ಮುಂಬೈ: ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರು ಆರ್ಥಿಕ ಬಲದ ಪರಿಣಾಮ ಇಂದು ಮುಂಬೈ ಷೇರುಮಾರುಕಟ್ಟೆಯಲ್ಲಿ ಗೂಳಿ ಓಟ ಮುಂದುವರೆದಿದೆ.
ಸೆನ್ಸೆಕ್ಸ್ 1 ಸಾವಿರದ 100 ಅಂಕಗಳ ಜಿಗಿತ ಕಂಡು 31,711 ರಲ್ಲಿ ವಹಿವಾಟು ಆರಂಭಿಸಿತು. ರಾಷ್ಟ್ರೀಯ ಸಂವೇದಿ ಸೂಚ್ಯಂಕ ನಿಫ್ಟಿ ಕೂಡ 290 ಅಂಕಗಳ ಏರಿಕೆ ಕಂಡು 9,283ರಲ್ಲಿ ವಹಿವಾಟು ನಡೆಸುತ್ತಿದೆ. ಹೆಚ್‌ಡಿಎಫ್‌ಸಿ, ರಿಲಯನ್ಸ್ ಇಂಡಸ್ಟ್ರಿ, ಐಸಿಐಸಿಐ ಬ್ಯಾಂಕ್ ಮತ್ತು ಟಿಸಿಎಸ್ ಕಂಪನಿಯ ಷೇರುಗಳು ದಾಖಲೆಯ ಗಳಿಕೆ ಕಂಡವು. ಟಿಸಿಎಂ ಕಂಪನಿ ಅತಿ ಹೆಚ್ಚು ಅಂದರೆ ಶೇಕಡಾ 7 ರಷ್ಟು ಗಳಿಕೆ ಕಂಡಿತು.