ETV Bharat / bharat

72 ವರ್ಷದ ವೃದ್ಧ ಸೇರಿ ಅನೇಕರಿಂದ ಅಪ್ರಾಪ್ತೆ ಮೇಲೆ ನಿರಂತರ ರೇಪ್​, ಗರ್ಭಿಣಿ! - ಅಪ್ರಾಪ್ತೆ ಮೇಲೆ ಯುಪಿಯಲ್ಲಿ ಗ್ಯಾಂಗ್​ರೇಪ್​

72 ವರ್ಷದ ಕಾಮುಕ ಸೇರಿದಂತೆ ಅಪ್ರಾಪ್ತೆ ಮೇಲೆ ಅನೇಕರು ನಿರಂತರವಾಗಿ ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

minor rape
minor rape
author img

By

Published : Oct 3, 2020, 8:12 PM IST

ಬುಲಂದ್​ಶಹರ್​​​(ಉತ್ತರ ಪ್ರದೇಶ): 16 ವರ್ಷದ ಅಪ್ರಾಪ್ತೆ ಮೇಲೆ 72 ವರ್ಷದ ವೃದ್ಧ ಸೇರಿದಂತೆ ಅನೇಕರು ಕಳೆದ ಕೆಲ ತಿಂಗಳಿಂದ ನಿರಂತರವಾಗಿ ಅತ್ಯಾಚಾರವೆಸಗಿದ್ದು, ಇದೀಗ ಆಕೆ ನಾಲ್ಕು ತಿಂಗಳ ಗರ್ಭಿಣಿ ಎಂಬುದು ಬಹಿರಂಗಗೊಂಡಿದೆ.

ಅಪ್ರಾಪ್ತೆ ಮೇಲೆ ನಿರಂತರ ರೇಪ್​, ಗರ್ಭಿಣಿ

ಉತ್ತರ ಪ್ರದೇಶದ ಬುಲಂದ್​ಶಹರ್​ನ ಕಾಕೂಡಾದಲ್ಲಿ ಈ ಘಟನೆ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಇಬ್ಬರ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಬಾಲಕಿ ಕಳೆದ ಒಂದೂವರೆ ವರ್ಷದಿಂದ ತನ್ನ ಮೇಲೆ ನಿರಂತರವಾಗಿ ದುಷ್ಕೃತ್ಯ ಎಸಗಲಾಗಿದೆ ಎಂದು ತಿಳಿಸಿದ್ದಾಳೆ.

ಆಕೆಯ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದ್ದು, ಆಸ್ಪತ್ರೆಗೆ ಕರೆದುಕೊಂಡು ಹೋಗಿ ತಪಾಸಣೆಗೊಳಪಡಿಸಿದಾಗ ಗರ್ಭಿಣಿ ಇರುವ ಮಾಹಿತಿ ಬಹಿರಂಗಗೊಂಡಿದೆ. ಇನ್ನು ತನ್ನ ಮೇಲಿನ ದುಷ್ಕೃತ್ಯದ ಬಗ್ಗೆ ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎಂದು ಹೇಳಿಕೊಂಡಿದ್ದಾಳೆ. ಇದೀಗ ಭಾರತೀಯ ದಂಡ ಸಹಿತೆಯ ವಿವಿಧ ಸೆಕ್ಷನ್​ಗಳ ಅಡಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.