ಧನ್ಬಾದ್: ಜೆಎಂಎಂ ಹಿರಿಯ ಮುಖಂಡ ಶಂಕರ್ ರವಾನಿ ಮತ್ತು ಅವರ ಪತ್ನಿಯನ್ನು ಜಾರ್ಖಂಡ್‌ನ ನಿವಾಸದಲ್ಲಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರವಾನಿ ಮತ್ತು ಅವರ ಪತ್ನಿ ಬಾಲಿಕಾ ದೇವಿ ಅವರನ್ನು ಧನ್ಬಾದ್ ನಗರದ ಭೋವಾರೇರಿಯಾದಲ್ಲಿರುವ ಅವರ ಮನೆಯಲ್ಲಿ ಗುಂಡಿಕ್ಕಿ ಕೊಂದಿರುವ ಶಂಖೆ ಇದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರಾಮ್ ಕುಮಾರ್ ತಿಳಿಸಿದ್ದಾರೆ.
ಬೆಡ್ ರೂಮ್ನಲ್ಲಿ ಮೃತದೇಹಗಳು ಪತ್ತೆಯಾಗಿದ್ದು, 9 ಎಂಎಂ ಪಿಸ್ತೂಲ್ ಮತ್ತು ಚಾಕುವನ್ನು ವಶಪಡಿಸಿಕೊಳ್ಳಲಾಗಿದೆ. ಕೊಲೆಗಾರನನ್ನು ಬಂಧಿಸಲು ಶೋಧ ಕಾರ್ಯ ಪ್ರಾರಂಭಿಸಲಾಗಿದೆ.