆಗೆ ಬರುತ್ತಾನೆ ಈ ಶಿವರಾಜ!

ಮಧ್ಯಪ್ರದೇಶದ ಖಂಡ್ವ ಜಿಲ್ಲೆಯ ಬೋರಾಡಿಮಲ್ ಗ್ರಾಮದ 5 ನೇ ತರಗತಿ ವಿದ್ಯಾರ್ಥಿ ಶಿವರಾಜ್ ಯಾದವ್ ಕುದುರೆ ಏರಿ ಪ್ರತಿದಿನ ಶಾಲೆಗೆ ಹೋಗುತ್ತಾನೆ.

Boradimal village
ಕುದುರೆ ಏರಿ ಶಾಲೆಗೆ ಬರುವ 5 ನೇ ತರಗತಿ ವಿದ್ಯಾರ್ಥಿ
author img

By

Published : Feb 9, 2021, 11:20 AM IST

Updated : Feb 9, 2021, 11:33 AM IST

ಖಂಡ್ವ/ಮಧ್ಯಪ್ರದೇಶ:5 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಖಂಡ್ವ ಜಿಲ್ಲೆಯ ಬೋರಾಡಿಮಲ್ ಗ್ರಾಮದ ಶಿವರಾಜ್ ಎಂಬ ವಿದ್ಯಾರ್ಥಿ ಪ್ರತಿದಿನ ಕುದುರೆ ಏರಿ ಶಾಲೆಗೆ ತೆರಳುತ್ತಾನೆ.

ಕುದುರೆ ಏರಿ ಶಾಲೆಗೆ ಬರುವ 5 ನೇ ತರಗತಿ ವಿದ್ಯಾರ್ಥಿ

ಈ ಹಿಂದೆ ಸೈಕಲ್​ನಿಂದ ಬಿದ್ದು ಶಿವರಾಜ್​ ಗಾಯಗೊಂಡಿದ್ದ. ಇದಾದ ಬಳಿಕ ಅಪಘಾತವನ್ನು ತಪ್ಪಿಸುವ ಉದ್ದೇಶದಿಂದ ಶಿವರಾಜ್​ ಈ ರೀತಿ ಕುದುರೆ ಸವಾರಿ ಮಾಡಿಕೊಂಡು ಶಾಲೆಗೆ ಹೋಗುತ್ತಾನಂತೆ.

ಕುದುರೆ ಸವಾರಿಯಿಂದ ಪೆಟ್ರೋಲ್​ ಮತ್ತು ಡೀಸೆಲ್ ಹಣ ಉಳಿಸಬಹುದು:

ಅಪಘಾತದ ಭಯ ಆವರಿಸಿರುವ ಕಾರಣ ನಾನು ಬೈಸಿಕಲ್ ಅಥವಾ ಇತರ ಯಾವುದೇ ವಾಹನದಲ್ಲಿ ಕುಳಿತುಕೊಳ್ಳುವುದಿಲ್ಲ ಎಂದು 12 ವರ್ಷದ ಶಿವರಾಜ್ ಹೇಳಿದ್ದಾನೆ. ಕುದುರೆ ಸವಾರಿ ವೇಳೆ ಯಾವುದೇ ಅಪಘಾತ ಸಂಭವಿಸುವುದಿಲ್ಲ. ಏಕೆಂದರೆ ಹಾದಿಯಲ್ಲಿ ಓಡುವಾಗ, ಕುದುರೆ ಸಂಭವನೀಯ ಅಪಘಾತವನ್ನು ಗ್ರಹಿಸುವ ಮೂಲಕ ತನ್ನ ಜೀವದ ಜೊತೆಗೆ ನನ್ನನ್ನೂ ಕಾಪಾಡುತ್ತದೆ. ಹಾಗೂ ಇದು ಪರಿಸರವನ್ನು ಸಹ ರಕ್ಷಿಸುತ್ತದೆ.

ಕುದುರೆಯಲ್ಲಿ ದಿನ ಒಂದೂವರೆ ಕಿ.ಮೀ. ಪ್ರಯಾಣ

ಶಿವರಾಜ್ ಯಾದವ್ ಕಿಡ್ಸ್ ಪಬ್ಲಿಕ್ ಶಾಲೆಯಲ್ಲಿ ಓದುತ್ತಿದ್ದು, ಇವರ ಮನೆಯಿಂದ ಶಾಲೆ ಒಂದೂವರೆ ಕಿಲೋಮೀಟರ್ ದೂರದಲ್ಲಿದೆ. ಲಾಕ್​ಡೌನ್​ ಬಳಿಕ ಶಾಲೆಗಳು ಆರಂಭವಾಗಿವೆ. ಆದರೆ ಶಾಲಾ ಬಸ್​ಗಳು ಬರುತ್ತಿಲ್ಲ. ಹೀಗಾಗಿ ನಾನು ಶಾಲೆಗೆ ದಿನವೂ ಕುದುರೆಯಲ್ಲಿ ಹೋಗುತ್ತಿದ್ದೇನೆ ಅಂತಾ ವಿದ್ಯಾರ್ಥಿ ಶಿವರಾಜ್​ ಹೇಳಿದ.

ಕುದುರೆಯೊಂದಿಗೆ ಶಿವರಾಜ್ ಸ್ನೇಹ:

ಈ ಆಧುನಿಕ ಯುಗದಲ್ಲಿ, ಬ್ಯಾಟರಿಗಳು ಮತ್ತು ಸೌರಶಕ್ತಿಯಿಂದ ಚಲಿಸುವ ದ್ವಿಚಕ್ರ ವಾಹನಗಳು ಲಭ್ಯವಿವೆ. ಆದರೂ ಶಿವರಾಜ್​ಗೆ ಕುದುರೆ ಏರಿ ಬರುವುದೇ ಇಷ್ಟ ಆಗಿದ್ದರಿಂದ 'ಕುದುರೆಗೆ ರಾಜ' ಎಂದು ಹೆಸರಿಟ್ಟಿರುವ ಶಿವರಾಜ್​ ಅದರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡಿದ್ದಾನೆ.

Last Updated : Feb 9, 2021, 11:33 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.