ಮುಂಬೈ: ಮಹಾರಾಷ್ಟ್ರದ ಬಾಂದ್ರಾ ರೈಲ್ವೇ ಸ್ಟೇಷನ್ 130 ವರ್ಷ ಪೂರೈಸಿದೆ. ಇದೀಗ ಸ್ಟೇಷನ್ ನವೀಕರಣಗೊಂಡಿದ್ದು, ಇದರ ಸವಿನೆನಪಿಗಾಗಿ ಹೊಸ ಪೋಸ್ಟ್ ಕವರ್ ಒಂದನ್ನು ಲೋಕಾರ್ಪಣೆಗೊಳಿಸಲಾಗಿದೆ.
ಬಾಲಿವುಡ್ ನಟ ಶಾರುಖ್ ಖಾನ್ ನವೀಕೃತ ಸ್ಟೇಷನ್ನ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ವಿಶೇಷ ಪೋಸ್ಟ್ ಕವರ್ ಅನಾವರಣಗೊಳಿಸಿದರು.
![srk](https://etvbharatimages.akamaized.net/etvbharat/prod-images/4228133_medjpg.jpg)
ತಮ್ಮ ನೆಚ್ಚಿನ ನಟ ರೈಲ್ವೇ ಸ್ಟೇಷನ್ಗೆ ಬರುತ್ತಾರೆಂದು ತಿಳಿದ ಅಸಂಖ್ಯಾತ ಶಾರುಖ್ ಖಾನ್ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಸೇರಿದ್ದರು. ಪೋಸ್ಟ್ ಕವರ್ ಅನಾವರಣಗೊಳಿಸಿದ ನಟ, ಜನರಲ್ಲಿ ಅದನ್ನು ಉಪಯೋಗಸುವಂತೆ ಮನವಿ ಮಾಡಿದರು.
ಸಚಿವ ಆಶಿಶ್ ಶೇಲರ್, ಮಹಾರಾಷ್ಟ್ರದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಹೆಚ್ ಸಿ ಅಗರ್ವಾಲ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಬಾಂದ್ರಾ ರೈಲ್ವೇ ಸ್ಟೇಷನ್ನ ಪ್ಲಾಟ್ಫಾರ್ಮ್ ನಂಬರ್ 1ರಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.