ETV Bharat / bharat

ಸಮಯಕ್ಕೆ ಸರಿಯಾಗಿ ಸಿಗದ ಚಿಕಿತ್ಸೆ: ಡೆಡ್ಲಿ ವೈರಸ್​ಗೆ 8 ತಿಂಗಳ ಗರ್ಭಿಣಿ ಬಲಿ - ಗರ್ಭಿಣಿ ಸಾವು

ಸೂಕ್ತ ಸಮಯದಲ್ಲಿ ಕೊರೊನಾ ವೈರಸ್​ಗೆ ಸರಿಯಾದ ಚಿಕಿತ್ಸೆ ಸಿಗದ ಕಾರಣ 8 ತಿಂಗಳ ಗರ್ಭಿಣಿ ಸಾವನ್ನಪ್ಪಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

8 months pregnant corona positive
8 months pregnant corona positive
author img

By

Published : Jun 10, 2020, 7:27 PM IST

ಶಹದಾರ್​(ನವದೆಹಲಿ): ಮಹಾಮಾರಿ ಕೊರೊನಾ ವೈರಸ್​​ನಿಂದ 8 ತಿಂಗಳ ಗರ್ಭಿಣಿಯೊಬ್ಬರು ಸಾವನ್ನಪ್ಪಿರುವ ಘಟನೆ ರಾಷ್ಟ್ರರಾಜಧಾನಿ ದೆಹಲಿಯ ಶಹದಾರ್​​ನಲ್ಲಿ ನಡೆದಿದೆ. ಸಮಯಕ್ಕೆ ಸರಿಯಾದ ಚಿಕಿತ್ಸೆ ಸಿಗದ ಕಾರಣ ಹೆಂಡತಿ ಸಾವನ್ನಪ್ಪಿದ್ದಾಳೆಂದು ಆಕೆಯ ಪತಿ ಆರೋಪಿಸಿದ್ದಾರೆ.

ಮೇ. 28ರಂದು ಮೋನಿಕಾ ಎಂಬುವ ಮಹಿಳೆ ಟೈಫಾಯಿಡ್​​ನಿಂದ ಬಳಲುತ್ತಿದ್ದಳು. ಅವರ ದೇಹದಲ್ಲಿ ಹಿಮೋಗ್ಲೋಬಿನ್​ ಕೂಡ ಕಡಿಮೆಯಿತು. ಈ ವೇಳೆ ಆಕೆ 8 ತಿಂಗಳ ಗರ್ಭಿಣಿಯಾಗಿದ್ದು, ಗಾಜಿಯಾಬಾದ್​ನ ಯಶೋಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ವೈದ್ಯರ ಸಲಹೆ ಮೇರೆಗೆ ಕೊರೊನಾ ಪರೀಕ್ಷೆ ಮಾಡಿದಾಗ ವರದಿ ಪಾಸಿಟಿವ್​ ಬಂದಿದೆ.

ಈ ವೇಳೆ ವೈದ್ಯರು ನಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲ್ಲ. ನೀವು ಬೇರೆ ಆಸ್ಪತ್ರೆಗೆ ಹೋಗಬೇಕು ಎಂದಿದ್ದಾರೆ. ಈ ವೇಳೆ ದೆಹಲಿ ಸರ್ಕಾರ ನೀಡಿದ್ದ ಆಸ್ಪತ್ರೆಗಳಿಗೆ ಕರೆ ಮಾಡಲಾಗಿದ್ದು, ಎಲ್ಲ ಆಸ್ಪತ್ರೆ ಪ್ರವೇಶ ನಿರಾಕರಿಸಿವೆ ಎಂದು ಮೃತಳ ಪತಿ ತಿಳಿಸಿದ್ದಾರೆ.

ಮೇ.30ರಂದು ರಾತ್ರಿ 1 ಗಂಟೆಗೆ ಗುರು ತೇಜ್​ ಬಹದ್ದೂರ್​ ಆಸ್ಪತ್ರೆಗೆ ತೆರಳಿದ್ದು, ಇಲ್ಲಿ ಮತ್ತೊಮ್ಮೆ ಕೊರೊನಾ ಟೆಸ್ಟ್​ ಮಾಡಿಸಲಾಗಿದೆ. ಇದೇ ವೇಳೆ ಅಲ್ಲಿನ ವೈದ್ಯರು ನಮ್ಮಲ್ಲಿ ಹಾಸಿಗೆ ವ್ಯವಸ್ಥೆ ಇಲ್ಲ ಬೇರೊಂದು ಆಸ್ಪತ್ರೆಗೆ ಕರೆದೊಯ್ಯುವಂತೆ ತಿಳಿಸಿದ್ದಾರೆ. ಹೀಗಾಗಿ ಬೇರೆ ಹಾದಿ ಕಾಣದೇ ರಾತ್ರಿ 3.30ಕ್ಕೆ ಮನೆಗೆ ಕರೆದುಕೊಂಡು ಹೋಗಬೇಕಾಯಿತು.

ಇದಾದ ನಂತರ ಜೂನ್​ 2ರಂದು ಮ್ಯಾಕ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದ್ದು, ಆಕೆಗೆ ಅಲ್ಲೂ ಸರಿಯಾದ ಚಿಕಿತ್ಸೆ ನೀಡಿಲ್ಲ ಎಂಬ ಆರೋಪ ಕೇಳಿ ಬಂದಿದ್ದು, ಒಳಗಡೆ ಬೇರೆ ಯಾರಿಗೂ ಹೋಗಲು ಬಿಡದ ಕಾರಣ ಆರೋಗ್ಯ ಮತ್ತಷ್ಟು ಹದಗೆಟ್ಟಿದ್ದು, ಜೂನ್​ 4ರಂದು ಸಾವನ್ನಪ್ಪಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.