ಚೈಬಾಸಾ (ಜಾರ್ಖಂಡ್): ಇಲ್ಲಿನ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯಲ್ಲಿ ಭದ್ರತಾ ಪಡೆ ಮತ್ತು ನಕ್ಸಲರ ನಡುವೆ ಎನ್‌ಕೌಂಟರ್ ನಡೆದಿದ್ದು, ಶೋಧ ಕಾರ್ಯಾಚರಣೆ ಮುಂದುವರೆದಿದೆ.
ಹಲವಾರು ಸುತ್ತಿನ ಗುಂಡಿನ ಚಕಮಕಿ ಬಳಿಕ ನಕ್ಸಲರು ಅರಣ್ಯದೊಳಗೆ ಅಡಗಿದ್ದಾರೆ. ರಾಂಚಿಯಿಂದ ಹೆಚ್ಚುವರಿ ಪೊಲೀಸ್ ಪಡೆ ಎನ್‌ಕೌಂಟರ್ ನಡೆದ ಸ್ಥಳ ತಲುಪಿದೆ. ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಮುಂದುವರೆಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಚಕ್ರಧರಪುರದ ಉಪ ವಿಭಾಗೀಯ ಪೊಲೀಸ್ ಅಧಿಕಾರಿ ನಾಥು ಸಿಂಗ್ ಮೀನಾ ನೇತೃತ್ವದ ಪೊಲೀಸ್ ಪಡೆ ನಕ್ಸಲರನ್ನು ಹೆಡೆಮುರಿ ಕಟ್ಟಲು ಸಿದ್ಧವಾಗಿದೆ ಎಂದು ಕೊಲ್ಹಾನ್ ಶ್ರೇಣಿಯ ಉಪ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ (ಡಿಐಜಿ) ರಾಜೀವ್ ರಂಜನ್ ಸಿಂಗ್ ತಿಳಿಸಿದ್ದಾರೆ.