ಮುಂಬೈ: ಚಂದ್ರಯಾನ- 2 ಉಡ್ಡಯನ ಮಾಡಿ ಸದ್ದು ಮಾಡ್ತಿರೋ ಇಸ್ರೋ ಇಂದು ವಾಲ್ಚಂದ್ನಗರ್ ಇಂಡಸ್ಟ್ರಿ ಜತೆ ಒಪ್ಪಂದ ಮಾಡಿಕೊಂಡಿದೆ. ಈ ಪರಿಣಾಮ ಷೇರು ಪೇಟೆಯಲ್ಲಿ ವಾಲ್ಚಂದ್ನಗರ್ ಕಂಪನಿ ಷೇರು ಬೆಲೆ ಆಕಾಶದೆತ್ತರಕ್ಕೆ ಏರಿಕೆ ಕಂಡಿದೆ.
ಕಳೆದ ಐದು ದಿನಗಳಿಂದ WIL ಕಂಪನಿ ಷೇರು ಬೆಲೆಯಲ್ಲಿ ಶೇ.22ರಷ್ಟು ಏರಿಕೆಯಾಗಿದೆ. ವಿಕ್ರಮ್ ಸಾರಾಬಾಯಿ ಬಾಹ್ಯಾಕಾಶ ಕೇಂದ್ರ ತಿರುವನಂತಪುರಂ 72 ಕೋಟಿ ರೂ ಒಪ್ಪಂದ ಮಾಡಿ ಕೊಂಡಿದೆ.
ಮಿಡಲ್ ಹಾಗೂ ನಾಜೆಲ್ಗಳ ಸರಬರಾಜಿಗೆ ಇಸ್ರೋ ಆರ್ಡರ್ ಮಾಡಿದೆ. ಇವುಗಳನ್ನ ಜಿಎಸ್ಎಲ್ವಿ ಮ್ಯಾಕ್ 3ಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಈ ಬಗ್ಗೆ ಕಂಪನಿ ಪ್ರಧಾನ ನಿರ್ದೇಶಕ ಜಿ.ಕೆ. ಪಿಳ್ಳೈ ಮಾತನಾಡಿ, ಇದು ಕಂಪನಿಯ ಎರಡನೇ ಅತಿದೊಡ್ಡ ಆರ್ಡರ್ ಆಗಿದೆ ಎಂದು ತಿಳಿಸಿದ್ದಾರೆ. 1973ರರಿಂದಲೂ ಡಬ್ಲ್ಯುಐಎಲ್ ಕಂಪನಿಯೊಂದಿಗೆ ಇಸ್ರೋ ಒಪ್ಪಂದಗಳನ್ನು ಮಾಡಿಕೊಳ್ಳುತ್ತಲೇ ಬಂದಿದೆ.