ದೆಹಲಿ: ದೇಶದಲ್ಲಿ ಲಿಂಗಾನುಪಾತ ಕುಸಿತದತ್ತ ಸಾಗುತ್ತಿದ್ದು ಆತಂಕಕ್ಕೆ ಕಾರಣವಾಗಿದೆ. ಇತ್ತೀಚೆಗಿನ ಅಧ್ಯಯನವೊಂದರ ಪ್ರಕಾರ, ಪ್ರತಿ 1,000 ಗಂಡು ಮಕ್ಕಳಿಗೆ ಕೇವಲ 896 ಹೆಣ್ಣು ಮಕ್ಕಳ ಜನನವಾಗುತ್ತಿದೆ. ಅಲ್ಲದೇ ದೇಶದಲ್ಲಿ ಮೂರು ವರ್ಷಗಳ ಅವಧಿಯಲ್ಲಿ ಸುಮಾರು 117 ಲಕ್ಷ ಬಾಲಕಿಯರು ಕಾಣೆಯಾಗಿದ್ದಾರೆ. ಇನ್ನೊಂದೆಡೆ ಫಲವತ್ತತೆಯ ಪ್ರಮಾಣದಲ್ಲಿ ಪ್ರಗತಿ ಕಂಡುಬಂದಿದೆ.
ದೇಶದ ಐದು ದೊಡ್ಡ ರಾಜ್ಯಗಳಾದ ಉತ್ತರ ಪ್ರದೇಶ, ರಾಜಸ್ಥಾನ, ಬಿಹಾರ, ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲಿ ಹೆಣ್ಣು ಮಕ್ಕಳು ಕಾಣೆಯಾಗುತ್ತಿರುವ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿದೆ. ಈ ಬೆಳವಣಿಗೆಯೂ ಲಿಂಗಾನುಪಾತ ಕುಸಿಯಲು ಕಾರಣವಾಗಿದೆ.
ಕಳೆದ ಮೂರು ವರ್ಷಗಳಲ್ಲಿ ಉತ್ತರ ಪ್ರದೇಶದಲ್ಲಿ ಸುಮಾರು 34.5 ಲಕ್ಷ ಬಾಲಕಿಯರು ಕಾಣೆಯಾಗಿದ್ದರೆ, ರಾಜಸ್ಥಾನದಲ್ಲಿ 14 ಲಕ್ಷ, ಬಿಹಾರದಲ್ಲಿ 11.6 ಲಕ್ಷ ಮತ್ತು ಬಿಹಾರದಲ್ಲಿ ಸುಮಾರು 11.6 ಲಕ್ಷ ಮತ್ತು ಗುಜರಾತ್, ಮಹಾರಾಷ್ಟ್ರದಲ್ಲಿ ತಲಾ 10 ಲಕ್ಷ ಬಾಲಕಿಯರು ಕಾಣೆಯಾಗಿದ್ದಾರೆ.
ಇನ್ನು, ಭಾರತದ ಒಟ್ಟು ಫಲವತ್ತತೆಯ ದರ 2013 ರಲ್ಲಿ 2.3 ರಲ್ಲಿ ಇದ್ದು, 2017 ರಲ್ಲಿ 2.2 ಕ್ಕೆ ಇಳಿದಿದೆ. ಇದು ಜನಸಂಖ್ಯೆ ನಿಯಂತ್ರಣ ವಿಚಾರದಲ್ಲಿ ಆಶಾದಾಯಕ ಬೆಳವಣಿಗೆಯಾಗಿದೆ.
ಲಿಂಗಾನುಪಾತ ಕುಸಿಯಲು ಕಾರಣವೇನು?
- ಸಣ್ಣ ಕುಟುಂಬಗಳನ್ನು ಬಯಸುವ ಜನರು, ಗಂಡು ಮಕ್ಕಳಿಗೆ ಆದ್ಯತೆ ನೀಡುತ್ತಾರೆ.
- ಭ್ರೂಣದಲ್ಲೇ ಲಿಂಗ ಪರೀಕ್ಷೆ ಮಾಡುವಂಥ ವೈದ್ಯಕೀಯ ಸಾಧನಗಳನ್ನು ಅಕ್ರಮವಾಗಿ ಬಳಸುತ್ತಿರುವುದು.
- ಹೆಣ್ಣು ಮಕ್ಕಳೆಂದರೆ ಹೊರೆ ಎಂಬ ಮನೋಭಾವ