ಮುಂಬೈ: ವಾಸ್ತು ಸರಿಯಿಲ್ಲ ಅಂತ ಶಿವಸೇನೆ ಮುಖಂಡರೊಬ್ಬರು ಲಾಟರಿ ಮೂಲಕ ಗೆದ್ದಿದ್ದ 5.80 ಬೆಲೆಯ ಪ್ಲ್ಯಾಟ್‌ವೊಂದನ್ನ ವಾಪಸ್ ಕೊಟ್ಟಿರುವ ಘಟನೆ ಮುಂಬೈನಲ್ಲಿ ನಡೆದಿದೆ.
ಮನೆಗೆ ಬಂದು ಲಕ್ಷ್ಮಿ ಕಾಲು ಮುರಿದುಕೊಂಡು ಅಲ್ಲೇ ಇರ್ತೇನಿ ಅಂದ್ರೇ, ಬೇಡಮ್ಮಾ ನೀನು ವಾಪಸ್ ಹೋಗ್ಬಿಡು ಅಂದಿದ್ನಂತೆ. ಜಾಕ್‌ಪಾಟ್ ಹೊಡೆದು ಲಾಟರಿಯಲ್ಲಿ ಪ್ಲ್ಯಾಟ್ ಪಡೆದಿದ್ದ ಶಿವಸೇನೆ ಮುಖಂಡನೊಬ್ಬ, ಅದರ ವಾಸ್ತು ಸರಿಯಿಲ್ಲ ಅಂತಾ ಬಂದ ಲಕ್ಷ್ಮಿಯನ್ನೇ ನಿರಾಕರಿಸಿದ ಅಚ್ಚರಿಯ ಘಟನೆ ಮುಂಬೈನಲ್ಲಿ ನಡೆದಿದೆ.
ವಿನೋದ್ ಶಿರ್ಕೆ ಎಂಬ ಶಿವಸೇನೆಯ ಶಾಖಾ ಮುಖ್ಯಸ್ಥ ಲಾಟರಿಯಲ್ಲಿ ಬಂದ 5.8 ಕೋಟಿಯ ಪ್ಲ್ಯಾಟ್‌ನ ಹತ್ತಿರವೂ ಸುಳಿದಿಲ್ಲ. 2018ರಲ್ಲಿ ₹ 4.99 ಕೋಟಿ ಮತ್ತು ₹ 5.80 ಕೋಟಿ ಬೆಲೆಯ 2 ಪ್ಲ್ಯಾಟ್ ಲಾಟರಿಯಲ್ಲಿ ಗೆದ್ದಿದ್ದರು ವಿನೋದ್. ಮಹಾರಾಷ್ಟ್ರ ಹೌಸಿಂಗ್ ಮತ್ತು ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (MHADA) ಇತಿಹಾಸದಲ್ಲಿ ಇಷ್ಟೊಂದು ಬೆಲೆಯ ಫ್ಲ್ಯಾಟ್‌ನ ಮಾರಾಟ ಮಾಡಿರಲಿಲ್ಲ. ಆದರೆ, ಈ ಕೋಟ್ಯಂತರ ಬೆಲೆಬಾಳುವ ಪ್ಲ್ಯಾಟ್‌ನ ವಾಸ್ತು ಸರಿಯಿಲ್ಲ ಅನ್ನೋ ಕಾರಣಕ್ಕೆ ವಿನೋದ್ ಅದರ ಹತ್ತಿರವೂ ಸುಳಿದಿಲ್ಲ ಅಂತಾ ಬೃಹನ್ ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು ಹೇಳಿದ್ದಾರೆ.
'ಆ ದೊಡ್ಡ ಬಿಲ್ಡಿಂಗ್‌ನಲ್ಲಿ 2 ಫ್ಲ್ಯಾಟ್‌ನ ಲಾಟರಿ ಮೂಲಕ ಗೆದ್ದಿರುವೆ. MHADA ಮಾರ್ಗಸೂಚಿ ಅನುಸಾರ ಒಂದು ಪ್ಲ್ಯಾಟ್ ಮಾತ್ರ ಇರಿಸಿಕೊಳ್ಳಬೇಕಿತ್ತು. ಆದರೆ, ವಾಸ್ತುತಜ್ಞರ ಸಲಹೆ ಮೇರೆಗೆ ಅತೀ ಹೆಚ್ಚು ಬೆಲೆಯ ₹ 5.80 ಕೋಟಿಯ ಪ್ಲ್ಯಾಟ್‌ನಲ್ಲಿ ಇರಲು ನಾನು ಒಪ್ಪಿಲ್ಲ. ಆ ಪ್ಲ್ಯಾಟ್‌ನಲ್ಲಿ ಇರಬೇಕಿದ್ರೇ, ಒಂದಿಷ್ಟು ನವೀಕರಣ ಮಾಡಬೇಕು.
ಇದರಿಂದಾಗಿ ನನ್ನ ಸಾಮಾಜಿಕ ಮತ್ತು ರಾಜಕೀಯ ಜೀವನ ಏಳ್ಗೆಯಾಗುತ್ತೆ ಅಂತಾ ವಾಸ್ತುತಜ್ಞರು ನನಗೆ ಭವಿಷ್ಯ ನುಡಿದಿದ್ದರು. ಆದರೆ, ಪ್ಲ್ಯಾಟ್‌ನ ನವೀಕರಣ ಇಲ್ಲ ವಿರೂಪಗೊಳಿಸುವಂತಿರಲಿಲ್ಲ. ಹಾಗಾಗಿ ₹ 5.80 ಕೋಟಿ ಬೆಲೆಯ ಪ್ಲ್ಯಾಟ್‌ನ ಬಿಟ್ಟುಕೊಟ್ಟಿರುವೆ. ಅದರ ಬದಲು ಕಡಿಮೆ ₹4.99 ಕೋಟಿ ಬೆಲೆಯ ಇನ್ನೊಂದು ಪ್ಲ್ಯಾಟ್‌ನ ಪಡೆದಿರುವೆ. ಹೆಚ್ಚು ಬೆಲೆಬಾಳುವ ಪ್ಲ್ಯಾಟ್‌ನ ಬಿಟ್ಟುಕೊಟ್ಟಿರುವೆ ಅಂತ ವಿನೋದ್ ಶಿರ್ಕೆ ಹೇಳಿದ್ದಾರೆ. ಈಗ ವಾಸ್ತು ಸರಿಯಿಲ್ಲ ಅಂತ ಬಿಟ್ಟಿರುವ ಪ್ಲ್ಯಾಟ್‌ನ ವೇಟಿಂಗ್ ಲಿಸ್ಟ್‌ನಲ್ಲಿರುವವರಿಗೆ ಹಂಚಿಕೆ ಮಾಡಲು MHADA ಅಧಿಕಾರಿಗಳು ಮುಂದಾಗಿದ್ದಾರೆ.